Bitcoin Scam: ಕಾಂಗ್ರೆಸ್ ಆರೋಪಗಳಿಗೆ ಬಿಜೆಪಿ ತಿರುಗೇಟು, ಬಿಟ್ ಕಾಯಿನ್ ಹಗರಣವೇ ನಡೆದಿಲ್ಲ

Bitcoin Scam: ಬೆಂಗಳೂರು ಮೂಲದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಅಧಿಕಾರಿಗಳು 9 ಕೋಟಿ ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡ ನಂತರ ಹಗರಣದಲ್ಲಿ 'ಪ್ರಭಾವಿ ರಾಜಕಾರಣಿಗಳು' ಭಾಗಿಯಾಗಿರುವುದು ಬಯಲಿಗೆ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Written by - Nitin Tabib | Last Updated : Nov 14, 2021, 11:09 AM IST
  • ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪ ತಳ್ಳಿಹಾಕಿದ ಬಿಜೆಪಿ.
  • ಈ ರೀತಿಯ ಯಾವುದೇ ಹಗರಣ ನಡೆದಿಲ್ಲ ಎಂದ ಬಿಜೆಪಿ.
  • ಹಗರಣದ ತನಿಖೆಯಲ್ಲಿಯೂ ಕೂಡ ಯಾವುದೇ ಅಕ್ರಮ ನಡೆದಿಲ್ಲ ಎಂದ ಬೆಂಗಳೂರು ಪೊಲೀಸರು.
Bitcoin Scam: ಕಾಂಗ್ರೆಸ್ ಆರೋಪಗಳಿಗೆ ಬಿಜೆಪಿ ತಿರುಗೇಟು, ಬಿಟ್ ಕಾಯಿನ್ ಹಗರಣವೇ ನಡೆದಿಲ್ಲ title=
Bitcoin Scam (File Photo)

Bitcoin Scam: ಬಿಟ್‌ಕಾಯಿನ್ ಹಗರಣವನ್ನು (Bitcoin) ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂಬ  ಕಾಂಗ್ರೆಸ್ (Congress) ಆರೋಪವನ್ನು ಬಿಜೆಪಿ (BJP) ಶನಿವಾರ ತಳ್ಳಿಹಾಕಿದ್ದು, ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದೆ. ಈ ಪ್ರಕರಣದ ತನಿಖೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಬೆಂಗಳೂರು ಪೊಲೀಸರು (Bengaluru Police) ಕೂಡ ನಿರಾಕರಿಸಿದ್ದಾರೆ. ಯಾವುದೇ ರೀತಿಯ ಹಗರಣ ನಡೆದಿಲ್ಲ ಎಂದು ಬಿಜೆಪಿ ಕರ್ನಾಟಕ ಘಟಕದ ವಕ್ತಾರ ಗಣೇಶ್ ಕಾರ್ಣಿಕ್ (Ganesh Karnik) ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. " ಹೀಗಾಗಿ, ಈ ಹಗರಣದಲ್ಲಿ ಯಾವುದೇ ವ್ಯಕ್ತಿ ಭಾಗಿಯಾಗಿರುವ ಯಾವುದೇ ಪ್ರಶ್ನೆಯು ವಿಕೃತ ಕಲ್ಪನೆಯಾಗಿದೆ" ಎಂದಿದ್ದಾರೆ.

