ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನದ ಹೈಲೈಟ್ಸ್

ಅಮಿತ್ ಷಾ ಸಮ್ಮುಖದಲ್ಲಿ  ಹಲವು ಕಾಂಗ್ರೆಸ್ ನಾಯಕರ ಬಿಜೆಪಿಗೆ ಸೇರ್ಪಡೆ.

Last Updated : Nov 2, 2017, 10:59 AM IST
ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನದ ಹೈಲೈಟ್ಸ್ title=

ಬೆಂಗಳೂರು: ಇಂದಿನಿಂದ ಪ್ರಾರಂಭಗೊಳ್ಳಲಿರುವ 75 ದಿನಗಳ ಬಿಜೆಪಿ ಪರಿವರ್ತನಾ ಯಾತ್ರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಬಳಿ ಇರುವ ಮಾದಾವರ ನೈಸ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. 

ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನದ ಹೈಲೈಟ್ಸ್:

* ವೇದಿಕೆಯಲ್ಲಿ ಪ್ರಮುಖ ನಾಯಕರು ಕೂರಲು 150 ಆಸನಗಳ ವ್ಯವಸ್ಥೆ ಮಾಡಲಾಗಿದೆ.

* 27ಪ್ರಮುಖ ನಾಯಕರು ಕೂರಲು ಮೊದಲ ಸಾಲಿನಲ್ಲೇ ವ್ಯವಸ್ಥೆ.

* 60 ಸಾವಿರ ಕಾರ್ಯಕರ್ತರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ.

* ಬೆಳಗ್ಗೆ 11 ಗಂಟೆ ಪರಿವರ್ತನ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಲಿದ್ದಾರೆ. 

* ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ವೇದಿಕೆ ಸಜ್ಜಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಹಾಗೂ ರಾಜ್ಯದ್ಯಕ್ಷ ಬಿಎಸ್ ವೈ ಪರಿವರ್ತನಾ ರ್ಯಾಲಿಗೆ ಚಾಲನೆ.

*  ಬೃಹತ್ ಸಮಾವೇಶದಲ್ಲಿ ಮೂರು ದ್ರೋಣ್ ಕ್ಯಾಮೆರಾ ಬಳಕೆ. ಸಾಮಾಜಿಕ ಜಾಲ ತಾಣದಲ್ಲಿ ಯಾತ್ರೆ ಬಿತ್ತರಿಸಲು ಹೈಟೆಕ್ ತಂತ್ರಜ್ಞಾನ ಅಳವಡಿಕೆ.

* ಮೈದಾನದಲ್ಲಿ ಬೃಹತ್ 6ಎಲ್.ಸಿ.ಡಿಗಳನ್ನು ಅಳವಡಿಸಲಾಗಿದೆ. 

* ಮೈದಾನದಲ್ಲಿ 30ಕ್ಕೂ ಹೆಚ್ಚು ಸಿಸಿ ಕ್ಯಾಮರಗಳ ಅಳಡವಳಿಕೆ‌.

* ರಾಜ್ಯ 17  ಜಿಲ್ಲೆಗಳ ಪ್ರತಿ ಬೂತ್ ನಿಂದಲೂ 3 ಬೈಕ್ ಗಳಲ್ಲಿ ಆರು ಕಾರ್ಯಕರ್ತರ ಆಗಮನ.

* ಮೈದಾನದಲ್ಲಿ ವ್ಯಾಪಕ ಪೊಲಿಸ್ ವ್ಯವಸ್ಥೆ:
ನೆಲಮಂಗಲ ಮಾದವಾರ ಬಿಐಇಸಿ ಮೈದಾನದಲ್ಲಿ  ಪರಿವರ್ತನಾ ರ್ಯಾಲಿ.
SP- 4, ASP- 4, DYSP- 14, CPI- 31, PSI- 61, ASI- 135, POLICE- 717, HOME GUARD- 250, WPC- 50 ಪೋಲೀಸ್ ಪಡೆ ಅಲ್ಲದೆ 6 ಕೆಎಸ್ಆರ್,ಪಿ 8 ಡಿಎಆರ್ ತುಕಡಿ ನಿಯೋಜನೆಗೊಂಡಿದೆ. ಒಟ್ಟು 15,000ಕ್ಕೂ ಹೆಚ್ಚು ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ಬಿಗಿ ಭದ್ರತೆ.

* ಒಂದು ಲಕ್ಷ ಬೈಕ್ ಹಾಗೂ ನಾಲ್ಕು ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ.

* ಅಮಿತ್ ಷಾ ಸಮ್ಮುಖದಲ್ಲಿ  ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಹಲವು ಕಾಂಗ್ರೆಸ್ ನಾಯಕರು. ಅಮಿತ್ ಷಾ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ನಾಯಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲಿದ್ದಾರೆ.

- ಚೆನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್.
- ಕುಡಚಿ ಶಾಸಕ ಪಿ. ರಾಜೀವ್.
- ರಾಯಚೂರಿನ ನಿವೃತ್ತ ನ್ಯಾಯಾಧೀಶ ಜಿ.ಆರ್. ಪಾಟೀಲ್.
- ರಾಮನಗರದ ಕಾಂಗ್ರೆಸ್ ನಾಯಕಿ ನಂದಿನಿ ಗೌಡ
- ಕೆ.ಆರ್.ನಗರದ ಹೊಸಳ್ಳಿ ವೆಂಕಟೇಶ್ ಬಿಜೆಪಿಗೆ ಸೇರ್ಪಡೆ.

Trending News