ಬೆಂಗಳೂರು: ಇಂದಿನಿಂದ ಜ.28ರವರೆಗೆ 75 ದಿನಗಳ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ರ್ಯಾಲಿಯನ್ನು ಕೈಗೊಳ್ಳಲಿದೆ.
And the Ratha is ready.....
75 days
7500+ Kms
224 Constituencies #ParivartanaYatre pic.twitter.com/sjJPQJcr5M— BJP Karnataka (@BJP4Karnataka) November 1, 2017
75 ದಿನಗಳ ಪರಿವರ್ತನಾ ಯಾತ್ರೆಯ ಪ್ರಮುಖ ಅಂಶಗಳು:
* ಕೇರಳದ ಜನರಕ್ಷಾ ಯಾತ್ರೆಯ ಸ್ವರೂಪದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ 'ಬಿಜೆಪಿ ಪರಿವರ್ತನಾ ಯಾತ್ರೆ'.
* ನವೆಂಬರ್ 2 ರಂದು ಆರಂಭವಾಗಿ 2018 ಜನವರಿ 28ರ ವರೆಗೆ 75 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ.
* ನವೆಂಬರ್ 2 ರಂದು ಬೆಂಗಳೂರು ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಸಮಾವೇಶದ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
* ಪರಿವರ್ತನಾ ಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
* ಇಂದಿನ ಸಮಾವೇಶಕ್ಕೆ ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್ಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ.
* ಒಂದು ಬೂತ್ ನಿಂದ ಕನಿಷ್ಠ 3 ಬೈಕ್ಗಳಲ್ಲಿ 6 ಕಾರ್ಯರ್ತರು ಭಾಗವಹಿಸಲು ಸೂಚನೆ ನೀಡಲಾಗಿದೆ.
* ಭಾಗವಹಿಸುವ ಪ್ರತಿ ಕಾರ್ಯಕರ್ತನ ಮಾಹಿತಿಯನ್ನು ರಾಜ್ಯ ಬಿಜೆಪಿ ಘಟಕ ಸಂಗ್ರಹಿಸಲಿದೆ.
* 75 ದಿನಗಳ ಕಾಲ ಯಾತ್ರೆಯಲ್ಲಿ ಪ್ರಯಾಣಿಸಲು ವಿಶೇಷವಾಗಿ ಸಿದ್ದಪಡಿಸಿರುವ ವಾಹನದಲ್ಲಿ ಯಡಿಯೂರಪ್ಪ ಪ್ರಯಾಣಿಸಲಿದ್ದಾರೆ.
* ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಪರಿವರ್ತನಾ ಯಾತ್ರೆ.
* BIEC ಸಮಾವೇಶದ ಉಸ್ತುವಾರಿಯನ್ನು ಮಾಜಿ ಡಿಸಿಎಂ ಆರ್. ಅಶೋಕ್ ಹೊತ್ತಿದ್ದಾರೆ.
* BIECಯಲ್ಲಿ ಊಟದ ಬಳಿಕ ತುಮಕೂರು ಜಿಲ್ಲೆಯ ಕುಣಿಗಲ್ಗೆ ಸಂಜೆ 5ಕ್ಕೆ ರ್ಯಾಲಿ ಆಗಮಿಸಲಿದ್ದು ಯಡಿಯೂರಿನಲ್ಲಿ ವಾಸ್ತವ್ಯ ಹೂಡಲಿದೆ.
* ಯಾತ್ರೆಯು ಪ್ರತಿದಿನ ಸುಮಾರು ನೂರು ಕಿಮೀಗೂ ಹೆಚ್ಚು ಸಂಚಾರ ಮಾಡಲಿದೆ.
* ಡಿಸೆಂಬರ್ 21 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.
* ಉಳಿದಂತೆ ಕೇಂದ್ರದ ಸಚಿವರು, ಪ್ರಭಾವಿ ನಾಯಕರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿಯ ನಾಯಕರು ಅಲ್ಲಲ್ಲಿ ನಡೆಯುವ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.
* ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರಗೆ ರಾಜ್ಯ ಸರ್ಕಾರ ಅನುಮತಿ ನೀಡದ ಕಾರಣ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆ. ನವೆಂಬರ್ 8 ರಂದು ಕೊಡಗು ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ಪ್ರವೇಶ ಮಾಡಬೇಕಿತ್ತು.
* ಮಂಗಳೂರು ಜಿಲ್ಲೆಯನ್ನು ಯಾತ್ರೆ ಪ್ರವೇಶ ಮಾಡಿದ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥರನ್ನ ಸಮಾವೇಶಕ್ಕೆ ಕರೆತರುವ ಸಾಧ್ಯತೆ ಇದ್ದು, ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚರಿಸಲಿದೆ. ನವೆಂಬರ್ 11 ರಂದು ಯೋಗಿ ಬರುವ ಸಾಧ್ಯತೆ ಹೆಚ್ಚಾಗಿದೆ.
* ಜನವರಿ 18, 2018 ರಂದು ಉಡುಪಿ ಅಷ್ಠ ಮಠ ಪರ್ಯಾಯದಲ್ಲಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ.
* ಜನವರಿ 25, 2018 ರಂದು ಮೈಸೂರಿನಲ್ಲಿ ಬೃಹತ್ ರ್ಯಾಲಿ ಹಾಗೂ ಸಮಾವೇಶ ನಡೆಯಲಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವು 2018ರ ವಿಧಾನ ಸಭಾ ಚುನಾವಣೆಯ ಪ್ರತಿಷ್ಠಿತ ಅಖಾಡವಾಗಿದೆ.
* 224 ವಿಧಾನಸಭಾ ಕ್ಷೇತ್ರಗಳನ್ನ ಸುತ್ತಿ, ಜನವರಿ 25, 2018ರಂದು ಬೆಂಗಳೂರಿಗೆ ಆಗಮಿಸುವ ಪರಿವರ್ತನಾ ರ್ಯಾಲಿ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಥಯಾತ್ರೆ ಮುಕ್ತಾಯ ಸಮಯದಲ್ಲಿ ಹಾಜರಾಗಲಿದ್ದಾರೆ.