ಚಾಮರಾಜನಗರ ಜಿಲ್ಲಾಧಿಕಾರಿ ಪಕ್ಕ ಕುಳಿತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ!

ಇಂದು ಜಿಲ್ಲಾಧಿಕಾರಿ ಜೊತೆ ಬೆಳಗ್ಗೆಯಿಂದ ಸಂಜೆವರೆಗೂ ಇದ್ದು  ದಿನದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ವಿದ್ಯಾರ್ಥಿನಿ  ಜೆ. ಅಗ್ನೀಶ್ ಸಾರಾ ಪಡೆದಿದ್ದಾರೆ. 

Written by - Ranjitha R K | Last Updated : Sep 15, 2022, 12:48 PM IST
  • ವಿದ್ಯಾರ್ಥಿನಿ ಅಗ್ನೀಶ್ ಸಾರಾಗೆ ವಿಶೇಷ ಅವಕಾಶ
  • ಜಿಲ್ಲಾಧಿಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ
  • ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶ
ಚಾಮರಾಜನಗರ ಜಿಲ್ಲಾಧಿಕಾರಿ ಪಕ್ಕ ಕುಳಿತು ಅಧಿಕಾರಿಗಳ ಸಭೆಯಲ್ಲಿ  ಪಾಲ್ಗೊಂಡ ವಿದ್ಯಾರ್ಥಿನಿ! title=
student agneesh sara with DC

ಚಾಮರಾಜನಗರ : ವಿಶ್ವ ಯುವ ಕೌಶಲ್ಯ ದಿನದ  ಅಂಗವಾಗಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಜೆ. ಅಗ್ನೀಶ್ ಸಾರಾ ಎಂಬ ವಿದ್ಯಾರ್ಥಿನಿ  ಡಿಸಿ ಜೊತೆ ಒಂದಿಡೀ ದಿನ ಇರುವ ವಿಶೇಷ ಅವಕಾಶಕ್ಕೆ ಪಾತ್ರಳಾಗಿದ್ದಾರೆ‌.

ಅಗ್ನೀಶ್ ಸಾರಾ ಎಂಬಾಕೆ ಕೊಳ್ಳೆಗಾಲದ ಜೆ.ಎಸ್.ಎಸ್. ಮಹಿಳಾ ಕಾಲೇಜಿನಲ್ಲಿ  ಪ್ರಥಮ ಬಿ.ಕಾಂ  ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಬೆಳಗ್ಗೆ 10.30ಕ್ಕೆ ಡಿಸಿ ಚಾರುಲತಾ ಸೋಮಲ್,  ವಿದ್ಯಾರ್ಥಿನಿ ಸಾರಾಳನ್ನು ಬರಮಾಡಿಕೊಂಡರು.

ಇದನ್ನೂ ಓದಿ : ನಾಯಿಗಾಗಿ ಆರಂಭವಾದ ಗಲಾಟೆ ತಾಯಿ ಮಗಳ ಆತ್ಮಹತ್ಯೆಯಲ್ಲಿ ಅಂತ್ಯ

ಇಂದು ಜಿಲ್ಲಾಧಿಕಾರಿ ಜೊತೆ ಬೆಳಗ್ಗೆಯಿಂದ ಸಂಜೆವರೆಗೂ ಇದ್ದು  ದಿನದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ವಿದ್ಯಾರ್ಥಿನಿ  ಜೆ. ಅಗ್ನೀಶ್ ಸಾರಾ ಪಡೆದಿದ್ದಾರೆ. ಜಿಲ್ಲಾ ಕೌಶಲ್ಯ ಅಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಕಳೆದ ಜುಲೈ ತಿಂಗಳಲ್ಲಿ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಜೆ. ಅಗ್ನೀಶ್ ಸಾರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪಕ್ಕದ ಕುರ್ಚಿಯಲ್ಲೇ ಕುಳಿತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಸಾರಾ ಎಲ್ಲವನ್ನೂ ನೋಟ್ ಮಾಡಿಕೊಳ್ಳುತ್ತಿದ್ದರು, ಡಿಸಿ ಅವರ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರು.‌

ಇದನ್ನೂ ಓದಿ : Namma Metro : ಪ್ರಯಾಣಿಕರ ಗಮನಕ್ಕೆ : ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News