ಕಾಂಗ್ರೆಸ್ ಕಾಲದ ಅಕ್ರಮಗಳ ಫಲಶ್ರುತಿಯೇ ಇಂದಿನ ಪರಿಸ್ಥಿತಿಗೆ ಕಾರಣ: ಬಿಜೆಪಿ

ಕೆಪಿಎಸ್‌ಸಿ ಹಾಗೂ ಪೊಲೀಸ್ ನೇಮಕ ಸಮಯದಲ್ಲಿ ನಡೆದ ಅಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿದ್ದೇಕೆ? ಸಿದ್ದರಾಮಯ್ಯ ಅವರೇ ಈ ಹಗರಣದಲ್ಲಿ ನೀವು ಪಡೆದ ಪರ್ಸೆಂಟೇಜ್ ಎಷ್ಟು? ಎಂದು ಪ್ರಶ್ನಿಸಿದೆ.

Written by - Zee Kannada News Desk | Last Updated : May 5, 2022, 02:54 PM IST
  • ಕಾಂಗ್ರೆಸ್‌ ಕಾಲದಲ್ಲಿ ಮಾಡಿದ ಅಕ್ರಮಗಳ ಫಲಶ್ರುತಿಯೇ ಇಂದಿನ ಪರಿಸ್ಥಿತಿಗೆ ಕಾರಣ
  • ಕಾಂಗ್ರೆಸ್ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಗಳನ್ನು ತನಿಖೆಗೆ ಒಳಪಡಿಸಿಲ್ಲವೇಕೆ‌ ಸಿದ್ದರಾಮಯ್ಯ?
  • ಕೆಪಿಎಸ್‌ಸಿ ಹಾಗೂ ಪೊಲೀಸ್ ನೇಮಕ ಸಮಯದಲ್ಲಿ ನಡೆದ ಅಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿದ್ದೇಕೆ?
ಕಾಂಗ್ರೆಸ್ ಕಾಲದ ಅಕ್ರಮಗಳ ಫಲಶ್ರುತಿಯೇ ಇಂದಿನ ಪರಿಸ್ಥಿತಿಗೆ ಕಾರಣ: ಬಿಜೆಪಿ  title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಕಾಣುವಂತೆ ಕಾಂಗ್ರೆಸ್‌ ಕಾಲದಲ್ಲಿ ಮಾಡಿದ ಅಕ್ರಮಗಳ ಫಲಶ್ರುತಿಯೇ ಇಂದಿನ ಪರಿಸ್ಥಿತಿಗೆ ಕಾರಣ’ವೆಂದು ಆರೋಪಿಸಿದೆ.

‘ಕಾಂಗ್ರೆಸ್ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಗಳನ್ನು ತನಿಖೆಗೆ ಒಳಪಡಿಸಿಲ್ಲವೇಕೆ‌ ಸಿದ್ದರಾಮಯ್ಯ? ಬಿಜೆಪಿ ಸರ್ಕಾರ ತನಿಖೆಯ ಆಳ ಇಳಿದಂತೆ ಬಿಸಿ ತಟ್ಟಿತೇ? ಕೆಪಿಎಸ್‌ಸಿ ಹಾಗೂ ಪೊಲೀಸ್ ನೇಮಕ ಸಮಯದಲ್ಲಿ ನಡೆದ ಅಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿದ್ದೇಕೆ? ಸಿದ್ದರಾಮಯ್ಯ ಅವರೇ ಈ ಹಗರಣದಲ್ಲಿ ನೀವು ಪಡೆದ ಪರ್ಸೆಂಟೇಜ್ ಎಷ್ಟು?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ನರ್ಸ್‌ಗಳಿಗೆ ಸರ್ಟಿಫಿಕೇಟ್ ಕೊಡೋದರಲ್ಲಿ ಅಶ್ವತ್ಥ ನಾರಾಯಣ ಅವರಿಗೆ ದೊಡ್ಡ ಇತಿಹಾಸವಿದೆ: ಹೆಚ್‌ಡಿಕೆ ಹೊಸ ಬಾಂಬ್

‘ಮಜವಾದಿ ನಾಯಕ ಸಿದ್ದರಾಮಯ್ಯನವರೇ ಪಿಎಸ್ಐ ನೇಮಕ ಹಗರಣದ ಬಗ್ಗೆ ವೃಥಾರೋಪ ಮಾಡುವ‌ ಮುನ್ನ ನಿಮ್ಮ ಸರ್ಕಾರದ ಅವಧಿಯಲ್ಲಿ‌ ನಡೆದ ನೇಮಕ ದಂಧೆಯ ಬಗ್ಗೆ ಸ್ವಲ್ಪ ಕಣ್ಣು ಹಾಯಿಸುವಿರಾ? ಕೆಪಿಸಿಸಿಯ #ಭ್ರಷ್ಟಾಧ್ಯಕ್ಷರ ಕಮಾಯಿ ಬಗ್ಗೆ ಮಾತನಾಡುವ ತಾಕತ್ತು ತೋರುವಿರಾ?’ ಎಂದು ಕುಟುಕಿದೆ.

‘ಡಿಕೆ ಸಹೋದರರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೆಪಿಎಸ್‌ಸಿಯನ್ನು ಅಕ್ರಮದ ಗೂಡನ್ನಾಗಿ ಪರಿವರ್ತಿಸಿದ್ದರು. ತಮ್ಮ ಸಂಬಂಧಿಯನ್ನು ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ನಡೆಸಿದ ಅಕ್ರಮಕ್ಕೆ ಇಲ್ಲಿದೆ ಸಾಕ್ಷ್ಯ. ನೇಮಕಾತಿಗೆ 25 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದು ಏಕೆ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕ ಆತ್ಮಹತ್ಯೆಗೆ ಶರಣು...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News