‘ಭ್ರಷ್ಟಾಚಾರ, ಸಾಕ್ಷಿ ನಾಶ, ಹಸ್ತಕ್ಷೇಪ ಮಾಡುವುದೆಲ್ಲ ‘ಹಸ್ತ’ ಗುರುತಿನ ಪಕ್ಷದವರ ಕಲೆ’

ಕಳ್ಳರು ಮೌನವಾಗಿರುತ್ತಾರೆ’ ಎಂಬ ಮಾತಿನಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವರ್ತಿಸುತ್ತಿರುವುದೇಕೆ? ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು.

Written by - Zee Kannada News Desk | Last Updated : Apr 26, 2022, 07:05 PM IST
  • ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಸಂಬಂಧ ಆರೋಪಿ ಬಂಧಿಸಲಾಗಿದೆ
  • ವಿಚಾರಣೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಬದ್ಧರಾಗಿದ್ದೇವೆ
  • ತಿಹಾರ್ ಜೈಲೂಟ ಉಂಡವರು ತಂತ್ರ-ಕುತಂತ್ರದಿಂದ ಸರ್ಕಾರಕ್ಕೆ ಮಸಿ ಬಳಿಯಬಹುದೆಂಬ ಭ್ರಮೆಯಲ್ಲಿದ್ದಾರೆ
‘ಭ್ರಷ್ಟಾಚಾರ, ಸಾಕ್ಷಿ ನಾಶ, ಹಸ್ತಕ್ಷೇಪ ಮಾಡುವುದೆಲ್ಲ ‘ಹಸ್ತ’ ಗುರುತಿನ ಪಕ್ಷದವರ ಕಲೆ’ title=
ಕಾಂಗ್ರೆಸ್ಗೆ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿರುಗೇಟು

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿಚಾರವಾಗಿ ಕಾಂಗ್ರೆಸ್ ಆರೋಪಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಬರುತ್ತಿದ್ದಂತೆಯೇ ತನಿಖೆ ಆರಂಭಿಸಿ, ಆರೋಪಿಯೊಬ್ಬರನ್ನೂ ಬಂಧಿಸಲಾಗಿದೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗ ಹಸ್ತಕ್ಷೇಪ ಮಾಡದೇ, ವಿಚಾರಣೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

‘ಭ್ರಷ್ಟಾಚಾರ, ಸಾಕ್ಷಿ ನಾಶ, ಹಸ್ತಕ್ಷೇಪ ಮಾಡುವುದೆಲ್ಲ 'ಹಸ್ತ'ದ ಗುರುತಿನ ಪಕ್ಷದವರ ಕಲೆಯೇ ಹೊರತು ಬಿಜೆಪಿಯದ್ದಲ್ಲ. ತಿಹಾರ್‌ ಜೈಲೂಟ ಉಂಡುಬಂದವರೊಬ್ಬರು ಟೂಲ್‌ಕಿಟ್‌ ಪಾಲಿಟಿಕ್ಸ್‌ ಹಾಗೂ ತಂತ್ರ-ಕುತಂತ್ರದ ಮೂಲಕವೇ ಸರ್ಕಾರಕ್ಕೆ ಮಸಿ ಬಳಿಯಬಹುದೆಂಬ ಭ್ರಮೆಯಲ್ಲಿರುವಂತೆ ಕಾಣುತ್ತದೆ’ ಎಂದು ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: PSI Recruitment Scam: ಆರೋಪಿ ದಿವ್ಯಾ ಹಾಗರಗಿ ಜೊತೆ ಡಿಕೆಶಿ ಫೋಟೋ ವೈರಲ್

ಭ್ರಷ್ಟಾಚಾರ ಹಾಗೂ ಬಿಜೆಪಿ, ರಕ್ತಸಂಬಂಧಿಗಳು!: ಕಾಂಗ್ರೆಸ್

 ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಕೇವಲ ಒಬ್ಬರ ಬಂಧನವಾಗಿದೆ, ಈ ಅಕ್ರಮ ಒಬ್ಬರಿಂದಾಗಿದ್ದಲ್ಲ, ವ್ಯವಸ್ಥಿತ ಜಾಲವೇ ಇದರಲ್ಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಏಕೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ? ಏಕೆ ಮಾತಾಡುತ್ತಿಲ್ಲ? ‘ಕಳ್ಳರು ಮೌನವಾಗಿರುತ್ತಾರೆ’ ಎಂಬ ಮಾತಿನಂತೆ ವರ್ತಿಸುತ್ತಿರುವುದೇಕೆ?’ ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಮತ್ತೋರ್ವ ಆರೋಪಿ ಬಂಧನ

‘ಭ್ರಷ್ಟಾಚಾರ ಹಾಗೂ ಬಿಜೆಪಿ, ರಕ್ತಸಂಬಂಧಿಗಳು! ಹಾಗಾಗಿಯೇ ಪ್ರತಿ ಇಲಾಖೆಯಲ್ಲೂ ಅಕ್ರಮ, ಲೂಟಿ ಎಗ್ಗಿಲ್ಲದೆ ನಡೆಯುತ್ತಿದೆ. PSI ಪರೀಕ್ಷೆಯ ನಂತರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈವರೆಗೂ ಅಶ್ವತ್ಥ್ ನಾರಾಯಣ್ ಅವರು ಮೌನ ವ್ರತಕ್ಕೆ ಜಾರಿರುವುದೇಕೆ?! ಈ ಅಕ್ರಮದ ಬಗ್ಗೆ ಮಾತಾಡಲು ಭಯವೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ರಮದ ಬಗ್ಗೆ ದೂರು ನೀಡಿದೆ. ಅಶ್ವತ್ಥ್ ನಾರಾಯಣ್ ಅವರೇ ಇದು ನಿಮ್ಮದೇ ಇಲಾಖೆಯಲ್ಲಿ ನಡೆದ ಹಗರಣವಾದರೂ, ನೈಜ ಪರಿಕ್ಷಾರ್ಥಿಗಳಿಗೆ ಅನ್ಯಾಯವಾಗಿದ್ದರೂ ತಾವು ಮಾತ್ರ ಅನ್ಯಾಯಕ್ಕೊಳಪಟ್ಟ ಅಭ್ಯರ್ಥಿಗಳಿಗೆ ಧೈರ್ಯ ತುಂಬುವಂತ ಮಾತನಾಡಲಿಲ್ಲ, ಪರಿಹಾರ ಸೂಚಿಸಲಿಲ್ಲ ಏಕೆ? ಪರಿಹಾರ ಸೂಚಿಸುವುದು ನಿಮ್ಮ ಜವಾಬ್ದಾರಿಯಲ್ಲವೇ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News