ಬೆಂಗಳೂರು  ಮೂಲದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ (Shrikrishna Alias Shrikee) 9 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ವಶಪಡಿಸಿಕೊಂಡ ನಂತರ ಹಗರಣದಲ್ಲಿ 'ಪ್ರಭಾವಿ ರಾಜಕಾರಣಿಗಳು' ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಸರ್ಕಾರಿ ಪೋರ್ಟಲ್‌ಗಳನ್ನು ಹ್ಯಾಕ್ ಮಾಡುವುದು ಸೇರಿದಂತೆ ಹ್ಯಾಕರ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಕಾಂಗ್ರೆಸ್‌ನ ಈ ಆರೋಪಗಳಿಗೆ ಬಿಜೆಪಿ ನಾಯಕರು ಇದೀಗ ತಿರುಗೇಟು ನೀಡಿದ್ದಾರೆ. ಬಿಟ್‌ಕಾಯಿನ್ ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿ (ಒಂದು ರೀತಿಯ ಡಿಜಿಟಲ್ ಕರೆನ್ಸಿ) ಗಳಲ್ಲಿ ಒಂದಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಬೆಂಗಳೂರು ಪೊಲೀಸರು ಕೂಡ ಆರೋಪವನ್ನು ತಳ್ಳಿ ಹಾಕಿದ್ದಾರೆ
ಏತನ್ಮಧ್ಯೆ, ಕೇಂದ್ರ ಅಪರಾಧ ವಿಭಾಗವು ಈ ಪ್ರಕರಣವನ್ನು "ನಿಷ್ಪಕ್ಷಪಾತ ಮತ್ತು ವೃತ್ತಿಪರ ರೀತಿಯಲ್ಲಿ" ತನಿಖೆ ಮಾಡಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.  “ಅಪೂರ್ಣ/ವಿಕೃತ ಸಂಗತಿಗಳ ಆಧಾರದ ಮೇಲೆ ಇಂತಹ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಅಂತಹ ಎಲ್ಲಾ ಹೇಳಿಕೆಗಳನ್ನು ಬಲವಾಗಿ ಖಂಡಿಸಲಾಗುವುದು" ಎಂದು ಪೊಲೀಸರು ಹೇಳಿದ್ದಾರೆ. "ಯಾವುದೇ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಲಾಗಿಲ್ಲ ಅಥವಾ ಹ್ಯಾಕರ್ ಶ್ರೀಕೃಷ್ಣನ ಖಾತೆಯಿಂದ ಯಾವುದೇ ಬಿಟ್‌ಕಾಯಿನ್‌ಗಳು ಕಣ್ಮರೆಯಾಗಿಲ್ಲ." ಬಿಟ್‌ಕಾಯಿನ್ (Bitcoin) ಖಾತೆಯನ್ನು ತೆರೆಯಲು ಇದು ಅಗತ್ಯವೆಂದು ಕಂಡುಬಂದಿದೆ ಮತ್ತು ಡಿಸೆಂಬರ್ 8, 2020 ರಂದು ಖಾತೆ ತೆರೆಯಲು ಸರ್ಕಾರದ ಅನುಮತಿಯನ್ನು ಪಡೆಯಲಾಯಿತು. ಬಿಟ್‌ಕಾಯಿನ್ ಖಾತೆ. ಬಿಟ್‌ಕಾಯಿನ್‌ಗಳನ್ನು ಗುರುತಿಸುವ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ, ಆರೋಪಿ ಶ್ರೀಕೃಷ್ಣ 31.8 ಬಿಟ್‌ಕಾಯಿನ್‌ಗಳನ್ನು ಹೊಂದಿರುವ ಬಿಟಿಸಿ ವ್ಯಾಲೆಟ್ ತೋರಿಸಿದ್ದಾನೆ. ಇದಲ್ಲದೆ, ಹೇಳಲಾದ ಬಿಟ್‌ಕಾಯಿನ್‌ಗಳನ್ನು ಪೊಲೀಸ್ ವ್ಯಾಲೆಟ್ ಖಾತೆಗೆ ವರ್ಗಾಯಿಸಲು ಪಾಸ್‌ವರ್ಡ್ ಬಳಸಲು ನ್ಯಾಯಾಲಯದಿಂದ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ, ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಶ್ರೀಕೃಷ್ಣ ಅವರ ಖಾತೆಯಿಂದ ಪೊಲೀಸ್ ವ್ಯಾಲೆಟ್‌ಗೆ ಯಾವುದೇ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಲು ಸಾಧ್ಯವಾಗಲಿಲ್ಲ. ಕಳ್ಳತನವಾಗಿವೆ ಎಂದು ಹೇಳಲಾಗಿರುವ 14,682 ಬಿಟ್‌ಫೈನೆಕ್ಸ್ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಲಾಗಿದೆ ಎಂದು ವೇಲ್ ಅಲರ್ಟ್‌ನಿಂದ ಟ್ವಿಟರ್‌ ಗೆ ಬಂದ ಪೋಸ್ಟ್ ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಪೊಲೀಸರು ಈ ಮಾಹಿತಿ ಸಂಪೂರ್ಣ ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ ಶ್ರೀಕೃಷ್ಣನ ಹೇಳಿಕೆಗಳ ಕುರಿತು, ಸೈಬರ್ ತಜ್ಞರು ನಡೆಸಿದ ಡಿಜಿಟಲ್ ಸಾಕ್ಷ್ಯಗಳ ಸೂಕ್ಷ್ಮ ಪರಿಶೀಲನೆಯಿಂದ ಅವರ ಹೆಚ್ಚಿನ ಹಕ್ಕುಗಳು ಆಧಾರರಹಿತವೆಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೆ  ವರ್ಷ ಬೆಂಗಳೂರು ಪೊಲೀಸರು ಸಿಬಿಐ (ಕೇಂದ್ರ ತನಿಖಾ ದಳ), ಜಾರಿ ನಿರ್ದೇಶನಾಲಯ ಮತ್ತು ಇಂಟರ್‌ಪೋಲ್‌ಗೆ ಸರಿಯಾದ ಮಾರ್ಗಗಳ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ  ಓದಿ-Crypto Currencyಗಳ ಹೆಚ್ಚಾಗುತ್ತಿರುವ ಪ್ರಭಾವದ ಕುರಿತು ಆತಂಕ ವ್ಯಕ್ತಪಡಿಸಿದ IMF ಹೇಳಿದ್ದೇನು?

