ಗ್ರಾ.ಪಂ ಚುನಾವಣೆ ಗೆಲ್ಲಲು ಬಿಜೆಪಿಯಿಂದ 'ಪಂಚರತ್ನ' ಸೂತ್ರ..!

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು 'ಮಾಸ್ಟರ್ ಫ್ಲಾನ್'

Last Updated : Nov 21, 2020, 12:33 PM IST
  • ರಾಜ್ಯ ಬಿಜೆಪಿ, ಇದಕ್ಕಾಗಿ 'ಗ್ರಾಮ ಸ್ವರಾಜ್ ಯಾತ್ರೆ'
  • ತಿ ಬೂತ್ ನಲ್ಲಿ 'ಪಂಚರತ್ನ' ಹೆಸರಿನಲ್ಲಿ ಟೀಂ
ಗ್ರಾ.ಪಂ ಚುನಾವಣೆ ಗೆಲ್ಲಲು ಬಿಜೆಪಿಯಿಂದ 'ಪಂಚರತ್ನ' ಸೂತ್ರ..! title=

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸಲು ಚುನಾವಣಾ ಆಯೋಗ ಒಂದೆಡೆ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇಂತಹ ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಕೂಡ ಸಿದ್ಧತೆ ನಡೆಸಿದೆ.

ಗ್ರಾಮ ಪಂಚಾಯಿತಿ ಚುನಾವಣೆ(Election)ಯಲ್ಲಿ ಗೆಲುವು ಸಾಧಿಸಲು 'ಮಾಸ್ಟರ್ ಫ್ಲಾನ್' ಮಾಡಿರುವಂತ ರಾಜ್ಯ ಬಿಜೆಪಿ, ಇದಕ್ಕಾಗಿ 'ಗ್ರಾಮ ಸ್ವರಾಜ್ ಯಾತ್ರೆ' ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

BREAKING NEWS: ಡಿಕೆಶಿಗೆ ಮತ್ತೆ ಶುರುವಾಯ್ತು ಕಂಟಕ: ಸಿಬಿಐಯಿಂದ ಸಮನ್ಸ್ ಜಾರಿ..!

ರಾಜ್ಯ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಸದ್ಯದಲ್ಲಿಯೇ ಘೋಷಣೆಯಾಗಲಿದೆ. ಇಂತಹ ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಗೆಲುವು ಸಾಧಿಸುವ ಸಲುವಾಗಿ ಮಾಸ್ಟರ್ ಫ್ಲಾನ್ ರೂಪಿಸಿದೆ.

ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಇನ್ನೋವಾ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ

ಗ್ರಾಮ ಪಂಚಾಯಿತಿ ಎಲೆಕ್ಷನ್ ಗೆಲ್ಲಲು ಪಂಚರತ್ನ ಅಸ್ತ್ರ ರೂಪಿಸಿದೆ. ನ.27ರಿಂದ ಗ್ರಾಮ ಸ್ವರಾಜ್ ಯಾತ್ರೆ ಆರಂಭಗೊಳ್ಳಲಿದೆ. ಗ್ರಾಮ ಪಂಚಾಯಿತಿ ಯಾತ್ರೆಗೆ ಬಿಜೆಪಿಯಿಂದ 5 ತಂಡ ರಚನೆ ಮಾಡಲಿದೆಯಂತೆ. ಪ್ರತಿ ಬೂತ್ ನಲ್ಲಿ 'ಪಂಚರತ್ನ' ಹೆಸರಿನಲ್ಲಿ ಟೀಂ ಇರಲಿದೆ ಎನ್ನಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಪ್ಲಾನ್ ರೂಪಿಸಿದೆ.

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Trending News