PhD completed: ಸಿಟಿ ರವಿ ಇನ್ಮುಂದೆ ಡಾ.ಸಿಟಿ ರವಿ

ಬಿಜೆಪಿ ನಾಯಕ ಸಿಟಿ ರವಿ ರಾಜಕೀಯದಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಒಂದು ಕೈ ಮುಂದೆ. ಹೌದು.. ಸಿಟಿ ರವಿ ಅವರ ಪಿಎಚ್​ಡಿ ಪದವಿ ಅಂತಿಮ ಹಂತಕ್ಕೆ ಬಂದಿದೆ. ಇಂದು ಅವರು ಸಲ್ಲಿಸಿದ್ದ ಮಹಾ ಪ್ರಬಂಧದ ಮೇಲಿನ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

Written by - Puttaraj K Alur | Last Updated : Dec 29, 2023, 04:55 PM IST
  • ಪಿಎಚ್‍ಡಿ ಪೂರ್ಣಗೊಳಿಸಿದ ಬಿಜೆಪಿ ನಾಯಕ, ಮಾಜಿ ಸಚಿವ ಸಿಟಿ ರವಿ
  • ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ
  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗಕ್ಕೆ ಮಹಾ ಪ್ರಬಂಧ ಸಲ್ಲಿಕೆ
PhD completed: ಸಿಟಿ ರವಿ ಇನ್ಮುಂದೆ ಡಾ.ಸಿಟಿ ರವಿ title=
ಪಿಎಚ್‍ಡಿ ಪೂರ್ಣಗೊಳಿಸಿದ ಸಿಟಿ ರವಿ

ಬೆಂಗಳೂರು: ಬಿಜೆಪಿ ನಾಯಕ ಸಿಟಿ ರವಿ ಪಿಎಚ್‍ಡಿ ಪೂರ್ಣಗೊಳಿಸಿದ್ದು, ಇನ್ಮುಂದೆ ಡಾ.ಸಿಟಿ ರವಿ ಆಗಲಿದ್ದಾರೆ. ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ’ ವಿಷಯದ ಬಗ್ಗೆ ಮೌಖಿಕ ಪರೀಕ್ಷೆಯನ್ನು ಸಿಟಿ ರವಿಯವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ತಮ್ಮ ಪಿಎಚ್​ಡಿಯ ಮಹಾ ಪ್ರಬಂಧ ಸಲ್ಲಿಸಿದ್ದಾರೆ.  

ಈ ಬಗ್ಗೆ ಸಿಟಿ ರವಿ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿಕೊಂಡು ಮಾಹಿತಿ ನೀಡಿದ್ದಾರೆ. ‘ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಜೆಸುರೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಪಿಎಚ್.ಡಿ ಪದವಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗಕ್ಕೆ ನಾನು ಸಲ್ಲಿಸಿದ್ದ ಮಹಾ ಪ್ರಬಂಧ "ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳು: ಒಂದು ಅಧ್ಯಯನ" ಇದರ ಮೌಖಿಕ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ  ಪೂರ್ಣಗೊಳಿಸಿದ್ದೇನೆ. ನನ್ನ ಸಂಶೋಧನಾ ಕಾಲದಲ್ಲಿ ಸಹಕರಿಸಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಸಿಟಿ ರವಿ ಹೇಳಿದ್ದಾರೆ.

ಇದನ್ನೂ ಓದಿ: ಪಾರ್ಲೆ-ಜಿ ಬಿಸ್ಕೆಟ್ ಮೇಲಿದ್ದ ಬೇಬಿ ಫೋಟೋ ನಾಪತ್ತೆ..! ಯಾರು ಈ ಯುವಕ..?

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಿಟಿ ರವಿ, ಇದೀಗ ಅದೇ ವಿವಿಯಲ್ಲಿ ಪಿಎಚ್​ಡಿ ಪದವಿ ಪಡೆದುಕೊಳ್ಳಲಿದ್ದಾರೆ. ಪಿಎಚ್​ಡಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನವದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದ ಸಿಟಿ ರವಿ ಮಾಹಿತಿ ಕಲೆಹಾಕಿದ್ದರು.  

ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತ 4 ಬಾರಿ ಗೆಲುವು ಸಾಧಿಸಿ ಸಚಿವರಾಗಿ, ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸಿಟಿ ರವಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರು. ಸದ್ಯ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರು ರಾಜಕೀಯದ ಜೊತೆಗೆ ಶಿಕ್ಷಣ ಪಡೆದುಕೊಂಡಿದ್ದಾರೆ.  

ಇದನ್ನೂ ಓದಿ: 40,000 crore scam: ಯತ್ನಾಳ್ ಹೇಳಿದ ಆ ‘ರಾತ್ರಿ ರಹಸ್ಯ’ ಯಾವುದು ವಿಜಯೇಂದ್ರ?- ಕಾಂಗ್ರೆಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News