ಬೆಂಗಳೂರು: ಮತಬ್ಯಾಂಕ್ ರಾಜಕಾರಣ(Vote Bank Politics)ಕ್ಕಾಗಿ ಸಮಾಜ ಘಾತುಕರನ್ನು ಬೆಳೆಸಿದ್ದು ಕಾಂಗ್ರೆಸ್, ಮತಾಂಧರನ್ನು ಪೋಷಿಸಿದ್ದು ಸಿದ್ದರಾಮಯ್ಯ ಅಂತಾ ಬಿಜೆಪಿ ಗಂಭೀರ ಆರೋಪ ಮಾಡಿದೆ. #ಹಿಂದೂವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ(Siddaramaiah) ವಿರುದ್ಧ ಕಿಡಿಕಾರಿದೆ.
ಮತಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜ ಘಾತುಕರನ್ನು ಬೆಳೆಸಿದ್ದು @INCKarnataka, ಮತಾಂಧರನ್ನು ಪೋಷಿಸಿದ್ದು @siddaramaiah.
ಈಗ ಬಹುಸಂಖ್ಯಾತರ ಮತ ಕಳೆದುಕೊಳ್ಳುವ ಭೀತಿಯಿಂದ ಮತಾಂಧ ಸಂಘಟನೆಗಳನ್ನು ನಿಷೇಧಿಸಿ ಎಂಬ ನಾಟಕ ಮಾಡುತ್ತಿದ್ದಾರೆ.
ಪ್ರಕರಣ ಹಿಂಪಡೆಯಲು ಅಂದು ನಿಮಗೆ ಪ್ರೇರೇಪಿಸಿದ ʼಹಸ್ತʼ ಯಾವುದು?#ಹಿಂದೂವಿರೋಧಿಕಾಂಗ್ರೆಸ್
— BJP Karnataka (@BJP4Karnataka) February 22, 2022
‘ಸಿದ್ದರಾಮಯ್ಯ ಅವರೇ ನಿಮ್ಮ ನಾಟಕವನ್ನು ಸಾಕುಮಾಡಿ. ಕೋಮು ಗಲಭೆ, ಹಿಂದೂ ಯುವತಿಯರ ಅಪರಹರಣ, ಮಾನಭಂಗ ಮತ್ತು ಲವ್ ಜಿಹಾದ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತಾಂಧ ಪಿಎಫ್ಐ(PFI), ಎಸ್ಡಿಪಿಐ(SDPI) ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಾಸ್ ಪಡೆದುಕೊಂಡಿದ್ದನ್ನು ನಾವು ಮರೆತಿಲ್ಲ’ ಅಂತಾ ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಅವರೇ, ನಿಮ್ಮ ನಾಟಕವನ್ನು ಸಾಕುಮಾಡಿ.
√ ಕೋಮು ಗಲಭೆ
√ ಹಿಂದೂ ಯುವತಿಯರ ಅಪರಹರಣ
√ ಮಾನಭಂಗ
√ ಲವ್ ಜಿಹಾದ್ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತಾಂಧ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಾಸ್ ಪಡೆದುಕೊಂಡಿದ್ದನ್ನು ನಾವು ಮರೆತಿಲ್ಲ.#ಹಿಂದೂವಿರೋಧಿಕಾಂಗ್ರೆಸ್
— BJP Karnataka (@BJP4Karnataka) February 22, 2022
ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಂಖದಿಂದಲೇ ತೀರ್ಥ ಬರಬೇಕೇ?: ಡಿಕೆಶಿ
‘ಸಿದ್ದರಾಮಯ್ಯ(Siddaramaiah)ನವರೇ ಕೋಟಾ ನೋಟು ಚಲಾವಣೆ, ಡ್ರಗ್ಸ್ ದಂಧೆ, ಸ್ಮಗ್ಲಿಂಗ್, ಗೊ ಕಳ್ಳತನ, ಬಾಂಬ್ ತಯಾರಿಕೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿ ಮುಂತಾದ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಅವರನ್ನು ಪೋಷಿಸಿದ್ದು ನೀವೇ ಅಲ್ಲವೇ?’ ಅಂತಾ ಪ್ರಶ್ನಿಸಿದೆ.
ಸಿದ್ದರಾಮಯ್ಯನವರೇ,
√ ಕೋಟಾ ನೋಟು ಚಲಾವಣೆ
√ ಡ್ರಗ್ಸ್ ದಂಧೆ
√ ಸ್ಮಗ್ಲಿಂಗ್
√ ಗೊ ಕಳ್ಳತನ
√ ಬಾಂಬ್ ತಯಾರಿಕೆ
√ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಮುಂತಾದ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಅವರನ್ನು ಪೋಷಿಸಿದ್ದು ನೀವೇ ಅಲ್ಲವೇ?#ಹಿಂದೂವಿರೋಧಿಕಾಂಗ್ರೆಸ್
— BJP Karnataka (@BJP4Karnataka) February 22, 2022
‘ಮತಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜ ಘಾತುಕರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ(Congress Party), ಮತಾಂಧರನ್ನು ಪೋಷಿಸಿದ್ದು ಸಿದ್ದರಾಮಯ್ಯ. ಈಗ ಬಹುಸಂಖ್ಯಾತರ ಮತ ಕಳೆದುಕೊಳ್ಳುವ ಭೀತಿಯಿಂದ ಮತಾಂಧ ಸಂಘಟನೆಗಳನ್ನು ನಿಷೇಧಿಸಿ ಎಂಬ ನಾಟಕ ಮಾಡುತ್ತಿದ್ದಾರೆ. ಪ್ರಕರಣ ಹಿಂಪಡೆಯಲು ಅಂದು ನಿಮಗೆ ಪ್ರೇರೇಪಿಸಿದ ‘ಹಸ್ತʼ ಯಾವುದು?’ ಅಂತಾ ಬಿಜೆಪಿ(BJP) ಟ್ವೀಟ್ ಮಾಡಿದೆ.
ಇದನ್ನೂ ಓದಿ: #ಜನವಿರೋಧಿಕಾಂಗ್ರೆಸ್; “ಸದನದಲ್ಲಿ ನಿಮ್ಮ ಶಾಸಕರು ಮಾಡಿದ್ದೇನು, ಸಾಧಿಸಿದ್ದೇನು?”
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.