ಮೋದಿ ಒಂದು ಸುಳ್ಳು ಹೇಳಿದ್ರೆ, ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ: ಸಿಎಂ ಸಿದ್ದರಾಮಯ್ಯ

Lok Sabha Election 2024: ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರೊ.ರಾಜೀವ್ ಗೌಡ ಗೆಲ್ಲೋದು ಅಷ್ಟೇ ಸತ್ಯವೆಂದು ಸಿಎಂ ಸಿದ್ದರಾಮಯ್ಯನವರು ಭವಿಷ್ಯ ನುಡಿದಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Apr 7, 2024, 06:13 PM IST
  • ಮೋದಿ ಒಂದು ಸುಳ್ಳು ಹೇಳಿದ್ರೆ, ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ, ನಿರ್ಮಲಾ ಮತ್ತೊಂದು ಸುಳ್ಳು ಹೇಳ್ತಾರೆ
  • ಈ ಸುಳ್ಳಿನ ಪಕ್ಷಕ್ಕೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರತ್ತಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ
  • ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ
ಮೋದಿ ಒಂದು ಸುಳ್ಳು ಹೇಳಿದ್ರೆ, ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ: ಸಿಎಂ ಸಿದ್ದರಾಮಯ್ಯ title=
ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಕಿಡಿಕಾರಿದರು. 

ಇದನ್ನೂ ಓದಿ: ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡ ನಿರ್ಮಲಾ ಸೀತಾರಾಮನ್..! 

ಪ್ರಧಾನಿ ನರೇಂದ್ರ ಮೋದಿ ಒಂದು ಸುಳ್ಳು ಹೇಳ್ತಾರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು  ಹೇಳ್ತಾರೆ. ಈ ಸುಳ್ಳಿನ ಪಾರ್ಟಿಗೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರೊ.ರಾಜೀವ್ ಗೌಡ ಗೆಲ್ಲೋದು ಅಷ್ಟೇ ಸತ್ಯವೆಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಇದನ್ನೂ ಓದಿ: ಕಾಂಗ್ರೆಸ್‌ನ ತೆರಿಗೆ ಹೋರಾಟಕ್ಕೆ ನಿರ್ಮಲಾ ಸೀತಾರಾಮನ್ ಟಾಂಗ್

ಪ್ರೊ.ರಾಜೀವ್ ಗೌಡ ಪರ ಮಲ್ಲೇಶ್ವರಂ, ಸುಬ್ರಮಣ್ಯನಗರ, ಗಾಯತ್ರಿನಗರದ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಕೃಷಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ರಾಜ್ಯದ ರೈತರ ಪರವಾಗಿ ಯಾವ ಕೆಲಸಗಳನ್ನೂ ಮಾಡಲಿಲ್ಲ. ಸಂಸದೆಯಾಗಿಯೂ ನಾಡಿನ ಪರವಾಗಿ ಕೆಲಸ ಮಾಡಲಿಲ್ಲ. ಇಂಥವರಿಗೆ ಬೆಂಬಲಿಸಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ? ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News