ತಾರಕಕ್ಕೆ ಏರಿದ ಬಿಎಂಟಿಸಿ-ಮೆಟ್ರೋ ನಡುವಿನ ಫೀಡರ್ ಬಸ್ ತಿಕ್ಕಾಟ

ಸದ್ಯ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಫೀಡರ್ ಬಸ್ ತಿಕ್ಕಾಟ ತಾರಕಕ್ಕೇರಿದೆ. ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸ್ತಿದೆ. ಇದಕ್ಕಾಗಿ ಮಿಡಿ ಬಸ್‌ಗಳನ್ನು ಕೊಂಡಿದ್ದ ಬಿಎಂಟಿಸಿ ಅವೆಲ್ಲಾ ಕೈಕೊಡ್ತಿರೋ ಕಾರಣ ಇತರೆ ಬಸ್‌ಗಳನ್ನೂ ಮೆಟ್ರೋಗೆ ಫೀಡರ್ ಬಸ್ ಸೇವೆ ನೀಡೋಕೆ ನಿಯೋಜಿಸುತ್ತಿದೆ. 

Written by - Manjunath Hosahalli | Edited by - Bhavishya Shetty | Last Updated : May 11, 2022, 04:35 PM IST
  • ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಫೀಡರ್ ಬಸ್ ತಿಕ್ಕಾಟ
  • ಫೀಡರ್ ಸರ್ವಿಸ್‌ನಿಂದ ಬಿಎಂಟಿಸಿಗೆ ನಿಗದಿತ ಆದಾಯ ಬರುತ್ತಿಲ್ಲ
  • 9 ಮೀಟರ್ ಮಿಡಿ ಬಸ್‌ಗಳನ್ನ ಬಿಟ್ಟರೆ ಲಾಭ ಬರಲಿದೆ ಎಂದ ಬಿಎಂಆರ್‌ಸಿಎಲ್‌
ತಾರಕಕ್ಕೆ ಏರಿದ ಬಿಎಂಟಿಸಿ-ಮೆಟ್ರೋ ನಡುವಿನ ಫೀಡರ್ ಬಸ್ ತಿಕ್ಕಾಟ title=
Feeder Bus Services

ಬೆಂಗಳೂರು: ಮೆಟ್ರೋ ಹಳಿಗೆ ಇಳಿದ ಮೇಲೆ ಬಿಎಂಟಿಸಿಗೆ ಪ್ರಯಾಣಿಕರ ಅಭಾವ ಎದುರಾಗಿದೆ. ಹೀಗಾಗಿ ಆದಾಯದ ಕೊರತೆಯೂ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಸಾಗಿದೆ. ಇದಕ್ಕೆ ಹೊಸ ಆದಾಯದ ಮೂಲ ಹುಡುಕಲು ಹೊರಟ ಬಿಎಂಟಿಸಿ ಮೆಟ್ರೋಗೆ ಫೀಡರ್ ಬಸ್ ಸೇವೆ ಆರಂಭಿಸಿತು. ಆದರೆ ಈ ಫೀಡರ್ ಈಗ ಬಿಎಂಟಿಸಿ ಹಾಗೂ ಮೆಟ್ರೋ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.

ಇದನ್ನ ಓದಿ: ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ ಉಗ್ರ

ಸದ್ಯ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಫೀಡರ್ ಬಸ್ ತಿಕ್ಕಾಟ ತಾರಕಕ್ಕೇರಿದೆ. ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸ್ತಿದೆ. ಇದಕ್ಕಾಗಿ ಮಿಡಿ ಬಸ್‌ಗಳನ್ನು ಕೊಂಡಿದ್ದ ಬಿಎಂಟಿಸಿ ಅವೆಲ್ಲಾ ಕೈಕೊಡ್ತಿರೋ ಕಾರಣ ಇತರೆ ಬಸ್‌ಗಳನ್ನೂ ಮೆಟ್ರೋಗೆ ಫೀಡರ್ ಬಸ್ ಸೇವೆ ನೀಡೋಕೆ ನಿಯೋಜಿಸುತ್ತಿದೆ. ಆದರೆ ಈ ಫೀಡರ್ ಸರ್ವಿಸ್‌ನಿಂದ ಬಿಎಂಟಿಸಿಗೆ ನಿಗದಿತ ಆದಾಯ ಬರುತ್ತಿಲ್ಲ. ಲಾಸ್ ಮೇಲೆ ಲಾಸ್ ಆಗ್ತಿದೆ ಅನ್ನೋದು ಬಿಎಂಟಿಸಿ ಆರೋಪ. ನಮಗೆ ಆರ್ಥಿಕ ಶಕ್ತಿ ನೀಡಿದ್ರೆ ಮಾತ್ರ ಫೀಡರ್ ಸೇವೆ ನೀಡೋಕೆ ಸಾಧ್ಯ ಅನ್ನೋದು ಬಿಎಂಟಿಸಿ ವಾದ. ಆದರೆ ಇತ್ತ ಬಿಎಂಆರ್‌ಸಿಎಲ್ ಬೇರೆಯದ್ದೇ ಕತೆ ಹೇಳ್ತಿದೆ. ಬಸ್ ಓಡಿಸಲು ನಮಗೆ ಅವಕಾಶ ಕೊಟ್ರೆ ನಾವೇ ಫೀಡರ್ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಅಂತಿದೆ ಬಿಎಂಆರ್‌ಸಿಎಲ್.