ದೇಶದ ಅತಿದೊಡ್ಡ ಬಿಟ್‌ಕಾಯಿನ್ ಹಗರಣ ನಡೆದಿದೆ - ಕಾಂಗ್ರೆಸ್
ಪೊಲೀಸ್ ಕಸ್ಟಡಿಯಲ್ಲಿ ಶ್ರೀಕೃಷ್ಣಗೆ ಬಲವಂತವಾಗಿ ಅಲ್ಪ್ರಜೋಲಮ್ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ, ನ್ಯಾಯಾಲಯದ ಆದೇಶದ ಮೇರೆಗೆ ಆತನ ರಕ್ತ ಮತ್ತು ಮೂತ್ರದ ಮಾದರಿಗಳನ್ನು ವೈಜ್ಞಾನಿಕ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಆತನ ಮಾದರಿಗಳಲ್ಲಿ ಮಾದಕ ಪದಾರ್ಥ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ದೇಶದ ಅತಿದೊಡ್ಡ ಬಿಟ್‌ಕಾಯಿನ್ ಹಗರಣ ನಡೆದಿದ್ದು, ರಾಜ್ಯದ ಬಿಜೆಪಿ ಸರ್ಕಾರ ಅದನ್ನು ಮುಚ್ಚಿಹಾಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ-Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್

ಹಗರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi), "ಬಿಟ್‌ಕಾಯಿನ್ ಹಗರಣ ದೊಡ್ಡದಾಗಿದೆ, ಆದರೆ ಬಿಟ್‌ಕಾಯಿನ್ ಹಗರಣವನ್ನು ಮುಚ್ಚಿಹಾಕುವುದು ಇನ್ನೂ ದೊಡ್ಡ ಅಪರಾಧವಾಗಿದೆ. ಏಕೆಂದರೆ ಇದರಿಂದ ಯಾರೊಬ್ಬರ ಅಹಂಕಾರದ ಮೇಲೆ ತೆರೆ ಎಲೆಯಬೇಕಿದೆ" ಎಂದಿದ್ದಾರೆ. ಇನ್ನೊಂದೆಡೆ ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala), "ಇದು ಭಾರತದ ಅತಿದೊಡ್ಡ ಬಿಟ್‌ಕಾಯಿನ್ ಹಗರಣವಾಗಿದೆ. ಇದರ ಬೇರುಗಳು 14-15 ದೇಶಗಳಿಗೆ ಹರಡಿವೆ. ಈ ವೇಳೆ ಎಲ್ಲವನ್ನು ಮುಚ್ಚಿಹಾಕಲು ಷಡ್ಯಂತ್ರದ ಯತ್ನ ನಡೆದಿದೆ. ಎನ್ಐಎ ಮತ್ತು ಇತರ ಏಜೆನ್ಸಿಗಳನ್ನು ಕತ್ತಲೆಯಲ್ಲಿ ಇರಿಸಲಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ-IRCTC ರೈಲ್ವೆ ಟಿಕೆಟ್‌ ಬುಕಿಂಗ್ ಹೊಸ ನಿಯಮಗಳು ಜಾರಿ : ಇಲ್ಲದಿದ್ದರೆ ನಿಮಗೆ ಸಿಗುವುದಿಲ್ಲ ಸೀಟು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News