ನಾಳೆ ರಾಜ್ಯಕ್ಕೆ ನವೀನ್ ಮೃತದೇಹ: ಪಿಎಂಗೆ ಧನ್ಯವಾದ ಹೇಳಿದ ಸಿಎಂ

ನಿಮ್ಮ ಈ ಕಾಳಜಿಗೆ  ನಾನು ಮತ್ತು ಕರ್ನಾಟಕದ ಜನತೆ ನಿಮಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Written by - Zee Kannada News Desk | Last Updated : Mar 20, 2022, 10:58 PM IST
  • ನಾಳೆ ಬೆಳಗಿನ ಜಾವ ಬೆಂಗಳೂರಿಗೆ ಆಗಮಿಸಿರುವ ನವೀನ್ ಗ್ಯಾನಗೌಡರ್ ಮೃತದೇಹ
  • ಪತ್ರ ಬರೆದು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸಿಎಂ ಬಸವರಾಜ್ ಬೊಮ್ಮಾಯಿ
  • ನಿಮ್ಮ ಪರಿಶ್ರಮದಿಂದಲೇ ನವೀನ್ ಮೃತದೇಹ ರಾಜ್ಯಕ್ಕೆ ಬರುತ್ತಿದೆ ಎಂದು ಧನ್ಯವಾದ ತಿಳಿಸಿದ ಸಿಎಂ
ನಾಳೆ ರಾಜ್ಯಕ್ಕೆ ನವೀನ್ ಮೃತದೇಹ: ಪಿಎಂಗೆ ಧನ್ಯವಾದ ಹೇಳಿದ ಸಿಎಂ title=
ಪಿಎಂಗೆ ಧನ್ಯವಾದ ಹೇಳಿದ ಸಿಎಂ

ಬೆಂಗಳೂರು: ಉಕ್ರೇನ್ ನಲ್ಲಿ ಶೆಲ್ ದಾಳಿಗೆ ಸಾವನ್ನಪ್ಪಿದ್ದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ(Naveen Gyanagoudar Dead Body) ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ಆಗಮಿಸುತ್ತಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ(PM Modi)ಯವರಿಗೆ ಪತ್ರ ಬರೆದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ(Basavaraj Bommai), ‘ನಿಮ್ಮ ಪರಿಶ್ರಮದಿಂದಲೇ ನವೀನ್ ಮೃತದೇಹ ರಾಜ್ಯಕ್ಕೆ ಬರುತ್ತಿದೆ. ಇದಕ್ಕೆ ನಿಮ್ಮ ಕಾಳಜಿಯೇ ಕಾರಣ. ನಿಮ್ಮ ಈ ಕಾಳಜಿಗೆ  ನಾನು ಮತ್ತು ಕರ್ನಾಟಕದ ಜನತೆ ನಿಮಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾವಗಡ ಬಸ್ ದುರಂತ: ಮೃತಪಟ್ಟವರಿಗೆ ರಾಜ್ಯ ಸರಕಾರ ಕನಿಷ್ಠ 25 ಲಕ್ಷ ರೂ.ಪರಿಹಾರ ನೀಡಲಿ-ಎಚ್ಡಿಕೆ

ಉಕ್ರೇನ್‌-ರಷ್ಯಾ ಯುದ್ಧದ ವೇಳೆ ನಡೆದ ಶೆಲ್ ದಾಳಿಗೆ ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್(Naveen Gyanagoudar)ಬಲಿಯಾಗಿದ್ದರು. ವೈದ್ಯಕೀಯ ಓದಲು ಉಕ್ರೇನ್ ಗೆ ತೆರಳಿದ್ದ ನವೀನ್ ಡಾಕ್ಟರ್ ಆಗುವ ಕನಸು ಕಂಡಿದ್ದರು. ತಮ್ಮ ಮಗ ಒಳ್ಳೆಯ ಡಾಕ್ಟರ್ ಆಗುತ್ತಾನೆಂದುಕೊಂಡಿದ್ದ ನವೀನ್ ಪೋಷಕರ ಕನಸು ನುಚ್ಚುನೂರಾಗಿದೆ.

ತಮ್ಮ ಪುತ್ರನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರುವಂತೆ ನವೀನ್ ಪೋಷರು ಪ್ರಧಾನಿ ಮೋದಿ(PM Modi) ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ಕೇಂದ್ರ ಸರ್ಕಾರವು ನವೀನ್ ಮೃತದೇಹವನ್ನು ತಾಯ್ನಾಡಿಗೆ ಕರೆತರಲು ವ್ಯವಸ್ಥೆ ಮಾಡಿತ್ತು. ಸೋಮವಾರ ಬೆಳಗಿನ ಜಾವ ನವೀನ್ ಮೃತದೇಹ ಬೆಂಗಳೂರಿಗೆ ಬರಲಿದ್ದು, ನಂತರ ಹಾವೇರಿ ಜಿಲ್ಲೆಗೆ ರವಾನಿಸಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Hijab Verdict : ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News