H.D.Revanna: 'ರೇವಣ್ಣಗೆ ಲೆಕ್ಕವೇ ಬರುವುದಿಲ್ಲ, ಅದಕ್ಕೆ ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ'

ಎಚ್‌.ಡಿ.ರೇವಣ್ಣನವರಿಗೆ ಅಷ್ಟೊಂದು ಲೆಕ್ಕ ಬರುವುದಿಲ್ಲ. ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೊಳೆನರಸೀಪುರ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಶಾಸಕ ಪ್ರೀತಂ ಜೆ ಗೌಡ ತಿರುಗೇಟು ನೀಡಿದರು.

Last Updated : Jan 11, 2021, 08:57 PM IST
  • ಎಚ್‌.ಡಿ.ರೇವಣ್ಣನವರಿಗೆ ಅಷ್ಟೊಂದು ಲೆಕ್ಕ ಬರುವುದಿಲ್ಲ. ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೊಳೆನರಸೀಪುರ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಶಾಸಕ ಪ್ರೀತಂ ಜೆ ಗೌಡ ತಿರುಗೇಟು ನೀಡಿದರು.
  • ತಮ್ಮದೇ ರೀತಿಯಲ್ಲಿ ತಿರುಗೇಟು ನೀಡಿದರು. ಆಕಸ್ಮಿಕವಾಗಿ ಬಂದಿರುವ ಕೂಸು ಅವರು, ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ ಎಂಬ ಶಾಸಕ ಎಚ್.ಡಿ. ರೇವಣ್ಣನ ಟೀಕೆಗೆ ಪ್ರೀತಂ ಜೆ. ಗೌಡ ಟಾಂಗ್ ನೀಡಿದರು.
  • ಆಕಸ್ಮಿಕ ಶಾಸಕನಾಗುವುದಕ್ಕೆ ಯಾವ ಲಾಟರಿ ಟಿಕೆಟ್ ಹೊಡೆದಿಲ್ಲ. ಕ್ಷೇತ್ರದ ಮತದಾರರು ಮತ ಹಾಕಿ ಗೆಲ್ಲಿಸಿರುವುದರಿಂದ ನಾನು ಅಪೇಕ್ಷಿತ. ಆದರೇ ನೀವು ಮಂತ್ರಿ ಆಗಿದ್ದೇ ಆಕಸ್ಮಿಕ.
H.D.Revanna: 'ರೇವಣ್ಣಗೆ ಲೆಕ್ಕವೇ ಬರುವುದಿಲ್ಲ, ಅದಕ್ಕೆ ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ' title=

ಹಾಸನ: ಎಚ್‌.ಡಿ.ರೇವಣ್ಣನವರಿಗೆ ಅಷ್ಟೊಂದು ಲೆಕ್ಕ ಬರುವುದಿಲ್ಲ. ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೊಳೆನರಸೀಪುರ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಶಾಸಕ ಪ್ರೀತಂ ಜೆ ಗೌಡ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಗೌಡ(Preetham Gowda), ತಮ್ಮದೇ ರೀತಿಯಲ್ಲಿ ತಿರುಗೇಟು ನೀಡಿದರು. ಆಕಸ್ಮಿಕವಾಗಿ ಬಂದಿರುವ ಕೂಸು ಅವರು, ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ ಎಂಬ ಶಾಸಕ ಎಚ್.ಡಿ. ರೇವಣ್ಣನ ಟೀಕೆಗೆ ಪ್ರೀತಂ ಜೆ. ಗೌಡ ಟಾಂಗ್ ನೀಡಿದರು.

Anand Singh: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ, ನನ್ನ ಮಾತಿಗೆ ಬದ್ಧ

ಮೊದಲ ಲೆಕ್ಕವಾಗಿ ಹಾಸನ ವಿಧಾನಸಭಾ ಕ್ಷೇತ್ರ ಗೆಲುವು ತೋರಿಸಿದ್ದೇನೆ. ಎರಡನೆಯ ಲೆಕ್ಕವಾಗಿ ಕೆ.ಆರ್. ಪೇಟೆಯಲ್ಲಿ ಗೆದ್ದಿದ್ದೇವೆ, ಮೂರನೇ ಲೆಕ್ಕವನ್ನು ಶಿರಾದಲ್ಲಿ ನೀಡಿದ್ದು, ನಾಲ್ಕನೇ ಲೆಕ್ಕ ಏನಾದರೂ ಬೇಕು ಎಂದರೇ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತರೇ ಇಲ್ಲಿನ ಮತದಾರರು ಲೆಕ್ಕ ಕೊಡಲಿದ್ದಾರೆ ಎಂದರು.

