ಸಂಪುಟ ವಿಸ್ತರಣೆಯೋ - ಪುನರ್ ರಚನೆಯೋ: ಬುಧವಾರ ದೆಹಲಿಗೆ ಸಿಎಂ

ತೀವ್ರ ಕುತೂಹಲ ಕೆರಳಿಸಿರುವ ಪುಟ ವಿಸ್ತರಣೆಗೆ ಅಂತಿಮ ತೆರೆ ಎಳೆಯುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ

Last Updated : Nov 16, 2020, 05:16 PM IST
  • ತೀವ್ರ ಕುತೂಹಲ ಕೆರಳಿಸಿರುವ ಪುಟ ವಿಸ್ತರಣೆಗೆ ಅಂತಿಮ ತೆರೆ ಎಳೆಯುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ
  • ಯಡಿಯೂರಪ್ಪ ಇದೆ ಬುಧುವಾರ ದೆಹಲಿಗೆ
  • ಸಂಪುಟ ವಿಸ್ತರಣೆಯಾದಲ್ಲಿ ನಾಲ್ವರು ವಲಸಿಗರಿಗೆ ಸಚಿವ ಸ್ಥಾನ?
ಸಂಪುಟ ವಿಸ್ತರಣೆಯೋ - ಪುನರ್ ರಚನೆಯೋ: ಬುಧವಾರ ದೆಹಲಿಗೆ ಸಿಎಂ title=

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಪುಟ ವಿಸ್ತರಣೆಗೆ ಅಂತಿಮ ತೆರೆ ಎಳೆಯುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಸಿಎಂ ಬಿ.ಎಸ್. ಯಡಿಯೂರಪ್ಪ ಇದೆ ಬುಧುವಾರ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

17 ಮಂದಿ ವಲಸಿಗರ ಪೈಕಿ ಐದು ಮಂದಿಗೆ ಸಚಿವ ಸ್ಥಾನ ನೀಡಿಲ್ಲ. ಇದೀಗ ಸಂಪುಟ ವಿಸ್ತರಣೆಯಾದಲ್ಲಿ ನಾಲ್ವರು ವಲಸಿಗರಿಗೆ ಸಚಿವ ಸ್ಥಾನ ನೀಡಬೇಕಾದ ಅನಿವಾರ್ಯತೆ ಸಿಎಂ ಬಿಎಸ್‌ ವೈ(B.S.Yediyurappa)  ಅವರಿಗಿದೆ. ಈ ಮೂಲಕ ಕೊಟ್ಟ ಮಾತನ್ನ ಉಳಿಸಿಕೊಳ್ಳುವ ಹೊಣೆಗಾರಿಕೆ ಅವರದ್ದಾಗಿದೆ.

ಡಿಸಿಎಂ ಯಿಂದ ಸಿಎಂಗೆ ಶುರುವಾಯ್ತು ಹೊಸ ತಲೆನೋವು!

ಕಳೆದ ವರ್ಷ ನಡೆದ ಉಪಚುನಾವಣೆ ಬಳಿಕ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಪ್ರಾಮಾಣಿಕ ನಾಯಕರಾದ ಅಶ್ವತ್ಥ್ ನಾರಾಯಣ್, ಸುರೇಶ್ ಕುಮಾರ್, ವಿ ಸೋಮಣ್ಣ ಹಾಗೂ ಆರ್.ಅಶೋಕ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಗರದಲ್ಲಿ 8 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರೂ ಕೂಡ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿಗೆ 'ಸ್ಟಾರ್‌' ಬಲ: 'ರಾಜ್ಯಸಭಾ ಅಖಾಡ'ಕ್ಕಿಳಿಯಲಿದ್ದರಾ ತಲೈವಾ..!?

ಆದರೆ ಮೂಲ ಬಿಜೆಪಿಗರಲ್ಲಿ ಸಾಕಷ್ಟು ಮಂದಿ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಉಳಿದಿರುವ ಕೆಲವೇ ಕೆಲವು ಸ್ಥಾನಗಳನ್ನು ವಲಸಿಗರಿಗೆ ಕೊಟ್ಟರೆ ಪಕ್ಷವನ್ನು ಕಟ್ಟಿ ಬೆಳೆಸಿದ ನಮಗೇನು? ಎಂಬುವುದು ಅವರ ಪ್ರಶ್ನೆಯಾಗಿದೆ. ಮೂಲ ಬಿಜೆಪಿಗರ ಆಕ್ರೋಶ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದಿಂದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್..!

Trending News