ಬೆಂಗಳೂರು: ತುಷ್ಟೀಕರಣದ ಉತ್ತುಂಗಕ್ಕೆ ತಲುಪಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ನಾಳೆ ಯತೀಂದ್ರ ಸಿದ್ದರಾಮಯ್ಯರಿಗೆ "ಟಿಪ್ಪು" ಎಂದು ನಾಮಕರಣ ಮಾಡಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಟೀಕಿಸಿದೆ.
ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರೀಯ ಪ್ರೇಮಿ, ಹೀಗಾಗಿ ಟಿಪ್ಪು ಜಯಂತಿ ಆಚರಣೆ ಮಾಡಬೇಕು. ಮೈಸೂರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದ್ದಾರೆ. ಇದರ ಜೊತೆಗೆ ಕೆಲ ಕಾಂಗ್ರೆಸ್ ನಾಯಕರು ಟಿಪ್ಪು ಜಪ ಮಾಡುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಸಿರುವ ಬಿಜೆಪಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದೆ.
ಇದನ್ನೂ ಓದಿ: ಸದನದಲ್ಲಿ ವಿರೋಧ ಪಕ್ಷದ ನಾಯಕನ ಕೊರತೆ ಕಾಣುತ್ತಿತ್ತು : ಸಲೀಂ ಅಹಮದ್
ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ಕೊಡುತ್ತಿರುವ @siddaramaiah ಅವರು ಅವರನ್ನು ಇನ್ನೂ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು:
▪️ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ
▪️ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರು ನಾಮಕರಣ
▪️ಮೈಸೂರು ವಿವಿಗೆ ಟಿಪ್ಪು ಹೆಸರು
▪️ಟಿಪ್ಪುವಿನ 108 ಅಡಿ ಪ್ರತಿಮೆ
▪️ಟಿಪ್ಪು…— BJP Karnataka (@BJP4Karnataka) December 16, 2023
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ರೂ. ಕೊಡುತ್ತಿರುವ ಸಿಎಂ ಸಿದ್ದರಾಮಯ್ಯನವರು ಅವರನ್ನು ಇನ್ನೂ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು ಈ ರೀತಿ ಇವೆ. ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ, ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರುನಾಮಕರಣ, ಮೈಸೂರು ವಿವಿಗೆ ಟಿಪ್ಪು ಹೆಸರು, ಟಿಪ್ಪುವಿನ 108 ಅಡಿ ಪ್ರತಿಮೆ, ಟಿಪ್ಪು ಮದ್ಯದ ಬಾಟಲಿ, ಬಿಎಂಟಿಸಿ/ಕೆಎಸ್‌ಆರ್‌ಟಿಸಿಗೆ ಟಿಪ್ಪು ಸಾರಿಗೆ ಎಂಬ ಹೆಸರು’ ಎಂದು ಟೀಕಿಸಿದೆ.
‘ದೇಶದ್ರೋಹಿಗಳು, ನಾಡ ವಿರೋಧಿಗಳು, ಭಯೋತ್ಪಾದಕರು, ಗೂಂಡಾಗಳು ಕಾಂಗ್ರೆಸ್ ಸರ್ಕಾರಕ್ಕೆ ಅಪ್ಯಾಯಮಾನವಾಗುವುದು ಸಾಮಾನ್ಯ. ಮತಾಂಧ ಟಿಪ್ಪುವಿನ ಜಯಂತಿ ಆಚರಿಸಿದ್ದ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಇದೀಗ ಅವರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡಲು ಇನ್ನಿಲ್ಲದ ಯತ್ನ ಮಾಡುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.
ದೇಶದ್ರೋಹಿಗಳು, ನಾಡ ವಿರೋಧಿಗಳು, ಭಯೋತ್ಪಾದಕರು, ಗೂಂಡಾಗಳು @INCKarnataka ಸರ್ಕಾರಕ್ಕೆ ಅಪ್ಯಾಯಮಾನವಾಗುವುದು ಸಾಮಾನ್ಯ.
ಮತಾಂಧ ಟಿಪ್ಪುವಿನ ಜಯಂತಿ ಆಚರಿಸಿದ್ದ @siddaramaiah ಅವರ ಸರ್ಕಾರ ಇದೀಗ ಅವರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡಲು ಇನ್ನಿಲ್ಲದ ಯತ್ನ ಮಾಡುತ್ತಿದೆ.
ಮೈಸೂರು ಒಡೆಯರಿಂದ ಅಧಿಕಾರ ಕಸಿದು ವಂಶವನ್ನೇ… pic.twitter.com/kkgY6v3RIQ
— BJP Karnataka (@BJP4Karnataka) December 15, 2023
ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ!
‘ಮೈಸೂರು ಒಡೆಯರಿಂದ ಅಧಿಕಾರ ಕಸಿದು ವಂಶವನ್ನೇ ಸರ್ವನಾಶ ಮಾಡಲು ಕುತಂತ್ರವೆಸಗಿ, ಕನ್ನಡವನ್ನೇ ಅಳಿಸಿ ಪಾರ್ಸಿ ಭಾಷೆಯನ್ನು ಅಡಳಿತ ಭಾಷೆಯನ್ನಾಗಿ ಮಾಡಿ, ನಗರಗಳ ಹೆಸರಗಳನ್ನು ಇಸ್ಲಾಮೀಕರಣ ಮಾಡಿ, ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿ, ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪುವಿನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲು ಕಾಂಗ್ರೆಸ್ಸಿಗರು ಯತ್ನಿಸುತ್ತಿರುವುದು ನಿಜಕ್ಕೂ ನಾಡಿಗೆ ಮಾಡುತ್ತಿರುವ ದ್ರೋಹವೆಂದು ಬಿಜೆಪಿ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.