ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ: ಬಿಜೆಪಿ

ಸುರ್ಜೇವಾಲಾ ಅವರೇ, ರಾಷ್ಟ್ರದ ನೈಜ ಇತಿಹಾಸದ ಬದಲು ಮೊಗಲರ ಇತಿಹಾಸವನ್ನು ನೀವು ಓದಿರುವುದರಿಂದ ಈ ದೋಷವುಂಟಾಗಿದೆ ಎಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Jun 10, 2022, 05:33 PM IST
  • ರಾಷ್ಟ್ರದ ನೈಜ ಇತಿಹಾಸದ ಬದಲು ಮೊಗಲರ ಇತಿಹಾಸ ಓದಿರುವುದರಿಂದ ಈ ದೋಷವುಂಟಾಗಿದೆ
  • 2007ರಲ್ಲಿ ಆಗಿನ ಯುಪಿಎ ಸರ್ಕಾರ ರಾಮ ಇರುವ ಬಗ್ಗೆ ದಾಖಲೆ ಇಲ್ಲವೆಂದ ಕಾಂಗ್ರೆಸ್ ರಕ್ತ ನಿಮ್ಮಲ್ಲಿರುವುದು
  • ಹೀಗಾಗಿ ನಿಮಗೆ ಸೀತಾಮಾತೆಯ ಬಗ್ಗೆ ಗೌರವ ಇಲ್ಲವೆಂದು ರಣದೀಪ್ ಸಿಂಗ್ ಸುರ್ಜೆವಾಲಾ ವಿರುದ್ಧ ಬಿಜೆಪಿ ಆಕ್ರೋಶ
ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ: ಬಿಜೆಪಿ title=
ರಣದೀಪ್ ಸಿಂಗ್ ಸುರ್ಜೆವಾಲಾ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದ ವಿಚಾರವಾಗಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.

ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ‘ಅಂದು ಸೀತಾ ಮಾತೆಯ ವಸ್ತ್ರಾಪಹರಣ ಮಾಡಿದಂತೆ ಇಂದು ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಬೆತ್ತಲೆಗೊಳಿಸಲು ಹೊರಟಿದ್ದಾರೆ’ ಎಂದಿದ್ದರು. ಮಹಾಭಾರತದಲ್ಲಿನ ವಸ್ತ್ರಾಪಹರಣ ದೃಶ್ಯದ ಉದಾಹರಣೆ ತೆಗೆದುಕೊಳ್ಳಲು ಹೋಗಿ ಸುರ್ಜೆವಾಲಾ ದ್ರೌಪದಿ ಬದಲಿಗೆ ಸೀತಾದೇವಿಯ ಹೆಸರು ಹೇಳಿದಕ್ಕೆ ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: Chaddi Campaign: ಚಡ್ಡಿ ಸುಟ್ಟು ಶಾಸಕ ಪಿ.ರಾಜೀವ್ ಮನೆಮುಂದೆ ಬೂದಿ ಇಟ್ಟರು!

‘ಸುರ್ಜೇವಾಲಾ ಅವರೇ, ರಾಷ್ಟ್ರದ ನೈಜ ಇತಿಹಾಸದ ಬದಲು ಮೊಗಲರ ಇತಿಹಾಸವನ್ನು ನೀವು ಓದಿರುವುದರಿಂದ ಈ ದೋಷವುಂಟಾಗಿದೆ. ಸೀತಾಮಾತೆಗೆ ಅವಮಾನ ಮಾಡಿದ ನೀವು ದೇಶದ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

‘2007ರಲ್ಲಿ ಆಗಿನ ಯುಪಿಎ ಸರ್ಕಾರ ರಾಮ ಇರುವ ಬಗ್ಗೆ ದಾಖಲೆ ಇಲ್ಲ ಎಂದ ಕಾಂಗ್ರೆಸ್ ರಕ್ತ ನಿಮ್ಮಲ್ಲಿರುವುದು. ಹಾಗಾಗಿ ನಿಮಗೆ ಸೀತಾಮಾತೆಯ ಬಗ್ಗೆ ಗೌರವ ಇಲ್ಲ, ಇದು ಹಿಂದುಗಳಿಗೆ ಮಾಡಿದ ಅವಮಾನ. ಸುರ್ಜೇವಾಲಾ ಅವರೇ, ರಾಮಾಯಣವು ತ್ರೇತಾಯುಗದಲ್ಲಿ ನಡೆದಿದ್ದು, ಮಹಾಭಾರತವು ದ್ವಾಪರಯುಗದಲ್ಲಿ. ಬಿಜೆಪಿಯ ಕಮಲವು ಎಲ್ಲೆಡೆ ಅರಳುತ್ತಿದ್ದು, ಕಾಂಗ್ರೆಸ್ ಈಗ ಕೊನೆಗಾಲದಲ್ಲಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಪ್ರವಾದಿ ಮಹಮ್ಮದ್ ಅವಹೇಳನ: ನಡುರಸ್ತೆಯಲ್ಲೇ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ ಕಿಡಿಗೇಡಿಗಳು!

‘ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ. ರಾಮಾಯಣ ಹಾಗೂ ಮಹಾಭಾರತ ಓದಬೇಕಿರುವ ಮಕ್ಕಳಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರನ್ನು ವೈಭವಿಕರಿಸಿದರೆ ಆಗೋದು ಹೀಗೆ. ಏನಂತೀರಿ ಸಿದ್ದರಾಮಯ್ಯನವರೇ?’ ಎಂದು ಬಿಜೆಪಿ ಪ್ರಶ್ನಿಸಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News