ಬೆಂಗಳೂರಿನ ವಿವಿಧೆಡೆ ಇಂದು ನೀರು ಬರಲ್ಲ: ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

Bangalore News: ರಾಜ್ಯ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ನಾಳೆ ಮುಂಜಾನೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಮಾಹಿತಿ ನೀಡಿದೆ. 

Written by - Yashaswini V | Last Updated : Jan 22, 2025, 11:08 AM IST
  • ಬೆಂಗಳೂರಿನ ವಿವಿಧೆಡೆ ಇಂದು ನೀರು ಬರಲ್ಲ
  • ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
  • ಬೆಂಗಳೂರು ಜಲ ಮಂಡಳಿಯಿಂದ ಮಾಹಿತಿ
ಬೆಂಗಳೂರಿನ ವಿವಿಧೆಡೆ ಇಂದು ನೀರು ಬರಲ್ಲ:  ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ  title=

Bangalore News: ಮುಖ್ಯ ಪೈಪ್ ಲೈನ್ನ ನೀರು ನಿಲುಗಡೆ ಕಾಮಗಾರಿ ಹಿನ್ನಲೆಯಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂದಿನಿಂದ (ಬುಧವಾರ) ಗುರುವಾರ ಬೆಳಿಗ್ಗೆ 5 ಗಂಟೆವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲ ಮಂಡಳಿ ಮಾಹಿತಿ ನೀಡಿದೆ 

ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾದ್ ಮನೋಹರ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಲ್ಕನೇ ಹಂತದ ಕಾಮಗಾರಿ ಆರ್ಮಭವಾಗಲಿದೆ. 2ನೇ ಹೆಗ್ಗಣಹಳ್ಳಿಯಿಂದ ಜಿಕೆವಿಕೆ ಕಡೆಗೆ ಸಾಗುವ 1800 ಮಿ.ಮೀ. ವ್ಯಾಸ ನೀರಿನ ಮುಖ್ಯ ಕೊಳವೆಯ ನೀರು ನಿಲುಗಡೆ ಕಾಮಗಾರಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಜಲಮಂಡಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. 

ಇದನ್ನೂ ಓದಿ- ಬೆಂಗಳೂರು ಪೊಲೀಸರಿಗೆ ತಲೆನೋವಾದ ಸೈಬರ್ ವಂಚನೆ: ನಾನಾ ರೀತಿ ಜನರನ್ನು ವಂಚಿಸುತ್ತಿರುವ ಪಾತಕಿಗಳ ಬಗ್ಗೆ ಎಚ್ಚರ, ಎಚ್ಚರ! 

ಯಾವ್ಯಾವ ಏರಿಯಾಗಳಲ್ಲಿ ನೀರು ಬರಲ್ಲ?
ಬೆಂಗಳೂರು ಜಲಮಂಡಳಿ ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿ ಉಲ್ಲೇಖಿಸಲಾದ ಪ್ರದೇಶಗಳಲ್ಲಿ ಇಂದಿನಿಂದ ನಾಳೆ ಬೆಳಿಗ್ಗೆವರೆಗೂ ಕಾವೇರಿ ನೀರು ಬರುವುದಿಲ್ಲ. 
>> ಆರ್.ಆರ್.ನಗರ, ಐಡಿಯಲ್ ಹೋಮ್ಸ್, ಕೆಂಚೇನಹಳ್ಳಿ, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ನಾಗದೇವನಹಳ್ಳಿ,
>> ಮರಿಯಪ್ಪನಪಾಳ್ಯ, ನಾಗರಬಾವಿ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ,
>> ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮೀ ದೇವಿನಗರ, ಲಗ್ಗೆರೆ, ಪೀಣ್ಯ ಕೈಗಾರಿಕಾ ಪ್ರದೇಶ, 
>> ಪೀಣ್ಯ, ಟಿ.ದಾಸರಹಳ್ಳಿ, ಹೆಚ್ಎಂಟಿ ಲೇಔಟ್, ಬಾಗಲಗುಂಟೆ, ಅಬ್ಬಿಗೆರೆ, ಬ್ಯಾಟರಾಯನಪುರ,
>> ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಯಲಹಂಕ ಓಲ್ಡ್ & ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಜಾಲಹಳ್ಳಿ,
>> ಬಿಇಎಲ್ ರಸ್ತೆ, ಮುತ್ಯಾಲನಗರ, ಜೆ.ಪಿ.ಪಾರ್ಕ್, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್, ಸುಬ್ರಹ್ಮಣ್ಯನಗರ,
>> ಗಾಯತ್ರಿನಗರ, ಜೆ.ಸಿ.ನಗರ, ಕುರುಬರಹಳ್ಳಿ, ನಂದಿನಿ ಲೇಔಟ್, ಪ್ರಕಾಶನಗರ, ಗೊರಗುಂಟೆಪಾಳ್ಯ,
>> ಕಾಮಾಕ್ಷಿಪಾಳ್ಯ, ಬಸವೇಶ್ವನಗರ, ಶಿವನಹಳ್ಳಿ, ಮಂಜುನಾಥನಗರ, ಶಂಕರಮಠ,
>> ಮಹಾಲಕ್ಷ್ಮೀಪುರಂ, ಶಂಕರನಗರ, ಕಮಲಾನಗರ, ವಿಜಯನಗರ, ಆರ್‌ಪಿಸಿ ಲೇಔಟ್, 
>> ಚೋಳರಪಾಳ್ಯ, ಹಂಪಿನಗರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್

ಇದನ್ನೂ ಓದಿ- ಅಯೋಧ್ಯೆಯ ಬಾಲರಾಮ ಮೂರ್ತಿಗೆ ಶಿಲೆ ನೀಡಿದ ನಮ್ಮ ಹಾರೋಹಳ್ಳಿಯಲ್ಲೂ ಇಂದು ರಾಮದೇಗುಲ ನಿರ್ಮಾಣ ಆರಂಭ!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News