ಬೆಂಗಳೂರು: ನಗರದಲ್ಲಿ ವ್ಹಿಲೀಂಗ್ ಪುಂಡರ ಪುಂಡಾಟಿಕೆ ಮುಂದುವರೆದಿದೆ. ಸೈಯ್ಯದ್ ಎಂಬಾತ ವ್ಹಿಲೀಂಗ್ ಮಾಡಿ ವಿಡಿಯೋವನ್ನು ದೊಡ್ಡ ಸಾಧನೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ್ದಾನೆ.
ಈತನ ಹುಚ್ಚಾಟಕ್ಕೆ ಯುವತಿಯೊಬ್ಬಳು ಬೈಕ್ ಹಿಂದೆ ಕೂತು ಸಾಥ್ ನೀಡಿದ್ದಾಳೆ. ನಗರದ ಜಕ್ಕೂರು ರಸ್ತೆ ,ತುಮಕೂರು ರಸ್ತೆ ,ನಗರದ ಹಿರ ವಲಯ ರಸ್ತೆ , ಬಿ ಇ ಎಲ್ ರಸ್ತೆಗಳಲ್ಲಿ ಹಾವಳಿ ಇಟ್ಟಿದ್ದಾನೆ.
ಇದನ್ನೂ ಓದಿ : ಪ್ರೇಯಸಿ ಮೀಟ್ಗೆ ಭೂಗತ ಪಾತಕಿ ಬಚ್ಚಾಖಾನ್ಗೆ ಅನುವು ಮಾಡಿಕೊಟ್ಟಿದ್ದೇ ಪೊಲೀಸರು!
ಇನ್ನೂ ಇದೇ ಸೈಯ್ಯದ್ ಕೆಲ ಪುಂಡರ ಜೊತೆ ಸೇರಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ವ್ಹಿಲೀಂಗ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ಒದ್ದು ಪುಂಡಾಟ ಆಟಾಟೋಪ ಮೆರೆದಿದ್ದಾರೆ.ಸದ್ಯ ಈ ವಿಡಿಯೋಗಳ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.ಸದ್ಯ ಸಿಲಿಕಾನ್ ಸಿಟಿಯಲ್ಲಿ ಕೆಲ ಕಿಡಿಗೇಡಿಗಳು ಬೈಕ್ ನಲ್ಲಿ ಸುತ್ತುತ್ತ ರಸ್ತೆಯಲ್ಲಿ ಮಾರಾಕಾಸ್ತ್ರ ಹಿಡಿದು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇನ್ನೂ ಪೊಲೀಸರು ವ್ಹಿಲೀಂಗ್ ಗೆ ಬ್ರೇಕ್ ಹಾಕಲು ಎಷ್ಟೇ ಕಠಿಣ ಕ್ರಮ ಕೈಗೊಂಡರು ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದೇ ವಿಪರ್ಯಾಸ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.