Good News: Lithium ಗಾಗಿ ಇನ್ಮುಂದೆ ಭಾರತ ಚೀನಾ ಮೇಲೆ ಅವಲಂಭಿಸಬೇಕಾಗಿಲ್ಲ... ಕಾರಣ ಇಲ್ಲಿದೆ

ಹೊಳೆನರಸೀಪುರ ಶಾಸಕರಿಗೆ ನನ್ನ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ಬೇಡ. ಆ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದರೇ ಸಾಕು. ಅಷ್ಟೊಂದು ಆಸೆ ಇದ್ದರೇ ಮುಂದೆ ನಡೆಯುವ ಹಾಸನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೇ ಇಲ್ಲಿನ ಜನರು ಸರಿಯಾದ ಲೆಕ್ಕ ಕೊಡಲಿದ್ದಾರೆ ಎಂದು ತಿರುಗೇಟು ನೀಡಿದರು.

B.Sriramulu: ಸಿದ್ದುಗೆ 'ಭರ್ಜರಿ ಟಾಂಗ್' ನೀಡಿದ ಸಚಿವ ಶ್ರೀರಾಮುಲು..!

ಅಭಿವೃದ್ಧಿ ಕೆಲಸ ಮಾಡಿಸಲು ಹಾಸನ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದ ಅವರು, ಇನ್ನು ಲೆಕ್ಕ ಅರ್ಥವಾಗಿಲ್ಲ ಎಂದರೇ, ಅಷ್ಟೊಂದು ಆಸೆ ಇದ್ದರೇ ಮುಂದೆ ನಡೆಯುವ ಹಾಸನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿದರೇ ಇಲ್ಲಿನ ಮತದಾರರು ಸರಿಯಾದ ಲೆಕ್ಕ ನೀಡಿ ಯಾರು ಆಕಸ್ಮಿಕ ಎಂಬುದಕ್ಕೆ ಉತ್ತರ ಸಿಗಲಿದೆ ಎಂದು ಟಾಂಗ್ ನೀಡಿದರು.

School Students: 'ವಿದ್ಯಾರ್ಥಿ'ಗಳಿಗೆ ಗುಡ್ ನ್ಯೂಸ್: 'ಅಟೆಂಡೆನ್ಸ್ ಇಲ್ಲ'ದಿದ್ದರೂ ವಾರ್ಷಿಕ ಪರೀಕ್ಷೆ'ಗೆ ಚಾನ್ಸ್..!?

ಆಕಸ್ಮಿಕ ಶಾಸಕನಾಗುವುದಕ್ಕೆ ಯಾವ ಲಾಟರಿ ಟಿಕೆಟ್ ಹೊಡೆದಿಲ್ಲ. ಕ್ಷೇತ್ರದ ಮತದಾರರು ಮತ ಹಾಕಿ ಗೆಲ್ಲಿಸಿರುವುದರಿಂದ ನಾನು ಅಪೇಕ್ಷಿತ. ಆದರೇ ನೀವು ಮಂತ್ರಿ ಆಗಿದ್ದೇ ಆಕಸ್ಮಿಕ. ನಿಮ್ಮ ಪಕ್ಷಕ್ಕೆ 113 ಸೀಟುಗಳೇ ಬಂದಿಲ್ಲದಿದ್ದರೂ ಕಳೆದ ಎರಡು ಬಾರಿಯೂ ಬಹುಮತವಿಲದಿದ್ದರೂ ಕೂಡ ಆಕಸ್ಮಿಕ ಮಂತ್ರಿ ನೀವು ಆಗಿಲ್ಲವೇ? ರೇವಣ್ಣನವರಿಗೆ ಲೆಕ್ಕಕ್ಕಿದ್ದ ಪ್ರಮುಖ ಕೆ.ಆರ್. ಪೇಟೆ ಮತ್ತು ಶಿರಾ ಎರಡನ್ನು ಲೆಕ್ಕದಿಂದ ಕಳುಹಿಸಿದ್ದೀನಿ ಎಂದು ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದರು.

Preetham Gowda: 'ಸಚಿವರಾಗಲು ಅರ್ಹತೆ-ಯೋಗ್ಯತೆ ಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News