ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕಂತೆ ಕಂತೆ ಹಣ ಪತ್ತೆ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಭ್ರಷ್ಟಾಚಾರದ ವಿಡಿಯೋವನ್ನು ಬಿಡುಗಡೆ ಮಾಡಿದೆ.
‘₹600 ಕೋಟಿ ಬಿಡುಗಡೆ ಮಾಡಿದ್ದರಲ್ಲೇ ₹102 ಕೋಟಿಯಷ್ಟು ಕಮಿಷನ್ ಪಾಲು ಪತ್ತೆಯಾಗಿದೆ! ಬೆಂಗಳೂರು ಅಭಿವೃದ್ಧಿಯ ‘ಹೆಸರಿನಲ್ಲಿ’ ಈಗಾಗಲೇ ಸಾವಿರಾರು ಕೋಟಿಗಳನ್ನು ಬಜೆಟ್ನಲ್ಲಿ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯನವರು ಪಂಚರಾಜ್ಯ ಮತ್ತು ಲೋಕಸಭೆ ಚುನಾವಣೆಗಾಗಿ ಹೈ ಕಮಾಂಡ್ಗೆ ಕಳಿಸಬೇಕಿರುವ ಮೊತ್ತ ಕೇಳಿದರೆ ನೀವು ಕೂತಲ್ಲೇ ಹೌಹಾರಬಹುದು. ಹಾಗಾಗಿ ಈ ವಿಡಿಯೋ ಪ್ಲೇ ಮಾಡುವ ಮೊದಲು ಮನಸ್ಸು ಗಟ್ಟಿ ಮಾಡಿಕೊಳ್ಳಿ’ ಎಂದು ವಿಡಿಯೋ ಹಂಚಿಕೊಂಡಿದೆ.
₹600 ಕೋಟಿ ಬಿಡುಗಡೆ ಮಾಡಿದ್ದರಲ್ಲೇ ₹102 ಕೋಟಿಯಷ್ಟು ಕಮಿಷನ್ ಪಾಲು ಪತ್ತೆಯಾಗಿದೆ! ಬೆಂಗಳೂರು ಅಭಿವೃದ್ಧಿಯ ‘ಹೆಸರಿನಲ್ಲಿ’ ಈಗಾಗಲೇ ಸಾವಿರಾರು ಕೋಟಿಗಳನ್ನು ಬಜೆಟ್ನಲ್ಲಿ ಮೀಸಲಿಟ್ಟಿರುವ @siddaramaiah ಅವರು ಪಂಚರಾಜ್ಯ ಮತ್ತು ಲೋಕಸಭೆ ಚುನಾವಣೆಗಾಗಿ ಹೈ ಕಮಾಂಡ್ಗೆ ಕಳಿಸಬೇಕಿರುವ ಮೊತ್ತ ಕೇಳಿದರೆ ನೀವು ಕೂತಲ್ಲೇ ಹೌಹಾರಬಹುದು.… pic.twitter.com/6KAwMNXftE
— BJP Karnataka (@BJP4Karnataka) October 18, 2023
ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನೋಡಿ ಬಿಜೆಪಿ ನಾಯಕರಿಗೆ ಸಹಿಸಲು ಆಗುತ್ತಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್
‘ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ನೀಡಿರುವ ಸಾವಿರ ಕೋಟಿ ರೂ.ಗಳ ಮೊದಲ ಹಂತದ ಟಾರ್ಗೆಟ್ ತಲುಪಲು ಸಿಎಂ ಸಿದ್ದರಾಮಯ್ಯರ ಸರ್ಕಾರ ಆಯ್ಕೆ ಮಾಡಿಕೊಂಡಿರುವ ವಾಮಮಾರ್ಗಗಳು. ಕೃಷಿ ಅಧಿಕಾರಿಗಳಿಂದ ಕಲೆಕ್ಷನ್, ಅಬಕಾರಿ ಅಧಿಕಾರಿಗಳಿಂದ ಕಲೆಕ್ಷನ್, ಗುತ್ತಿಗೆದಾರರ ಮೂಲಕ ಕಲೆಕ್ಷನ್, ಅಧಿಕಾರಿಗಳಿಂದ ದಸರಾ ಕಮಿಷನ್ ಮತ್ತು ಶ್ಯಾಡೋ ಸಿಎಂ ವರ್ಗಾವಣೆ ಕಲೆಕ್ಷನ್. ಕಾಂಗ್ರೆಸ್ ಬಂದಿದೆ ಲೂಟಿ ಮಾಡುತ್ತಿದೆ, ಕಲೆಕ್ಷನ್ ಉಚಿತ, ಕಮಿಷನ್ ಖಚಿತ, ಕರಪ್ಷನ್ ನಿಶ್ಚಿತ’ವೆಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಜ್ಯದ @INCKarnataka ಕ್ಕೆ ಹೈಕಮಾಂಡ್ ನೀಡಿರುವ ಸಾವಿರ ಕೋಟಿ ರೂಪಾಯಿಗಳ ಮೊದಲ ಹಂತದ ಟಾರ್ಗೆಟ್ ತಲುಪಲು @siddaramaiah ಅವರ ಸರ್ಕಾರ ಆಯ್ಕೆ ಮಾಡಿಕೊಂಡಿರುವ ವಾಮಮಾರ್ಗಗಳು..!
