Tik‌ Tok ಖರೀದಿಗೆ ಆಸಕ್ತಿ ತೋರಿದ ಬೆಂಗಳೂರು ಮೂಲ ಕಂಪನಿ..!

ಟಿಕ್‌ಟಾಕ್‌ನ ಮಾತೃಸಂಸ್ಥೆ, ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಜತೆ 'ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌' ಮಾತುಕತೆ

Last Updated : Feb 13, 2021, 07:48 PM IST
  • ಟಿಕ್‌‌ಟಾಕ್‌ನ ಭಾರತೀಯ ವಿಭಾಗವನ್ನು ಖರೀದಿಸಲು ಬೆಂಗಳೂರು ಮೂಲದ ಯುನಿಕಾರ್ನ್‌ 'ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌' ಮಾತುಕತೆ
  • ಟಿಕ್‌ಟಾಕ್‌ನ ಮಾತೃಸಂಸ್ಥೆ, ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಜತೆ 'ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌' ಮಾತುಕತೆ
  • ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಗ್ರೂಪ್‌ ಮಾತುಕತೆ ಆರಂಭಿಸಿದ್ದು, ಆರಂಭಿಕ ಹಂತದಲ್ಲಿದೆ.
Tik‌ Tok ಖರೀದಿಗೆ ಆಸಕ್ತಿ ತೋರಿದ ಬೆಂಗಳೂರು ಮೂಲ ಕಂಪನಿ..! title=

ಬೆಂಗಳೂರು: ಟಿಕ್‌‌ಟಾಕ್‌ನ ಭಾರತೀಯ ವಿಭಾಗವನ್ನು ಖರೀದಿಸಲು ಬೆಂಗಳೂರು ಮೂಲದ ಯುನಿಕಾರ್ನ್‌ 'ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌' ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಟಿಕ್‌ಟಾಕ್‌ನ ಮಾತೃಸಂಸ್ಥೆ, ಚೀನಾ ಮೂಲದ ಬೈಟ್‌ಡ್ಯಾನ್ಸ್(Bytedance)‌ ಜತೆ 'ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌' ಮಾತುಕತೆ ನಡೆಸುತ್ತಿದೆ ಎಂದು 'ಬ್ಲೂಮ್‌ಬರ್ಗ್'‌ ವರದಿ ಮಾಡಿದೆ.

Internet ಮೇಲೆ ಅಶ್ಲೀಲ ಹುಡುಕಾಟ ನಡೆಸಿದರೆ ಹುಷಾರ್! ಬರಲಿದೆ Alert

ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಗ್ರೂಪ್‌ ಮಾತುಕತೆ ಆರಂಭಿಸಿದ್ದು, ಆರಂಭಿಕ ಹಂತದಲ್ಲಿದೆ. 'ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌'ನ ಮಾತೃ ಸಂಸ್ಥೆ 'ಇನ್‌ಮೊಬಿ' ಮತ್ತು ಬೈಟ್‌ಡ್ಯಾನ್ಸ್‌ ಎರಡರಲ್ಲೂ ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್(Soft Bank))‌ನ ಹೂಡಿಕೆ ಇದೆ. ಹೀಗಾಗಿ ಸಾಫ್ಟ್‌ ಬ್ಯಾಂಕ್‌ ಈ ಮಾತುಕತೆಗೆ ವೇದಿಕೆ ಒದಗಿಸಿದೆ.

Railways: ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡಿಲ್ಲ- ರೈಲ್ವೆ ಇಲಾಖೆ ಸ್ಪಷ್ಟ

ಬೆಂಗಳೂರಿನ ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌ನ ಮಾತೃಸಂಸ್ಥೆ ಇನ್‌ಮೊಬಿ ಆಗಿದೆ. ಇದೇ ಇನ್‌ಮೊಬಿಯ ಶಾರ್ಟ್‌ ವಿಡಿಯೋ ಆ್ಯಪ್‌ ರೊಪೊಸೊ, ಟಿಕ್‌ಟಾಕ್(TikTok)‌ ನಿಷೇಧದ ನಂತರ ಭಾರತದಲ್ಲಿ ಜನಪ್ರಿಯತೆ ಗಳಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಭಾರತ-ಚೀನಾ ಗಡಿ ಸಂಘರ್ಷದ ಬಳಿಕ ಟಿಕ್‌ಟಾಕ್‌ ಅನ್ನು ದೇಶದಲ್ಲಿ ನಿಷೇಧಿಸಲಾಗಿತ್ತು.

Modi Government ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಈ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News