ಸಾರ್ವಜನಿಕ ಬಳಕೆಯ ಜಾಗವನ್ನು ಡಿ-ನೋಟಿಫಿಕೇಷನ್ ಮಾಡಿದ ಸಿಎಂ - ಆರ್. ಅಶೋಕ್

"ನನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಇಂಚೂ  ಡಿ-ನೋಟಿಫಿಕೇಷನ್ ಮಾಡಿಲ್ಲ." - ಸಿಎಂ ಸಿದ್ದರಾಮಯ್ಯ

Last Updated : Jan 4, 2018, 10:37 AM IST
ಸಾರ್ವಜನಿಕ ಬಳಕೆಯ ಜಾಗವನ್ನು ಡಿ-ನೋಟಿಫಿಕೇಷನ್ ಮಾಡಿದ  ಸಿಎಂ - ಆರ್. ಅಶೋಕ್ title=
Pic: @BJPKarnataka Twitter

ಬೆಂಗಳೂರು: ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಬಳಕೆಯ ಜಾಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ-ನೋಟಿಫಿಕೇಷನ್ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.

ಈ ಬಗ್ಗೆ ಬಿಜೆಪಿಯ ಕರ್ನಾಟಕ ಎಂಬ ಬಿಜೆಪಿಯ ಅಫೀಷಿಯಲ್ ಟ್ವೀಟ್ ನಲ್ಲಿ ಟ್ವೀಟ್ ಮಾಡಲಾಗಿದೆ. " ಬೆಂಗಳೂರು ದಕ್ಷಿಣ ತಾಲ್ಲೂಕು, ಕಸಬಾ ಹೋಬಳಿಯ ಲಾಲ್ ಬಾಗ್ ಸಿದ್ಧಾಪುರ ಗ್ರಾಮದ ಅಂದರೆ ಈಗಿನ ಜನಯನಗರ 1ನೇ ಬ್ಲಾಕ್ ನಲ್ಲಿ ಸರ್ವೇ ನಂ- 27/1, 28/4, 28/5 ಮತ್ತು 28/6ರ 2 ಎಕರೆ 39 1/2 ಗುಂತೆಯಷ್ಟು ಸ್ವತ್ತನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ನಂತೆ "ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗ"ವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಡಿ-ನೋಟಿಫಿಕೇಷನ್ ಮಾಡಿದ್ದಾರೆ" ಎಂದು ಆರ್. ಅಶೋಕ್ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದ್ದಾರೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ "ನನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಇಂಚೂ  ಡಿ-ನೋಟಿಫಿಕೇಷನ್ ಮಾಡಿಲ್ಲ" ಎಂದು ಹಲವು ಬಾರಿ ಹೇಳಿಕೆ ನೀಡಿದ್ದಾರೆ.

Trending News