ʼಶಕ್ತಿ ಯೋಜನೆʼಗೆ ಶತ ಕೋಟಿ ಮಹಿಳೆಯರ ರೆಸ್ಪಾನ್ಸ್..! 5 ತಿಂಗಳಿಗೆ ಖರ್ಚಾಗಿದ್ದು ಎಷ್ಟು ಗೊತ್ತಾ..?

ರಾಜ್ಯ ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ದೊರೆತಿದೆ. ಕೇವಲ ಐದುವರೆ ತಿಂಗಳಿಗೆ ಶತಕೋಟಿ ಮಹಿಳೆಯರು ರಾಜ್ಯದ ಸಾರಿಗೆ ಬಸ್ ಗಳಲ್ಲಿ ಸಂಚಾರ ನಡೆಸಿದ್ದಾರೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ

Written by - Manjunath Hosahalli | Edited by - Krishna N K | Last Updated : Nov 23, 2023, 11:51 AM IST
  • ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ದೊರೆತಿದೆ.
  • 5 ತಿಂಗಳಿಗೆ ಶತಕೋಟಿ ಮಹಿಳೆಯರು ಸಂಚಾರ ನಡೆಸಿದ್ದಾರೆ.
  • ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2397 ಕೋಟಿ ವ್ಯಯ ಆಗಿದೆ.
ʼಶಕ್ತಿ ಯೋಜನೆʼಗೆ ಶತ ಕೋಟಿ ಮಹಿಳೆಯರ ರೆಸ್ಪಾನ್ಸ್..! 5 ತಿಂಗಳಿಗೆ ಖರ್ಚಾಗಿದ್ದು ಎಷ್ಟು ಗೊತ್ತಾ..? title=

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿಗೆ ರಾಜ್ಯದ ನಾರಿಯರಿಂದ ಭಾರಿ ರೆಸ್ಪಾನ್ಸ್ ಲಭ್ಯವಾಗಿದೆ. ಈ ಮೂಲಕವಾಗಿ ಕೇವಲ ಐದುವರೆ ತಿಂಗಳಿಗೆ ಶತಕೋಟಿ ಮಹಿಳೆಯರು ರಾಜ್ಯದ ಸಾರಿಗೆ ಬಸ್ ಗಳಲ್ಲಿ ಸಂಚಾರ ನಡೆಸಿದ್ದಾರೆ. ಅಂದ್ರೆ ಜೂನ್ 11 ರಿಂದ ನವೆಂಬರ್ 22 ವರೆಗೆ ಶತಕೋಟಿ ಮಹಿಳೆಯರ ಪ್ರಯಾಣ ಮಾಡಿದ್ದು, ಇದು ಸರ್ಕಾರಕ್ಕೆ ಸಂತಸ ತಂದಿದೆ. 

ನಾಲ್ಕೂ ನಿಗಮಗಳ ಬಸ್‌ಗಳು ಅಂದ್ರೆ KSRTC, BMTC, NWRTC ಹಾಗೂ KKRTC ಬಸ್ ಗಳಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2397 ಕೋಟಿ ವ್ಯಯ ಆಗಿದೆ. ಈ ರೀತಿ ಶಕ್ತಿ ಪ್ರದರ್ಶನ ಮುಂದುವರೆದ್ರೆ ಕಲವೇ ದಿನಗಳಲ್ಲಿ 2500 ಕೋಟಿಗೆ ತಲುಪೋದ್ರಲ್ಲಿ ಅನುಮಾನವೇ ಇಲ್ಲ.

ಜೂನ್ 11ರಿಂದ ನ 22 ರ ವರೆಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ

ಕೆಎಸ್ ಆರ್ ಟಿಸಿ - 30,12,17,350
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 900,29,21,508

ಬಿಎಂಟಿಸಿ - 32,69,60,082
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 420,82,19,200

ವಾಯುವ್ಯ- 23,37,23,007
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 600,69,91,513

ಕಲ್ಯಾಣ ಕರ್ನಾಟಕ - 14,28,55,745
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 475,98,79,341

ಜೂನ್ 11 ರಿಂದ ನವೆಂಬರ್ 20ರ ವರೆಗೂ 100,47,56,184 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ

ಒಟ್ಟು  ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2397,80,11,562

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News