ಅನಧಿಕೃತ ಒಎಪ್‌ಸಿ ಕೇಬಲ್ ತೆರವಿಗೆ ಬೆಸ್ಕಾಂ ಕಟ್ಟು ನಿಟ್ಟಿನ ಕ್ರಮ !

ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಕಂಬಗಳ ಮೇಲಿನ ಅನಧಿಕೃತ ಕೇಬಲ್ ಅಳವಡಿಕೆಯಿಂದಾಗಿ ಸಾರ್ವಜನಿಕರು ಹಾಗೂ ಪಾದಾಚಾರಿಗಳು ದಿನನಿತ್ಯ ಪರದಾಟ ನಡೆಸುವಂತ ಸ್ಥಿತಿ ಬಂದೋದಾಗಿದೆ..ಇದಕ್ಕೆ ಇದೀಗ ಬ್ರೇಕ್ ಹಾಕಲು ಬೆಸ್ಕಾಂ ಮುಂದಾಗಿದ್ದು,ಒಎಪ್‌ಸಿ ಕೇಬಲ್ ತೆರವಿಗೆ ಬೆಸ್ಕಾಂ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ.. 

Written by - Bhavya Sunil Bangera | Edited by - Manjunath N | Last Updated : Aug 25, 2023, 04:40 PM IST
  • ಯಸ್ ನಗರದಲ್ಲಿನ ಬೆಸ್ಕಾಂ ಕಂಬಗಳ ಮೇಲೆ ಅನಧಿಕೃತ ‌ವಾಗಿ ಕೆಲ ಕಂಪನಿಗಳು ತಮ್ಮ ಕೇಬಲ್ ಅಳವಡಿಕೆ ಮಾಡಿದೆ.
  • ಈ ಕೇಬಲ್ ಗಳಿಂದಾಗಿ ದಿನ ನಿತ್ಯ ಒಂದಿಲ್ಲೊಂದಿ ಅವಾಂತರಗಳಾಗ್ತಿದೆ.
  • ಕೇಬಲ್ ಗಳು ಜೊತು ಬಿದ್ದು ಪ್ರಾದಾಚಾರಿ ಮಾರ್ಗದಲ್ಲಿ ಸಂಚಾರಮಾಡೊದಕ್ಕು ಸಾರ್ವಜನಿಕರಿಗೆ ಕಷ್ಟವಾಗ್ತಿದೆ.
ಅನಧಿಕೃತ ಒಎಪ್‌ಸಿ ಕೇಬಲ್ ತೆರವಿಗೆ ಬೆಸ್ಕಾಂ ಕಟ್ಟು ನಿಟ್ಟಿನ ಕ್ರಮ ! title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಕಂಬಗಳ ಮೇಲಿನ ಅನಧಿಕೃತ ಕೇಬಲ್ ಅಳವಡಿಕೆಯಿಂದಾಗಿ ಸಾರ್ವಜನಿಕರು ಹಾಗೂ ಪಾದಾಚಾರಿಗಳು ದಿನನಿತ್ಯ ಪರದಾಟ ನಡೆಸುವಂತ ಸ್ಥಿತಿ ಬಂದೋದಾಗಿದೆ..ಇದಕ್ಕೆ ಇದೀಗ ಬ್ರೇಕ್ ಹಾಕಲು ಬೆಸ್ಕಾಂ ಮುಂದಾಗಿದ್ದು,ಒಎಪ್‌ಸಿ ಕೇಬಲ್ ತೆರವಿಗೆ ಬೆಸ್ಕಾಂ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ.. 

