ಅಂಗೈನಲ್ಲೇ ಪೊಲೀಸ್ ರಕ್ಷಕ : ಆ್ಯಪ್ ಮೂಲಕ ಪೊಲೀಸ್ ಸೇವೆ, ಇದು ದೇಶದಲ್ಲೇ ಮೊದಲು

ದೇಶದಲ್ಲೆ ಮೊದ‌ಲ ಬಾರಿಗೆ ವಿಡಿಯೋ ಕಾಲ್ ಮೂಲಕ ನಾಗರೀಕರಿಗೆ ಪೊಲೀಸರು ನೆರವು ಒದಗಿಸುತ್ತಿರುವ ಹೆಮ್ಮೆ ಸಿಲಿಕಾನ್ ಸಿಟಿ ಪೊಲೀಸರದ್ದಾಗಿದೆ. ಸೆಫ್ಟಿ ಐ ಲ್ಯಾಂಡ್ ರೀತಿ ಇನ್ಮುಂದೆ ಮೊಬೈಲ್ ಪೋನ್ ಅಲ್ಲೆ ಸೇಫ್ಟಿ ಐ ಲ್ಯಾಂಡ್ ಸೌಲಭ್ಯ ಸಿಗಲಿದೆ.

Written by - VISHWANATH HARIHARA | Edited by - Krishna N K | Last Updated : Jul 10, 2024, 05:15 PM IST
    • ವಿಡಿಯೋ ಕಾಲ್ ಮೂಲಕ ನಾಗರೀಕರಿಗೆ ಪೊಲೀಸರ ನೆರವು
    • ಹೊಸ ಪ್ರಯೋಗಕ್ಕೆ ಮುಂದಾದ ಸಿಲಿಕಾನ್ ಸಿಟಿ ಪೊಲೀಸ್‌
    • ದೇಶದಲ್ಲೆ ಮೊದ‌ಲ ಬಾರಿಗೆ ವಿಡಿಯೋ ಕಾಲ್ ಮೂಲಕ ಸೇವೆ
ಅಂಗೈನಲ್ಲೇ ಪೊಲೀಸ್ ರಕ್ಷಕ : ಆ್ಯಪ್ ಮೂಲಕ ಪೊಲೀಸ್ ಸೇವೆ, ಇದು ದೇಶದಲ್ಲೇ ಮೊದಲು title=

ಬೆಂಗಳೂರು : ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲು ಆಗಾಗ ಹೊಸಹೊಸ ಪ್ರಯೋಗಗಳನ್ನು ಮಾಡ್ತಾರೆ. ಈಗ ಮತ್ತೆ ತುರ್ತು ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಅತೀ ಬೇಗನೆ ಸ್ಪಂದಿಸಲು ಈಡೀ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹಾಗಾದ್ರೆ ಅದೇನೂ ಅಂತೀರಾ. ಈ ಸ್ಟೋರಿ ನೋಡಿ.

ಯೆಸ್... ದೇಶದಲ್ಲೆ ಮೊದ‌ಲ ಬಾರಿಗೆ ವಿಡಿಯೋ ಕಾಲ್ ಮೂಲಕ ನಾಗರೀಕರಿಗೆ ಪೊಲೀಸರು ನೆರವು ಒದಗಿಸುತ್ತಿರುವ ಹೆಮ್ಮೆ ಸಿಲಿಕಾನ್ ಸಿಟಿ ಪೊಲೀಸರದ್ದಾಗಿದೆ. ಸೆಫ್ಟಿ ಐ ಲ್ಯಾಂಡ್ ರೀತಿ ಇನ್ಮುಂದೆ ಮೊಬೈಲ್ ಪೋನ್ ಅಲ್ಲೆ ಸೇಫ್ಟಿ ಐ ಲ್ಯಾಂಡ್ ಸೌಲಭ್ಯ ಸಿಗಲಿದೆ. ಯಾವುದೇ ತುರ್ತು ಸಮಯದಲ್ಲಿ ಪೊಲಿಸ್ ಇಲಾಖೆಯ ಕೆಎಸ್‌ಪಿ ಸೆಪ್ಟಿ ