ರಾಜ್ಯ ಬಜೆಟ್ ನಲ್ಲಿ ಮೇಕೆದಾಟು ಸೇರಿ ಇತರೆ ನೀರಾವರಿ ಯೋಜನೆಗಳಿಗೆ ಅನುದಾನ: ಸಚಿವ ಕಾರಜೋಳ ಸುಳಿವು

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ನಿರೀಕ್ಷೆಯಂತೆ ನಾವು ಹಣ ನೀಡಲು ಆಗಿಲ್ಲ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಮೇಕೆದಾಟು ಯೋಜನೆ ಜಾರಿಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಸಚಿವ ಕಾರಜೋಳ ಹೇಳಿದ್ದಾರೆ.   

Written by - Prashobh Devanahalli | Edited by - Puttaraj K Alur | Last Updated : Mar 2, 2022, 02:48 PM IST
  • ಮೇಕೆದಾಟು ಅಣೆಕಟ್ಟು ನಿರ್ಮಾಣ & ಇತರೆ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ
  • ಮೇಕೆದಾಟು ಯೋಜನೆ ಜಾರಿಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದ ಗೋವಿಂದ ಕಾರಜೋಳ
  • ಕಾಂಗ್ರೆಸ್ ವಾರಸುದಾರರಿಲ್ಲದ ಮನೆಯಿದ್ದಂತೆ ಎಂದು ಟೀಕಿಸಿದ ಜಲಸಂಪನ್ಮೂಲ ಸಚಿವರು
ರಾಜ್ಯ ಬಜೆಟ್ ನಲ್ಲಿ ಮೇಕೆದಾಟು ಸೇರಿ ಇತರೆ ನೀರಾವರಿ ಯೋಜನೆಗಳಿಗೆ ಅನುದಾನ: ಸಚಿವ ಕಾರಜೋಳ ಸುಳಿವು title=
ಕಾಂಗ್ರೆಸ್ ವಾರಸುದಾರರಿಲ್ಲದ ಮನೆಯಿದ್ದಂತೆ!

ಬೆಂಗಳೂರು: ಅತ್ತ ಕಾಂಗ್ರೆಸ್ ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದರೆ, ಇತ್ತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಮೇಕೆದಾಟು ಅಣೆಕಟ್ಟು ನಿರ್ಮಾಣ ಹಾಗೂ ಇತರೆ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಈ ಹಿಂದೆ ಯಾರೂ ನೀಡದಿರುವ ಅನುದಾನ ಸಿಗಲಿದೆ ಎಂಬ ಸುಳಿವು ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವರು, ರಾಜ್ಯ ಬಜೆಟ್ ಗೆ ಇನ್ನು ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಬಜೆಟ್ ಬಗ್ಗೆ ವಿಸ್ತೃತವಾಗಿ ಮಾತನಾಡಲು ಆಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಕೂಡ ಇದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Mekedatu project: ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಕಾಂಗ್ರೆಸ್ ವಾರಸುದಾರರಿಲ್ಲದ ಮನೆಯಿದ್ದಂತೆ!

ಕಾಂಗ್ರೆಸ್ ನವರು ತಮಗೆ ಬಹಳಷ್ಟು ಅನುಭವ ಇದೆ ಎಂದು ಸ್ವಾತಂತ್ರ್ಯ ಬಂದ ನಂತರ ದೇಶದ ಉದ್ದಗಲಕ್ಕೂ ಸರ್ಕಾರ ಮಾಡಿದ್ರು. ನೀವು ಸರ್ವೋಚ್ಚ ನ್ಯಾಯಾಲಯದ ವಿರುದ್ಧನಾ ಅಥವಾ ನಿಮ್ಮ ಪಕ್ಷದ ನಾಯಕತ್ವಕ್ಕಾ ಅಂತಾ ನಾವು ಕಾಂಗ್ರೆಸ್ ನಾಯಕ ರಣದೀಪಸಿಂಗ್ ಸುರ್ಜೆವಾಲಾ(Randeep Surjewala)ರನ್ನು ಕೇಳುತ್ತೇವೆ. ಸದ್ಯ ಕಾಂಗ್ರೆಸ್ ಪಕ್ಷವು ವಾರಸುದಾರರಿಲ್ಲದ ಮನೆ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು.

ನೀರಾವರಿ ಯೋಜನೆಗೆ ನಮ್ಮ ಮೊದಲ ಆದ್ಯತೆ

ಕೇಂದ್ರ ಜಲಮಂತ್ರಾಲಯಕ್ಕೆ ಪತ್ರ ಬರೆದಿದ್ದೇವೆ. ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಮೊದಲು ಮೇಕೆದಾಟು ಯೋಜನೆ(Mekedatu Project), 2ನೇಯದು ಕೃಷ್ಣಾ ಯೋಜನೆ ಇವೆಲ್ಲಾ ಕೋರ್ಟ್ ನಲ್ಲಿವೆ. ಆದರೆ ನಾವು ನಮ್ಮ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಕಾವೇರಿ ನೀರಾವರಿ ನಿಗಮದ ಎಂಡಿ ಮತ್ತು ಎಸಿಎಸ್ ಜೊತೆಗೆ ಸಭೆ ಮಾಡಿದ್ದೇವೆ. ಈ ಯೋಜನೆಯಲ್ಲಿ ನಮ್ಮ ಪಾಲಿನ ನೀರನ್ನು ಹೇಳದೆ ನಾವು ಒಪ್ಪಿಗೆ ಸೂಚನೆ ನೀಡಲ್ಲ ಎಂದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Russia Ukraine War: ಉಕ್ರೇನ್‌ನಿಂದ ಐದು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಲೀಗಲ್ ಆಗಿಯೇ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇವೆ. ನಮ್ಮ ಮತ್ತು ಬೊಮ್ಮಾಯಿ (Basavaraj Bommai) ಆದ್ಯತೆ ನೀರಾವರಿ ಯೋಜನೆಗೆ ಹೆಚ್ಚು ಒತ್ತು ನೀಡುವುದಾಗಿದೆ. ನೀರಾವರಿ ಯೋಜನೆಗೆ ಹಣ ಸಿಗಲಿಲ್ಲವೆಂದ್ರೆ ಸಾಲವನ್ನಾದರೂ ತಂದು ಮಾಡುತ್ತೇವೆಂದು ಈ ಹಿಂದೆ ಹೇಳಿದ್ದೇವು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ನಿರೀಕ್ಷೆಯಂತೆ ನಾವು ಹಣ ನೀಡಲು ಆಗಿಲ್ಲ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಯೋಜನೆ ಜಾರಿಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಇದೇ ಸಂದರ್ಭದಲ್ಲಿ ಕಾರಜೋಳ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News