BMTC ಪ್ರಯಾಣಿಕರ ಗಮನಕ್ಕೆ : ಬಸ್​ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ!

ಕೊರೋನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

Last Updated : Dec 23, 2022, 06:08 PM IST
  • ಕೊರೋನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆ
  • ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ
  • ಈ ಮಹತ್ವದ ನಿರ್ಧಾರವು ನಾಳೆಯಿಂದಲೇ ಜಾರಿಯಾಗಲಿದೆ
BMTC ಪ್ರಯಾಣಿಕರ ಗಮನಕ್ಕೆ : ಬಸ್​ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ! title=

ಬೆಂಗಳೂರು : ಕೊರೋನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಬಿಎಂಟಿಸಿಯ ಈ ಮಹತ್ವದ ನಿರ್ಧಾರವು ನಾಳೆಯಿಂದಲೇ ಜಾರಿಯಾಗಲಿದೆ. ಬಸ್​ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಂದು ವೇಳೆ ಮಾಸ್ಕ್​ ಧರಿಸದಿದ್ದ ಬಸ್​ ಹತ್ತುವಂತಿಲ್ಲ. ಅಲ್ಲದೆ, ಪ್ರತಿ‌ನಿತ್ಯ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುವವರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದೆ.

ಇದನ್ನೂ ಓದಿ : ಪ್ರಚಾರಕ್ಕೆ ಸ್ನೇಹಿತನ ಕಾರು ಪಡೆದು ವಾಪಸ್ ನೀಡೋಕೆ ನಲಪಾಡ್ ನಕ್ರ..!

ಈ ಬಗ್ಗೆ ಸಂಚಾರ ನಿಯಂತ್ರಕರು ಮೆಜೆಸ್ಟಿಕ್, ಬಿಎಂಟಿಸಿ ಬಸ್​ ಡ್ರೈವರ್, ಕಂಡಕ್ಟರ್ ಗಳಿಗೂ ಗೈಡ್​​ಲೈನ್ಸ್​ ನೀಡುತ್ತಿದ್ದು,​ ಮಾಸ್ಕ್ ಧರಿಸುವಂತೆ ಹೇಳುತ್ತಿದ್ದಾರೆ. 

