ಶುಲ್ಕ‌ ಕಟ್ಟಲಾಗದೆ ಪರದಾಡುತ್ತಿರುವ‌ ಪೋಷಕರಿಗೆ ಇಂದು ಸಿಹಿ ಸುದ್ದಿ ಸಿಗುವುದೇ?

ಅನ್ಬು ಕುಮಾರ್ ರಾಜ್ಯ ಸರ್ಕಾರಕ್ಕೆ ವರದಿ ನೀಡುವ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ‌. ಸಭೆಯ ಬಳಿಕ‌ ಶುಲ್ಕ‌ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

Written by - Yashaswini V | Last Updated : Jan 19, 2021, 10:35 AM IST
  • ಶುಲ್ಕ ಪಾವತಿ‌ ವಿಚಾರವಾಗಿ ಇಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ
  • ವರದಿ ಸಲ್ಲಿಸಿರುವ ಸಾರ್ವಜನಿಕ ‌ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್
  • ವರದಿ ಆಧರಿಸಿ‌ ಕ್ರಮ ಕೈಗೊಳ್ಳಲಿರುವ ರಾಜ್ಯ ಸರ್ಕಾರ
ಶುಲ್ಕ‌ ಕಟ್ಟಲಾಗದೆ ಪರದಾಡುತ್ತಿರುವ‌ ಪೋಷಕರಿಗೆ ಇಂದು ಸಿಹಿ ಸುದ್ದಿ ಸಿಗುವುದೇ? title=
School Fees

ಬೆಂಗಳೂರು : ಕೊರೋನಾ (Corona) ಕಷ್ಟ ಕಾಲದಲ್ಲೂ ಶುಲ್ಕ ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮತ್ತು ಶಾಲಾ ಶುಲ್ಕ (School Fee) ಪಾವತಿಸಲಾಗದೆ ಪರದಾಡುತ್ತಿರುವ‌ ಪೋಷಕರಿಗೆ ಇಂದು ಸಿಹಿ ಸುದ್ದಿ ಸಿಗುವುದೇ? ಎಂಬುದನ್ನು ಕಾದುನೋಡಬೇಕು.

ಪೋಷಕರು ಶುಲ್ಕ ಪಾವತಿ ಮಾಡುವ ವಿಚಾರವಾಗಿ ಇಂದು ಸಾರ್ವಜನಿಕ ‌ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ವರದಿಯಲ್ಲಿ ಸರ್ಕಾರದ  ಕಾರ್ಯದರ್ಶಿಗೆ ಶುಲ್ಕ ಕಡಿತಗೊಳಿಸುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈ ವರದಿ ಆಧರಿಸಿ‌ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದರಿಂದ ಅನ್ಬು ಕುಮಾರ್ ನೀಡುವ ವರದಿ ಪೋಷಕರ ಕಣ್ಣೀರನ್ನು ಒರೆಸುತ್ತದೆಯೋ? ಇಲ್ಲಾ ಅವರಿಗೆ ಬರೆ ಹಾಕುತ್ತದೆಯೋ ಎಂಬುದು ಇಂದು ನಿರ್ಧಾರವಾಗಲಿದೆ.

ಇದನ್ನೂ ಓದಿ - ಬಲವಂತವಾಗಿ ಸ್ಕೂಲ್ ಫೀ ಸಂಬಂಧಿಸಿದಂತೆ #KAMS ನಡೆಗೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ

ಅನ್ಬು ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ವರದಿ ನೀಡುವ ಹಿನ್ನೆಲೆಯಲ್ಲಿ ಇಂದು ಪ್ರಾಥಮಿಕ ಮತ್ತು‌ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar) ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ‌. ಸಭೆಯ ಬಳಿಕ‌ ಶುಲ್ಕ‌ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ಇತ್ತೀಚೆಗೆ ಪೋಷಕರು ಅನ್ಬು ಕುಮಾರ್ ಅವರನ್ನು ಭೇಟಿಯಾಗಿ ಶುಲ್ಕವನ್ನು ಅರ್ಧಕ್ಕೆ ಇಳಿಸುವಂತೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ - School Fees ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಎದುರು ಪೋಷಕರ ಪ್ರತಿಭಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News