ಬಿಜೆಪಿ ನಾಯಕರಿಗೆ 'ಬಿಗ್ ಶಾಕ್' ನೀಡಿದ ಹೈಕಮಾಂಡ್..!

ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಟಿಕೆಟ್ ಘೋಷಣೆ

Last Updated : Nov 17, 2020, 04:04 PM IST
  • ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಟಿಕೆಟ್ ಘೋಷಣೆ
  • ಬಿಜೆಪಿಯಿಂದ ಡಾ.ನಾರಾಯಣ್ ಗೆ ಟಿಕೆಟ್
  • ಬಿಜೆಪಿಯಲ್ಲಿ 50 ವರ್ಷಗಳಿಂದ ಆರ್ ಎಸ್ ಎಸ್ ನಲ್ಲಿ ಸಕ್ರೀಯ ಕಾರ್ಯಕರ್ತ ಡಾ.ನಾರಾಯಣ್
ಬಿಜೆಪಿ ನಾಯಕರಿಗೆ 'ಬಿಗ್ ಶಾಕ್' ನೀಡಿದ ಹೈಕಮಾಂಡ್..! title=

ಬೆಂಗಳೂರು: ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದಂತ ರಾಜ್ಯಸಭೆಯ ಒಂದು ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿತ್ತು. ಇಂತಹ ಚುನಾವಣೆಗೆ ರಾಜ್ಯ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಡಾ.ನಾರಾಯಣ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಸಂಸದ ಅಶೋಕ್ ಗಸ್ತಿ ನಿಧನದಿಂದಾಗಿ ತೆರವಾಗಿದ್ದಂತ ರಾಜ್ಯ ಸಭೆ ಕ್ಷೇತ್ರಕ್ಕೆ ಡಿ.1ರಂದು ಚುನಾವಣೆ(Election) ಘೋಷಣೆಯಾಗಿದೆ. ಇಂತಹ ಚುನಾವಣೆಗೆ ರಾಜ್ಯ ಬಿಜೆಪಿ ಘಟಕ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಸೂಚಿಸಿತ್ತು. ಆದರೆ ಹೈಕಮಾಂಡ್ ರಾಜ್ಯ ಬಿಜೆಪಿ ಸೂಚಿಸಿದ್ದ ಮೂವರ ಹೆಸರನ್ನು ತಿರಸ್ಕರಿಸಿ, ಆರ್.ಎಸ್.ಎಸ್. ಹಿನ್ನೆಲೆಯ ಡಾ.ನಾರಾಯಣ ಎಂಬುವವರ ಹೆಸರನ್ನು ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಡಿ.5ಕ್ಕೆ 'ಕರ್ನಾಟಕ ಬಂದ್'..!

ಬಿಜೆಪಿಯಲ್ಲಿ 50 ವರ್ಷಗಳಿಂದ ಆರ್ ಎಸ್ ಎಸ್ ನಲ್ಲಿ ಸಕ್ರೀಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಂತ ಡಾ.ನಾರಾಯಣ್ ಅವರಿಗೆ ಅಚ್ಚರಿಯೆನ್ನುವಂತೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯಸಭೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಡಾ.ನಾರಾಯಣ್ ಹೆಸರು ಘೋಷಿಸಿಲಾಗಿದೆ.

ಡಿಸಿಎಂ ಕನಸು ನನಸು ಮಾಡಿದ ಸಿಎಂ: 'ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ' ಸ್ಥಾಪನೆಗೆ ಗ್ರೀನ್ ಸಿಗ್ನಲ್

Trending News