Budget Session: ಇಂದಿನಿಂದ ಬಜೆಟ್ ಅಧಿವೇಶನ: ಜುಲೈ 7ಕ್ಕೆ 14ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ

Budget Session: ಈ ಅಧಿವೇಶನ ಹಲವು ಮಹತ್ವದ ಘಟನೆಗಳು, ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ. ಪಂಚ ಗ್ಯಾರಂಟಿಗಳ ಪೈಕಿ, ಮೂರು ಗ್ಯಾರಂಟಿಗಳನ್ನ ಸರ್ಕಾರ ಈಡೇರಿಸುವ ಹಂತಕ್ಕೆ ತಲುಪಿದೆ. ಆದ್ರೆ ಕಂಡೀಷನ್, ಐದು ಕೆಜಿ ಅಕ್ಕಿಗೆ ಮಾತ್ರ ಹಣ ಕೊಡ್ತಿರೋದಕ್ಕೆ ಬಿಜೆಪಿ ಕೆಂಡವಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ವಿರುದ್ಧ ಮುಗಿಬೀಳಲು ಬಿಜೆಪಿ ಶಾಸಕರು ನಿರ್ಧಾರ ಮಾಡಿದ್ದಾರೆ. 

Written by - Yashaswini V | Last Updated : Jul 3, 2023, 09:03 AM IST
  • ಇಂದಿನಿಂದ ಜುಲೈ 14 ರವೆಗೆ ಬಜೆಟ್ ಅಧಿವೇಶನ
  • ವಿವಾದಿತ ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಬಿಜೆಪಿ ವಿರೋಧ
  • ವರ್ಗಾವಣೆ ದಂಧೆ, ಅನುದಾನ ಕಡಿತ ಪ್ರಮುಖ ಅಸ್ತ್ರ
Budget Session: ಇಂದಿನಿಂದ ಬಜೆಟ್ ಅಧಿವೇಶನ: ಜುಲೈ 7ಕ್ಕೆ 14ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ title=
Budget Session

Karnataka Budget Session: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ‌. ಕಾಂಗ್ರೆಸ್‌ನ ಐದು ಚುನಾವಣಾ ಪೂರ್ವ ಭರವಸೆಗಳೇ ಈ ಬಜೆಟ್ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ಹತ್ತು ದಿ‌ನ ನಡೆಯಲಿರುವ ಅಧಿವೇಶನದಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ನಡೆಯಲಿವೆ‌‌. ಅದರಲ್ಲೂ, ಆಡಳಿತ ಹಾಗೂ ವಿಪಕ್ಷಗಳ ನಡುವೆ ಗ್ಯಾರಂಟಿ ಸಮರ ಜೋರಾಗೋದು ಪಕ್ಕಾ ಆಗಿದೆ. 

ಹೌದು, ಇಂದಿನಿಂದ ಜುಲೈ 14 ನೇ ತಾರೀಖಿನವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ದಿನ ಎರಡೂ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಮಾಡಲಿದ್ದಾರೆ. ಒಟ್ಟು ಹತ್ತು ದಿನ ಅಧಿವೇಶನ ನಡೆಯಲಿದ್ದು, ಎಂಟು ದಿನ ಪ್ರಶ್ನೋತ್ತರ ಕಲಾಪಕ್ಕೆ ಸಮಯ ನಿಗದಿ ಮಾಡಲಾಗಿದೆ. 
 
ಆಡಳಿತ - ವಿಪಕ್ಷಗಳ ನಡುವೆ ಕೋಲಾಹಲ 'ಗ್ಯಾರಂಟಿ': ಸದನದ ಒಳಗೆ ಹಾಗೂ ಹೊರಗೆ ತಾರಕಕ್ಕೇರಲಿದೆ ಅಕ್ಕಿ ಸಮರ!
ಇನ್ನು ಈ ಅಧಿವೇಶನ ಹಲವು ಮಹತ್ವದ ಘಟನೆಗಳು, ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ. ಪಂಚ ಗ್ಯಾರಂಟಿಗಳ ಪೈಕಿ, ಮೂರು ಗ್ಯಾರಂಟಿಗಳನ್ನ ಸರ್ಕಾರ ಈಡೇರಿಸುವ ಹಂತಕ್ಕೆ ತಲುಪಿದೆ. ಆದ್ರೆ ಕಂಡೀಷನ್, ಐದು ಕೆಜಿ ಅಕ್ಕಿಗೆ ಮಾತ್ರ ಹಣ ಕೊಡ್ತಿರೋದಕ್ಕೆ ಬಿಜೆಪಿ ಕೆಂಡವಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ವಿರುದ್ಧ ಮುಗಿಬೀಳಲು ಬಿಜೆಪಿ ಶಾಸಕರು ನಿರ್ಧಾರ ಮಾಡಿದ್ದಾರೆ. ಇಂದು ವಿಧಾನಸೌಧ ಗಾಂಧಿ ಪ್ರತಿಮೆ ಸೇರಿ ಹಲವು ಕಡೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಬಿಜೆಪಿ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಹೊರತುಪಡಿಸಿ, ಹತ್ತು ಕೆಜಿ ಅಕ್ಕಿಗೆ ಹಣ ಕೊಡಬೇಕು. ಕೆಜಿಗೆ 34 ರೂಪಾಯಿ ನೀಡೋದಲ್ಲ. ಮಾರ್ಕೆಟ್ ದರ ಕೆಜಿಗೆ 60 ರೂಪಾಯಿ ಇದೆ. ಅಷ್ಟೇ ಕೊಡಬೇಕು ಅಂತಾ ಆಗ್ರಹಿಸಲಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಸರ್ಕಾರವನ್ನ ಕಟ್ಟಿಹಾಕಿ, ಜನಮನ ಸೆಳೆಯೋದಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಇದನ್ನೂ ಓದಿ- ಸದನದ ಒಳಗೂ ಹೊರಗೂ ಬಿಜೆಪಿ ಪ್ರತಿಭಟನೆ

