ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಮಧ್ಯಾಹ್ನ ಕಲಬುರಗಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ವಿಮಾನ ನಿಲ್ದಾಣವು ಇಂದು ಬೆಂಗಳೂರಿನಿಂದ ಕಲಬುರಗಿಗೆ ವಿಮಾನ ಸೇವೆಯನ್ನು ಪ್ರಾರಂಭಿಸಿತು.
ಕಲಬುರ್ಗಿ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸುತ್ತಿರುವುದು ತುಂಬಾ ಸಂತೋಷದ ವಿಷಯ. ನನ್ನ ಬಹು ದಿನದ ಆಶಯ ಇಂದು ಸಾಕಾರಗೊಳ್ಳುತ್ತಿದೆ. ಕಲ್ಯಾಣ ಕರ್ನಾಟಕ ಪ್ರಾಂತ್ಯ ಕಲಬುರ್ಗಿಯಲ್ಲಿ ನಿರ್ಮಾಣಗೊಂಡಿರುವ ಹಸಿರು ಮೈದಾನ ವಿಮಾನ ನಿಲ್ದಾಣವು ಅಭಿವೃದ್ಧಿಯ ದ್ಯೋತಕವಾಗಿದೆ. pic.twitter.com/5kaj42uVZZ
— B.S. Yediyurappa (@BSYBJP) November 22, 2019
ಸ್ಟಾರ್ ಏರ್ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್) ಮತ್ತು ಕಲಬುರಗಿ ವಿಮಾನ ನಿಲ್ದಾಣ (ಜಿಬಿಆರ್) ನಡುವೆ ಮೊದಲ ಹಾರಾಟವನ್ನು ನಡೆಸಿತು.ಈಗ ಕಲಬುರಗಿ ವಿಮಾನ ನಿಲ್ದಾಣ ಸೇವೆಗಳ ಪ್ರಾರಂಭದೊಂದಿಗೆ, ಈಶಾನ್ಯ ಕರ್ನಾಟಕವು ಉಡಾನ್ ಯೋಜನೆಯಡಿ ಬೆಂಗಳೂರು ಮತ್ತು ಭಾರತದ ಉಳಿದ ಭಾಗಗಳಿಗೆ ವಾಯು ಸಂಪರ್ಕವನ್ನು ಕಲ್ಪಿಸಲಿದೆ. ಈಗ ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ ನಂತರ, ಕಲ್ಬುರ್ಗಿ ವಾಯು ಸಂಪರ್ಕವನ್ನು ಪಡೆದ ರಾಜ್ಯದ ಮತ್ತೊಂದು ಹೊಸ ನಗರವಾಗಿದೆ.
ದಶಕಗಳಿಂದ ಕಲಬುರ್ಗಿ ಜನತೆ ಎದುರುನೋಡುತ್ತಿದ್ದ ನೂತನ ವಿಮಾನ ನಿಲ್ದಾಣಕ್ಕೆ ಇಂದು ಚಾಲನೆ ನೀಡಲಾಯಿತು. ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣಕ್ಕೆ ನಾನೇ ಚಾಲನೆ ನೀಡಿದ್ದು ಸಂತಸ ತಂದಿದೆ. ಕಲಬುರ್ಗಿ ಜನತೆಯ ಬಹುದಿನದ ಕನಸು ನನಸಾಗಿದೆ. pic.twitter.com/BcE3BdyJ3Y
— B.S. Yediyurappa (@BSYBJP) November 22, 2019
2008 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಕಲಬುರಗಿ ವಿಮಾನ ನಿಲ್ದಾಣದ 1 ನೇ ಹಂತಕ್ಕೆ ಶಿಲಾನ್ಯಾಸ ಮಾಡಿದ್ದರು. ಆಗಸ್ಟ್ 2018 ರಲ್ಲಿ, ವಿಮಾನ ನಿಲ್ದಾಣದ ರನ್ ವೇ ಯಲ್ಲಿ ಟ್ರಯಲ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.ಈ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನಿರ್ಮಿಸಿದೆ.ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ವಹಿಸಲಿದ್ದು, ಇದು ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸಲು ಅಗತ್ಯವಾದ ಎಲ್ಲಾ ಪ್ರಮುಖ ಮತ್ತು ಸುಧಾರಿತ ಸೌಲಭ್ಯಗಳನ್ನು ಹೊಂದಿದೆ.
ಕಲಬುರಗಿ ವಿಮಾನ ನಿಲ್ದಾಣವು ಬುದ್ಧ ವಿಹಾರ, ಶರಣ ಬಸವೇಶ್ವರ ದೇವಸ್ಥಾನ, ಖ್ವಾಜಾ ಬಂಡಾ ನವಾಜ್ ದರ್ಗಾ ಮತ್ತು ಗುಲ್ಬರ್ಗಾ ಕೋಟೆ ಸೇರಿದಂತೆ ಪ್ರವಾಸಿ ತಾಣಗಳಿಗೆ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದೆ.