ಬೆಂಗಳೂರು: ರಾಜ್ಯದ ಜನತೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 70ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಡಿನ ಜನತೆಗೆ 70ನೇ ಗಣರಾಜ್ಯೋತ್ಸವದ ಶುಭಾಶಯಗಳು. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಒಡೆಯರು ಪ್ರಜಾಪ್ರತಿನಿಧಿ ಸಭಾದ ಮೂಲಕ ಪರಿಚಯಿಸಿದ ಹೆಮ್ಮೆಯ ನಾಡು ನಮ್ಮದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು ಅದನ್ನು ಗೌರವಿಸುವುದರ ಜೊತೆಗೆ ಬಲಪಡಿಸೋಣ. ಸಂವಿಧಾನದ ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ನಮ್ಮ ಕರ್ತವ್ಯವನ್ನು ನಿಭಾಯಿಸುವ ಜವಾಬ್ದಾರಿಯುತ ಪ್ರಜೆಗಳೋಣ" ಎಂಬ ಸಂದೇಶವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದಾರೆ.
'Karnataka is the proud state where the concept of Democracy was introduced during pre-independence era itself by the Mysore Wodeyars.
Let us understand, respect and strengthen the value of democracy. #RepublicDay2019#ಗಣರಾಜ್ಯೋತ್ಸವ pic.twitter.com/S6FqsZWtGw— CM of Karnataka (@CMofKarnataka) January 25, 2019
ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ರಾಜ್ಯಪಾಲ ವಜೂಭಾಯಿ ಆರ್ ವಾಲಾ ಧ್ವಜಾರೋಹಣ ನೆರವೇರಿಸಿದ್ದಾರೆ. ಉಳಿದಂತೆ ರಾಜ್ಯದ ಎಲ್ಲೆಡೆ ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳಲ್ಲಿ ಗಣರಾಜ್ಯ ದಿನ ಆಚರಿಸಲಾಗುತ್ತಿದೆ.