ಚಿಕ್ಕಬಳ್ಳಾಪುರ: ಜೂಜು ಅಡ್ಡೆ (Gambling) ಮೇಲೆ ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಬಿ ಪೊಲೀಸರ ದಾಳಿ ನಡೆಸಿದ್ದು, 19 ಜನರನ್ನು ಬಂಧಿಸಲಾಗಿದೆ.
ಆಂಧ್ರದ ಖ್ಯಾತ ನಟ ಹಾಗೂ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಆಪ್ತ ಸಹಾಯಕ ಎಂದು ಹೇಳಿಕೊಂಡಿರುವ ಬಾಲಾಜಿ ಮತ್ತು ವೈಎಸ್ ಆರ್ ಪಕ್ಷದ ಸಂಚಾಲಕ ಎಂದು ಹೇಳಿಕೊಂಡಿರುವ ಶ್ರೀರಾಮರೆಡ್ಡಿ ಸೇರಿದಂತೆ 19 ಜನರನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಕುದುರೆಗಾಡಿ ಸ್ಪರ್ಧೆಯಲ್ಲಿ ಅಚಾತುರ್ಯ; ವ್ಯಕ್ತಿಯ ಮೇಲೆರಗಿ ಬಂತು ಕುದುರೆ..! ಇಲ್ಲಿದೆ ವಿಡಿಯೋ
ಆಂಧ್ರದ ಗಡಿ ನಗರಗೆರೆ ಗ್ರಾಮದ ಬಿಎನ್ ಆರ್ ಕಂಫರ್ಟ್ ರೆಸ್ಟೋರೆಂಟ್ ನಲ್ಲಿ ಹೈಟೆಕ್ ಜೂಜು ನಡೆಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಬಂಧಿತರಿಂದ 1,56,750 ರೂಪಾಯಿ ಹಣ, 8 ಕಾರುಗಳು, 3 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಗುಡಿಬಂಡೆ ನ್ಯಾಯಾಲಯಕ್ಕೆ (Court) ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.