ವಿವಾದಿತ ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಬಿಜೆಪಿ ವಿರೋಧ: 
ಎಪಿಎಂಸಿ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದತಿಯನ್ನ ತೀವ್ರವಾಗಿ ವಿರೋಧಿಸಲು ಬಿಜೆಪಿ ನಾಯಕರು ನಿರ್ದಾರ ಮಾಡಿದ್ದಾರೆ. ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿಗೆ ಹಣ ಬಿಡುಗಡೆಯಾಗ್ತಿಲ್ಲ. ಕಾಮಗಾರಿಗಳನ್ನ ನಿಲ್ಲಿಸಲಾಗಿದೆ‌. ಗುತ್ತಿಗೆದಾರರ ಬಿಲ್ ತಡೆಹಿಡಿಯಾಲಗಿದೆ. ಮೂಲಸೌಕರ್ಯಗಳು ಸಿಗ್ತಾ ಇಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಬರ ಬಂದಿದೆ. ಕುಡಿಯೋದಕ್ಕೆ ನೀರೂ ಸಿಗ್ತಾ ಇಲ್ಲ ಎಂದು ಆಡಳಿತ ಪಕ್ಷದ ವಿರುದ್ದ ವಿಪಕ್ಷ ಮುಗಿಬೀಳೋ ಸಾಧ್ಯತೆಯೂ ಇದೆ. 

ಲೋಕೋಪಯೋಗಿ, ನೀರಾವರಿ, ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಗಳಿಗೆ ಅನುದಾನ ಕಟ್ ಮಾಡಲು ಸಿಎಂ ಚಿಂತನೆ ಮಾಡಿದ್ದಾರೆ. ಹಾಗೇನಾದ್ರೂ ಆದ್ರೆ ಬಿಜೆಪಿಯ ಸದನದಲ್ಲೇ ಪ್ರತಿಭಟಿಸಲು ತೀರ್ಮಾನಿಸಿದೆ. ಬಿಲ್ ಗಳನ್ನ ತಡೆಹಿಡಿದು 60% ಕಮಿಷನ್ ಆರೋಪವನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ. ಸಿಎಂ ಕಚೇರಿ ಸೇರಿ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ರಾಜಾರೋಷವಾಗಿ ನಡೆಯುತ್ತಿರುವ ವಿಚಾರವನ್ನೂ ಕಮಲ‌ ಪಡೆ ಕೈಗೆತ್ತಿಕೊಳ್ಳಲು ಮುಂದಾಗಿದೆ..  

ಇದನ್ನೂ ಓದಿ- ವಿಪಕ್ಷಗಳಿಗೆ ಕೌಂಟರ್ ಕೊಡಲು ಕಾಂಗ್ರೆಸ್ ರಣತಂತ್ರ

ಕೇಸರಿ ಪಡೆ ವಿರುದ್ಧ ಘರ್ಜಿಸಲಿರುವ ಶೆಟ್ಟರ್: 
ಕಾಂಗ್ರೆಸ್ ಪರಿಷತ್ ಸದಸ್ಯರಾಗಿ ಇಂದು ಜಗದೀಶ್ ಶೆಟ್ಟರ್ ಪ್ರಮಾಣ ವಚನ ಸ್ಬೀಕಾರ ಮಾಡಲಿದ್ದಾರೆ. ಸಿಎಂ ಆಗಿದ್ದಾಗ, ಬಿಜೆಪಿ ಶಾಸಕ ಆಗಿದ್ದಾಗ ಕಾಂಗ್ರೆಸ್ ವಿರುದ್ಧ ಶೆಟ್ಟರ್ ಹಿಗ್ಗಾಮುಗ್ಗ ವಾಗ್ದಾಳಿ ನಡೆಸುತ್ತಿದ್ರು. ಈಗ ಕಾಂಗ್ರೆಸ್ ಸಾಲಿನಲ್ಲಿ ಕುಳಿತು ಕಮಲ ನಾಯಕರ ಬೆವರಿಳಿಸಲು ಪರಿಷತ್ ಗೆ ಎಂಟ್ರಿ ಕೊಡಲಿದ್ದಾರೆ.. ಶೆಟ್ಟರ್ ಆಗಮನದಿಂದ ಪರಿಷತ್ ನಲ್ಲಿ ಕುತೂಹಲಕಾರಿ ಚರ್ಚೆಗಳು ನಡೆಯಲಿವೆ..

ಒಟ್ನಲ್ಲಿ ಇಂದಿನಿಂದ ನಡೆಯಲಿರುವ ಅಧಿವೇಶನ ಕೋಲಾಹಲ, ಕುತೂಹಲ ಎಲ್ಲದಕ್ಕೂ ಸಾಕ್ಷಿಯಾಗಲಿದೆ‌. ಗ್ಯಾರಂಟಿಗಳ ವಿಚಾರವಂತೂ ತೀವ್ರ ಗಲಾಟೆಯನ್ನ ಎಬ್ಬಿಸಲಿದೆ‌. ಈಗಾಗಲೇ ಎರಡೂ ಪಕ್ಷಗಳ ನಡುವೆ ಗ್ಯಾರಂಟಿ ಕದನ ತಾರಕಕ್ಕೇರಿದ್ದು, ಇಂದು  ಇದು ಇನ್ನೊಂದು ಹಂತಕ್ಕೆ ಹೋಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News