ವಿಧಾನ ಪರಿಷತ್ ಕಲಾಪದ ವೇಳೆ ಮೊಬೈಲ್ ವೀಕ್ಷಿಸಿದ ಬಿಜೆಪಿ ಸದಸ್ಯ ರವಿಕುಮಾರ್

ರಾಜ್ಯದಲ್ಲಿ 2008ರಿಂದ 2013ರವರೆಗೆ ಇದ್ದ ಬಿಜೆಪಿ ಸರ್ಕಾರಕ್ಕೆ ಮುಳುವಾದ ವಿಷಯಗಳಲ್ಲಿ 'ಸದನದಲ್ಲಿ ಸಚಿವರು ಬ್ಲೂಂ ಫಿಲಂ ನೋಡಿದ್ದು ಬಹಳ ಪ್ರಮುಖವಾದುದು.

Last Updated : Sep 21, 2020, 04:05 PM IST
  • ಇಂದು ವಿಧಾನ ಪರಿಷತ್ತಿನಲ್ಲಿ ಸಂತಾಪ ಸೂಚಕ ಪ್ರಕ್ರಿಯೆ ನಡೆಯುತ್ತಿದ್ದಾಗ ಮಾಧ್ಯಮದಲ್ಲಿ ಸದಾ ಸತ್ಯನಿಷ್ಟನಂತೆ ಪೋಜು ನೀಡುವ ಬಿಜೆಪಿಯ ಸದಸ್ಯ
  • ಅತ್ತ ವಿಧಾನ ಪರಿಷತ್ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುತ್ತಿದ್ದರೆ ಇತ್ತ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಟ್ಸ್ ಅಪ್ ಚಾಟ್ ನೋಡುತ್ತಾ ಮೈಮರೆತಿದ್ದರು.‌
ವಿಧಾನ ಪರಿಷತ್ ಕಲಾಪದ ವೇಳೆ ಮೊಬೈಲ್ ವೀಕ್ಷಿಸಿದ ಬಿಜೆಪಿ ಸದಸ್ಯ ರವಿಕುಮಾರ್ title=
Image courtesy: Twitter

ಬೆಂಗಳೂರು: ಈ‌ ಬಿಜೆಪಿಯವರಿಗೆ ಕೆಟ್ಟ ಮೇಲೂ ಬುದ್ದಿ ಬಂದ ಲಕ್ಷಣಗಳು ‌ಗೋಚರಿಸುತ್ತಿಲ್ಲ. ರಾಜ್ಯದಲ್ಲಿ 2008ರಿಂದ 2013ರವರೆಗೆ ಇದ್ದ ಬಿಜೆಪಿ ಸರ್ಕಾರಕ್ಕೆ ಮುಳುವಾದ ವಿಷಯಗಳಲ್ಲಿ 'ಸದನದಲ್ಲಿ ಸಚಿವರು ಬ್ಲೂಂ ಫಿಲಂ ನೋಡಿದ್ದು ಬಹಳ ಪ್ರಮುಖವಾದುದು. ಆದರೂ ಬಿಜೆಪಿ ಶಾಸಕರು ಹಳೆ ಚಾಳಿ ಬಿಟ್ಟಿಲ್ಲ. ಇಂದು ಮತ್ತೆ ವಿಧಾನ ಮಂಡಲದ ಕಲಾಪದ ವೇಳೆ ಮೊಬೈಲ್ (Mobile) ವೀಕ್ಷಣೆ ಮಾಡಿದ್ದಾರೆ.

ಇಂದು ವಿಧಾನ ಪರಿಷತ್ತಿನಲ್ಲಿ ಸಂತಾಪ ಸೂಚಕ ಪ್ರಕ್ರಿಯೆ ನಡೆಯುತ್ತಿದ್ದಾಗ ಮಾಧ್ಯಮದಲ್ಲಿ ಸದಾ ಸತ್ಯನಿಷ್ಟನಂತೆ ಪೋಜು ನೀಡುವ ಬಿಜೆಪಿಯ ಸದಸ್ಯ ಎನ್. ರವಿಕುಮಾರ್ ಮೊಬೈಲ್ ವೀಕ್ಷಣೆ ಮಾಡಿದ್ದಾರೆ.

ಡ್ಯೂಟಿ ಟೈಂನಲ್ಲಿ ಮೊಬೈಲ್‌ ಬಳಸಿದರೆ ಹುಷಾರ್!

ಅತ್ತ ವಿಧಾನ ಪರಿಷತ್ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುತ್ತಿದ್ದರೆ ಇತ್ತ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಟ್ಸ್ ಅಪ್ (Whatsapp) ಚಾಟ್ ನೋಡುತ್ತಾ ಮೈಮರೆತಿದ್ದರು.‌

ವಿಧಾನಸಭೆಯಲ್ಲಿ ಶಾಸಕರು ವಿಧಾನಸಭೆ ಒಳಗಡೆಗೆ ಮೊಬೈಲ್ ಕೊಂಡೊಯ್ಯಲು ನಿರ್ಬಂಧ ಇದೆ.‌ ಆದರೆ ಮೇಲ್ಮನೆ, ಬುದ್ದಿವಂತರ ಸದನ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಸದನದ‌ ಒಳಗಡೆಗೆ ಸದಸ್ಯರು ಮೊಬೈಲ್ ಕೊಂಡೊಯ್ಯಬಾರದೆಂಬ ನಿರ್ಬಂಧ ಇಲ್ಲ. ಇದನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ (MLC) ಎನ್. ರವಿಕುಮಾರ್  ಸದನದ ಅಮೂಲ್ಯ ಅವಧಿಯಲ್ಲಿ ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದರು.

ಬಿಜೆಪಿ (BJP)ಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್  ವಿಧಾನ ಪರಿಷತ್ ಕಲಾಪದ ವೇಳೆ  ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದ‌ ಬಗ್ಗೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಿದೆ.

Trending News