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಸಂಚಾರ ನಿಯಂತ್ರಕರು, ಇಂದು ಮೊದಲನೇ ದಿನವಾದ್ದರಿಂದ ಎಲ್ಲರಿಗೂ ಸೂಚನೆ ನೀಡಿದ್ದೇವೆ. ನಾಳೆ ಬೆಳಗ್ಗೆ ಮಾಸ್ಕ್ ಹಾಕಿಲ್ಲ ಅಂದ್ರೆ ಗಾಡಿಯೊಳಗೆ(ಬಸ್​) ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಕೇಂದ್ರ ಆರೋಗ್ಯ ಸಚಿವರ ಜೊತೆ ಆರೋಗ್ಯ ಸಚಿವ ಸುಧಾಕರ್‌ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಸಚಿವ ಸುಧಾಕರ್‌, ತುರ್ತು ಕೋವಿಡ್ ನಿರ್ವಹಣೆಗೆ ಸಭೆ ಮಾಡಿದ್ದಾರೆ. ಇಡೀ ವಿಶ್ವದ ಸ್ಥಿತಿಗತಿ ಬಗ್ಗೆ ಪ್ರೆಸೆಂಟೇಷನ್ ಕೊಟ್ಟಿದ್ದಾರೆ. ಸೋಂಕಿತರ ಪ್ರಮಾಣದ ವಿವರವನ್ನ ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಶೇ.0.03 ರಷ್ಟು ಆಕ್ಟೀವ್ ಪ್ರಕರಣ ನಮ್ಮ ದೇಶದಲ್ಲಿ ಇದೆ. ವಿದೇಶಗಳಿಗೆ ಹೋಲಿಕೆ‌ ಮಾಡಿದ್ರೆ ನಮ್ಮ ನಿಯಂತ್ರಣದಲ್ಲಿ ಇದೆ. ಪ್ರತಿನಿತ್ಯ ವಿಶ್ವದ ವಿವಿಧ ದೇಶಗಳಲ್ಲಿ 50 ಲಕ್ಷ ಕೇಸ್ ಬರುತ್ತಿವೆ. ಲಸಿಕೆ ತೆಗೆದುಕೊಳ್ಳೋದ್ರಲ್ಲಿ ನಮ್ಮಷ್ಟು ಚೀನಾ ಜನ ಯಶಸ್ಸು ಕಂಡಿಲ್ಲ. ಅಮೆರಿಕಾ ಸಂಸ್ಥೆ ವರದಿ ಪ್ರಕಾರ ಚೀನಾದಲ್ಲಿ 10 ಲಕ್ಷ ಜನ ಸಾವಾಗುವ ಸಾಧ್ಗತೆ ಅಂತಿದೆ. ಅದಕ್ಕೆ ಕಾರಣ ಚೀನಾದಲ್ಲಿ ಇರುವ ಲಸಿಕೆ ಇರಬಹುದು. ಸಭೆಯಲ್ಲಿ ಮೊದಲ ರಾಜ್ಯ ನಮ್ಮದೇ ತೆಗೆದುಕೊಂಡು ಚರ್ಚೆ ಮಾಡಿದರು. ರಾಜ್ಯದ ಸ್ಥಿತಿಗತಿ ಬಗ್ಗೆ ತಿಳಿಸಿದ್ದೇನೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಡಿಸೆಂಬರ್ 27 ರಂದು ಆಸ್ಫತ್ರೆಗಳಲ್ಲಿ ಮಾಕ್ ಡ್ರಿಲ್‌(ಡ್ರೈ ರನ್) ಮಾಡಲು ಕೇಂದ್ರ ಸೂಚನೆ ನೀಡಿದೆ. ಆಕ್ಸಿಜನ್ ಘಟಕಗಳ ಮಾಕ್ ಡ್ರಿಲ್ ಆಗಬೇಕು‌. ನಮ್ಮಲ್ಲಿರುವ ಆಕ್ಸಿಜನ್ ಪ್ಲಾಂಟ್ಸ್ ಆಡಿಟ್ ಆಗಬೇಕು. ಕೆಲಸ ನಿರ್ವಹಣೆ ಆಗಬೇಕು ಅಂತಾ ನಿನ್ನೆ ಆದೇಶ ಹೊರಡಿಸಿದ್ದೆನೆ ಅದನ್ನೆ ಹೇಳಿದ್ದೇನೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲವೂ ಸರಿಯಾಗಿ ಇದೆಯಾ ಅಂತಾ ನೋಡಿಕೊಳ್ಳೋಕೆ ಮಾಕ್ ಡ್ರಿಲ್ ಮಾಡ್ತೇವೆ. ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಸೂಚನೆ ನೀಡಿದ್ದಾರೆ. ಕೋವಿಡ್ ಟೆಸ್ಟ್ ಹೆಚ್ಚಳಕ್ಕೆ ಸೂಚನೆ ನೀಡಿದ್ದಾರೆ. ವಯಸ್ಸಾದವರಿಗೆ ಪ್ರಾಶಸ್ತ್ಯ ದಲ್ಲಿ ಬೂಸ್ಟರ್ ಕೊಡಲು ಸೂಚಿಸಿದ್ದಾರೆ. ವಿದೇಶಿ ಪ್ರಯಾಣಿಕರಿಗೆ ಆರ್ಟಿಇಸಿಆರ್ ನೆಗೆಟಿವ್ ರಿಪೋರ್ಟ್ ರೂಲ್ಸ್ ಜಾರಿಗೆ ನಾನು ಕೇಂದ್ರಕ್ಕೆ ‌ಸಲಹೆ ನೀಡಿದ್ದೇನೆ. ನಮ್ಮಲ್ಲಿ ಇನ್ನೂ 10 ಲಕ್ಷ  ಬೂಸ್ಟರ್ ಡೋಸ್ ಇದೆ  ನೀಡುತ್ತೇವೆ. BF.7 ಒಬ್ಬರಿಂದ 17 ಜನಕ್ಕೆ ಸ್ಪ್ರೆಡ್ ಆಗುವ ವೈರಸ್ ಇದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News