UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ

ಉತ್ತರ ಪ್ರದೇಶದ ಚುನಾವಣೆಗೆ ಕಾಂಗ್ರೆಸ್ ವರಿಷ್ಠರು ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನ, ಅನುಭವವನ್ನು ಕಡೆಗಣನೆ ಮಾಡಿದ್ದಾರೆ.

Written by - Zee Kannada News Desk | Last Updated : Jan 25, 2022, 08:45 PM IST
  • ಉತ್ತರ ಪ್ರದೇಶ ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಮಲ್ಲಿಕಾರ್ಜುನ ಖರ್ಗೆರನ್ನು ‘ಕೈ’ಬಿಡಲಾಗಿದೆ
  • ಕಾಂಗ್ರೆಸ್ ವರಿಷ್ಠರು ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನ, ಅನುಭವವನ್ನು ಕಡೆಗಣನೆ ಮಾಡಿದ್ದಾರೆ
  • ಎಲ್ಲಿಂದಲೋ ಬಂದ ಹಾರ್ದಿಕ್‌ ಪಟೇಲ್, ಕನ್ಹಯ್ಯ ಕುಮಾರ್ ಗೆ ನೀಡಿದ ಗೌರವದಷ್ಟೂ ಖರ್ಗೆಯವರಿಗೆ ನೀಡಿಲ್ಲ
UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ title=
ಕಾಂಗ್ರೆಸ್ ನಿಂದ ಖರ್ಗೆ ಹಿರಿತನ, ಅನುಭವ ಕಡೆಗಣನೆ

ಬೆಂಗಳೂರು: ಉತ್ತರ ಪ್ರದೇಶ ಚುನಾವಣಾ(Uttar Pradesh Elections 2022) ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರನ್ನು ‘ಕೈ’ಬಿಟ್ಟಿರುವುದನ್ನು ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರು ಬಿಜೆಪಿ ‘ದಲಿತ ನಾಯಕ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಹಗುರವೇ?’ ಅಂತಾ ಪ್ರಶ್ನಿಸಿದೆ.

#ದಲಿತವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರನ್ನು ಉತ್ತರ ಪ್ರದೇಶ ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಡಲಾಗಿದೆ. ದಲಿತ ನಾಯಕ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಹಗುರವೇ?’ ಅಂತಾ ಕುಟುಕಿದೆ.

ಇದನ್ನೂ ಓದಿ: ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ನಮಗೂ ಮಂತ್ರಿಗಿರಿ ಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

‘ಉತ್ತರ ಪ್ರದೇಶದ ಚುನಾವಣೆ(UP Election 2022)ಗೆ ಕಾಂಗ್ರೆಸ್ ವರಿಷ್ಠರು(Congress High Command) ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನ, ಅನುಭವವನ್ನು ಕಡೆಗಣನೆ ಮಾಡಿದ್ದಾರೆ. ನಕಲಿ ಗಾಂಧಿ‌ ಕುಟುಂಬಕ್ಕೆ ನಿಷ್ಠರಾಗಿದ್ದರೂ ಎಲ್ಲಿಂದಲೋ ಬಂದ ಹಾರ್ದಿಕ್‌ ಪಟೇಲ್, ಕನ್ಹಯ್ಯ ಕುಮಾರ್ ಗೆ ನೀಡಿದ ಗೌರವದಷ್ಟೂ ಖರ್ಗೆಯವರಿಗೆ ನೀಡಿಲ್ಲ. ಇದು ದಲಿತ ನಾಯಕನಿಗೆ ಅವಮಾನವಲ್ಲದೆ ಮತ್ತೇನು?’ ಅಂತಾ ಪ್ರಶ್ನಿಡಿದೆ.

‘ರಾಜ್ಯದಲ್ಲಿ ದಲಿತ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುತ್ತೇನೆ ಎಂಬ ಭರವಸೆಯನ್ನು ಕಾಂಗ್ರೆಸ್ ವರಿಷ್ಠರು ಇದುವರೆಗೆ ನೀಡಿಲ್ಲ. ಡಾ.ಜಿ.ಪರಮೇಶ್ವರ್(G Parameshwara) ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಘೋಷಣೆಯ ನಿರೀಕ್ಷೆ ಮಾಡಲು ಸಾಧ್ಯವೇ? #ದಲಿತವಿರೋಧಿಕಾಂಗ್ರೆಸ್ ಪಕ್ಷದಿಂದ ಇದು ಅಸಾಧ್ಯ’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: Basavaraj Bommai : 30 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾರಿಗೆ ಯಾವ ಜಿಲ್ಲೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News