ಬೆಸ್ಕಾಂ ಸೂಚನೆ ಮೀರಿದ್ರೆ ಕಂಪನಿಗಳ ಮೇಲೆ ಎಫ್ಐ‌ಆರ್ 

ಯಸ್ ನಗರದಲ್ಲಿನ ಬೆಸ್ಕಾಂ ಕಂಬಗಳ ಮೇಲೆ ಅನಧಿಕೃತ ‌ವಾಗಿ  ಕೆಲ ಕಂಪನಿಗಳು ತಮ್ಮ ಕೇಬಲ್ ಅಳವಡಿಕೆ ಮಾಡಿದೆ.ಈ ಕೇಬಲ್ ಗಳಿಂದಾಗಿ ದಿನ ನಿತ್ಯ ಒಂದಿಲ್ಲೊಂದಿ ಅವಾಂತರಗಳಾಗ್ತಿದೆ.ಕೇಬಲ್ ಗಳು ಜೊತು ಬಿದ್ದು ಪ್ರಾದಾಚಾರಿ ಮಾರ್ಗದಲ್ಲಿ ಸಂಚಾರಮಾಡೊದಕ್ಕು ಸಾರ್ವಜನಿಕರಿಗೆ ಕಷ್ಟವಾಗ್ತಿದೆ.ಕೆಲವೆಡೆ ಕಂಬದಿಂದ ಜೋತು ಬಿದ್ದಿರೋ ಕೇಬಲ್ ಗಳೂ  ಬೈಕ್ ಸಮಾರರ ಜೀವಕ್ಕೆ ಅಪಾಯ ತಂದಿದ್ದು ಇದೆ.ಇನ್ನು  ಬೆಸ್ಕಾಂ ಕಂಬಗಳಿಂದ ಜೊತು ಬಿದ್ದಿರೋ ಈ ಒಎಪ್ ‌ಸಿ ಕೇಬಲ್ ನೋಡಿ ಜನ ಕನ್ಪೂಸ್ ಆಗಿ  ವಿದ್ಯುತ್ ತಂತಿಗಳೇ ಜೋತು ಬಿದ್ದಿದೆ ಎಂದು ಬೆಸ್ಕಾಂ ಗೆ ಕಂಪ್ಲೇಂಟ್ ಮಾಡಿದ್ದು ಇದೆ.ಹೀಗಾಗಿ ಈ ಒಎಪ್‌ಸಿ ಕೇಬಲ್ ಹಾವಳಿ ತಡೆಯಲು ಇದಿಗ ಬೆಸ್ಕಾಂ ಕಟ್ಟುನಿಟ್ಟಿನ‌ ಕ್ರಮಕ್ಕೆ ಮುಂದಾಗಿದೆ.

ಇನ್ನು ಕಳೆದ ಎಂಟು ತಿಂಗಳ ಹಿಂದೆ  ಬೆಸ್ಕಾಂ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಬೆಸ್ಕಾಂ ಕಂಬಗಳಮೇಲೆ ಹಾಕಲಾಗಿದ್ದ ಸುಮಾರು 32ಕಿಲೋ ಮೀಟರ್ ಒಎಪ್‌ಸಿ ಕೇಬಲ್ ತೆರವು ಗೊಳಿಸಿದ್ರಂತೆ ಆದ್ರೆ ಪುನಃ ಮತ್ತೆ ಕಂಪನಿಗಳು ಅಕ್ರಮವಾಗಿ ಕೇಬಲ್ ಅಳವಡಿಕೆ ಮಾಡಿದೆ.

ಇದರಿಂದ ಗರಂ ಆಗಿರೊ ಬೆಸ್ಕಾಂ ಅಧಿಕಾರಿಗಳು ಸ್ವತಃ ಕಂಪನಿಗಳಿಗೆ 8ದಿನದ ಒಳಗಾಗಿ ಕೇಬಲ್  ತೆರವುಗೊಳಿಸುವಂತೆ ಸೂಚನೆ ನೀಡಿದ್ದು ತೆರವುಗೊಳಿಸದೇ ಇದ್ದಲ್ಲಿ ಎಪ್‌ಐಆರ್ ಹಾಕುವ ಎಚ್ಚರಿಕೆ ನೀಡಿದ್ದಾರೆ.ಒಟ್ನಲ್ಲಿ ಹಲವಾರು ವರ್ಷಗಳಿಂದ ಬೆಸ್ಕಾಂ ಕಂಬಗಳಮೇಲೆ‌ ನೇತಾಡುತ್ತಿದ್ದ ಅನಧಿಕೃತ ಒಎಪ್‌ಸಿ ಕೇಬಲ್ ಗಳಿಗೆ ಮುಕ್ತಿನೀಡಲು ಬೆಸ್ಕಾಂ ನಿರ್ಧರಿಸಿದ್ದು.ಬೆಸ್ಕಾಂ ನ ಸೂಚನೆಯಂತೆ ಕಂಪನಿಗಳು ಕಂಬಗಳಮೇಲಿನ  ಅನಧಿಕೃತ ಕೇಬಲ್‌ಗಳನ್ನ ತೆರವುಗೊಳಿಸ್ತಾರಾ ಎನ್ನೊದನ್ನ ಕಾದು ನೋಡಬೇಕಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News