ಬೆಳಗಾವಿ : ಪಂಚಮಸಾಲಿ ಸಮುದಾಯವನ್ನು 2A ವರ್ಗಕ್ಕೆ ಸೇರಿಸಲು ನಡೆಯುತ್ತಿರುವ ಹೋರಾಟಕ್ಕೆ ಪರಿಹಾರವನ್ನು ಸರ್ಕಾರ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ನಾಳೆ ಸರ್ಕಾರ ಈ ಬಗ್ಗೆ ತೀರ್ಮಾನ ಪ್ರಕಟ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚುನಾವಣೆಗೂ ಮುನ್ನ ಈ ನಿರ್ಧಾರ ಮಹತ್ವ ಪಡೆಯಲಿದ್ದು, ರಾಜಕೀಯ ಲೆಕ್ಕಾಚಾರ ಹೆಚ್ಚಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಾಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರ ಬರಲಿದೆ. ಈ ಮೂಲಕ ಮುಂಬರುವ 2023 ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಸಮುದಾಯದ ಮತ ಸೆಳೆಯಲು ಪಕ್ಷ ಸಜ್ಜಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಪಬ್ ಗಳಿಗೆ ನಿಯಮಗಳೇ ಇಲ್ವಾ: ಹೈದರಾಬಾದ್ ಪೊಲೀಸರೇ ಬೆಟರ್ ಆದ್ರೂ...?
ಇಂದು ಕಲಾಪ ನಡೆಯುವ ಮುನ್ನ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರದ ಮೇಲೆ ಪೂರ್ಣ ಭರವಸೆ ಇದೆ. ಈ ಐತಿಹಾಸಿಕ ನಿರ್ಧಾರ ಸಿಎಂ ಬೊಮ್ಮಾಯಿ ಕೈಗೊಳ್ಳಲಿದ್ದಾರೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯ ವೀರಶೈವ -ಲಿಂಗಾಯತದ ಉಪಪಂಗಡ, ಮತ ಲೆಕ್ಕದಲ್ಲಿ ಈ ಸಮುದಾಯದ ಬೆಂಬಲ ಬಿಜೆಪಿಗೆ ಇದೆ. ಸದ್ಯಕ್ಕೆ 3B ವರ್ಗದಲ್ಲಿ ವೀರಶೈವ -ಲಿಂಗಾಯತ ಸುಮುದಾಯಕ್ಕೆ 5% ಮೀಸಲಾತಿಯಿದ್ದು, ಪಂಚಮಸಾಲಿ ಸಮುದಾಯವನ್ನು 2A ವರ್ಗಕ್ಕೆ ಸೇರಿಸಲು ಒತ್ತಾಯ ಕೇಳಿ ಬರುತ್ತಿದೆ. ಒಂದು ವೇಳೆ ಹೀಗಾದರೆ 15% ಮೀಸಲಾತಿ ಸಿಗಲಿದೆ.
ಇದನ್ನೂ ಓದಿ : ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಹೊರಟ್ಟಿ ಅವರದ್ದು ಪ್ರಮುಖ ಪಾತ್ರ: ಸಿಎಂ ಬೊಮ್ಮಾಯಿ
ಪಂಚಮಸಾಲಿ ಸಮುದಾಯವನ್ನು 2A ವರ್ಗಕ್ಕೆ ಯಾವ ರೀತಿ ಸೇರಿಸಲಾಗುವುದು ಎನ್ನುವುದು ಮಾತ್ರ ಇಲ್ಲಿಯವರೆಗೆ ಆಸ್ಪಷ್ಟವಾಗಿದೆ. ಸದ್ಯ 2A ವರ್ಗದಲ್ಲಿ 102 ಜಾತಿಗಳು ಇದ್ದು, ಯಾವ ರೀತಿ ಸೇರಿಸಬೇಕು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಪಂಚಮಸಾಲಿ ಸಮುದಾಯ ಬೇಡಿಕೆ ಈಡೇರಿಸದೆ ಹೋದರೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂದೇ ಹೇಳಲಾಗುತ್ತಿದೆ.
ಇನ್ನು ಸರ್ಕಾರ ಪಂಚಮಸಾಲಿ ವಿಚಾರವಾಗಿ ವಿಭಿನ್ನ ಪರಿಹಾರ ನೀಡಲಿದೆ ಎಂದು ಹೆಸರು ಹೇಳಲು ಬಯಸದ ಸಚಿವರೊಬ್ಬರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