✔️ ಕೃಷಿ ಅಧಿಕಾರಿಗಳಿಂದ ಕಲೆಕ್ಷನ್..!
✔️ ಅಬಕಾರಿ ಅಧಿಕಾರಿಗಳಿಂದ ಕಲೆಕ್ಷನ್..!
✔️ ಗುತ್ತಿಗೆದಾರರ ಮೂಲಕ ಕಲೆಕ್ಷನ್..!
✔️ ಅಧಿಕಾರಿಗಳಿಂದ ದಸರಾ…— BJP Karnataka (@BJP4Karnataka) October 18, 2023
‘ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ಮೇಲೆ ಕಲೆಕ್ಷನ್, ಕಮಿಷನ್ ದಂಧೆ ಶಿಕ್ಷಣ ವ್ಯವಸ್ಥೆಗೂ ವಿಸ್ತರಿಸಿದೆ. ಲಂಚದ ಕಲೆಕ್ಷನ್ಗಾಗಿಯೇ ಸಿದ್ದರಾಮಯ್ಯರ ಸರ್ಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿರುವುದೇ ಇದಕ್ಕೆ ನಿದರ್ಶನ. ಸರ್ಕಾರದ್ದೇ ಅಂಗಸಂಸ್ಥೆಯಾದ ಚಿತ್ರಕಲಾ ಪರಿಷತ್ತಿಗೆ ಬೆಂಗಳೂರು ವಿವಿ ಪರಿಶೀಲನಾ ಸಮಿತಿ ಅಧ್ಯಕ್ಷರು ಲಂಚಕ್ಕೆ ಬೇಡಿಕೆಯಿಟ್ಟಿರುವುದು ಈ ಸರ್ಕಾರದ ಭ್ರಷ್ಟ ಬೇರುಗಳು ಎಲ್ಲೆಲ್ಲೂ ಹಬ್ಬಿರುವುದರ ಸೂಚನೆ. ಕಲೆಕ್ಷನ್ ಮಾಸ್ಟರ್ಗಳೇ ಕುರ್ಚಿ ಮೇಲೆ ಕೂತಿರುವಾಗ ಕಲೆಕ್ಷನ್ ಶಿಷ್ಯಂದಿರಿಗೆ ಕಡಿವಾಣ ಬೀಳುವುದು ಅಸಾಧ್ಯ’ವೆಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ಮೇಲೆ ಕಲೆಕ್ಷನ್, ಕಮಿಷನ್ ದಂಧೆ ಶಿಕ್ಷಣ ವ್ಯವಸ್ಥೆಗೂ ವಿಸ್ತರಿಸಿದೆ. ಲಂಚದ ಕಲೆಕ್ಷನ್ಗಾಗಿಯೇ @siddaramaiah ಅವರ ಸರ್ಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿರುವುದೇ ಇದಕ್ಕೆ ನಿದರ್ಶನ.
ಸರ್ಕಾರದ್ದೇ ಅಂಗಸಂಸ್ಥೆಯಾದ ಚಿತ್ರಕಲಾ ಪರಿಷತ್ತಿಗೆ ಬೆಂಗಳೂರು ವಿವಿ ಪರಿಶೀಲನಾ ಸಮಿತಿ ಅಧ್ಯಕ್ಷರು… pic.twitter.com/3oBwSXVSC6
— BJP Karnataka (@BJP4Karnataka) October 18, 2023
ಇದನ್ನೂ ಓದಿ: ಪೊಲೀಸ್ ಕ್ವಾಟ್ರಸ್ ವಾಸಕ್ಕೆ ಯೋಗ್ಯವಲ್ಲ ಎಂಬ ವಿಚಾರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.