ಒಂಬತ್ತು ಮೀಟರ್ ಮಿಡಿ ಬಸ್‌ಗಳನ್ನ ಬಿಟ್ಟರೆ ಲಾಭ ಬರಲಿದೆ: BMRCL

ಇನ್ನೊಂದು ಕಡೆ ಎಲೆಕ್ಟ್ರಿಕ್ ಬಸ್‌ಗಳನ್ನು ಕೊಂಡು ಕೈಸುಟ್ಟುಕೊಂಡಿರೋ ಬಿಎಂಟಿಸಿ ಭವಿಷ್ಯದಲ್ಲಿ ಮೆಟ್ರೋಗೆ ಎಲೆಕ್ಟ್ರಿಕ್ ಬಸ್ ಫೀಡರ್ ಆಗಿ ಬಳಸಲು ಯೋಚಿಸ್ತಿದೆ. ಆದ್ರೆ ಬಿಎಂಆರ್‌ಸಿಎಲ್ ಮಾತ್ರ ಇದಕ್ಕೆ ಸುತಾರಾಮ್ ಒಪ್ಪುವ ಲಕ್ಷಣ ಕಾಣಿಸ್ತಿಲ್ಲ. ನೀವು 9 ಮೀಟರ್ ಮಿಡಿ ಬಸ್ ನಿಯೋಜಿಸೋದಾದ್ರೆ ನಿಯೋಜಿಸಿ. ಅದನ್ನ ಬಿಟ್ಟು ದೊಡ್ಡ ಬಸ್‌ಗಳನ್ನ ನಿಯೋಜಿಸಿ ಲಾಸ್ ಅಂದ್ರೆ ನಾವು ಜವಾಬ್ದಾರರಲ್ಲ ಎನ್ನುತ್ತಿದೆ.

ಗಾಯದ ಮೇಲೆ ಬರೆ ಎಳೆದಂತಾದ ಮಿಡಿ ಬಸ್: 
ಇತ್ತ ಕೋವಿಡ್ ಬಳಿಕ ಬಿಎಂಟಿಸಿ ನಷ್ಟದ ಹಾದಿ ಹಿಡಿದು ಕುಳಿತಿದೆ. ಈಗಾಗಲೇ ನೌಕರರಿಗೆ ಸಂಬಳ ಕೊಡಲಾರದ ಸ್ಥಿತಿಗೆ ಬಂದು ತಲುಪಿರೋ ಬಿಎಂಟಿಸಿಗೆ ಈ ಫೀಡರ್ ಸೇವೆ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ. ಈ ಬಗ್ಗೆ ಡಲ್ಟ್ ಗಮನಕ್ಕೆ ತಂದಿರೋ ಬಿಎಂಟಿಸಿ ಆರ್ಥಿಕ ನಷ್ಟ ಬರಿಸಿದ್ರೆ ಮಾತ್ರ ಫೀಡರ್ ಸರ್ವಿಸ್ ಕೊಡಲು ಸಾಧ್ಯ ಎನ್ನುತ್ತಿದೆ. ಹೀಗೆ ಬಿಎಂಟಿಸಿ ಹಾಗೂ ಮೆಟ್ರೋ ನಿಗಮಗಳ ಜಗಳದಲ್ಲಿ ಪ್ರಯಾಣಿಕರು ಬಡವಾಗ್ತಿದ್ದಾರೆ. ರಾತ್ರಿ ಮೆಟ್ರೋ ಇಳಿದ್ಮೇಲೆ ಫೀಡರ್ ಬಸ್ ಇಲ್ಲದೇ ಪ್ರಯಾಣಿಕರು ಪರಿಪಾಟಲು ಪಡುವಂತಾಗ್ತಿದೆ. 

ಇದನ್ನು ಓದಿ: PSI ನೇಮಕಾತಿ ಹಗರಣ: ಕೊನೆಗೂ ಪತ್ತೆಯಾಯ್ತು ಆರೋಪಿ ದಿವ್ಯಾ ಹಾಗರಗಿ ಮೊಬೈಲ್‌!

ಒಟ್ಟಿನಲ್ಲಿ ಮೆಟ್ರೋ ಹಳಿಗಿಳಿದು 10 ವರ್ಷಕಳೆದಿದೆ. ಬಿಎಂಟಿಸಿಯೂ ಲಾಗಾಯ್ತಿನಿಂದ ಮೆಟ್ರೋಗೆ ಫೀಡರ್ ಸೇವೆ ಕೊಡ್ತಲೇ ಬಂದಿದೆ. ಆದ್ರೀಗ ಆರ್ಥಿಕ ಸಂಕಷ್ಟವನ್ನ ಎರಡೂ ಸಂಸ್ಥೆಗಳು ಎದುರಿಸ್ತಿರೋದ್ರಿಂದ ಬೀದಿಜಗಳ ಆರಂಭಿಸಿವೆ. ಇಬ್ಬರ ಲಾಭದ ಲೆಕ್ಕಾಚಾರದಲ್ಲಿ ಪ್ರಯಾಣಿಕರ ಹಿತ ಮಾತ್ರ ಮೂರಾಬಟ್ಟೆಯಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News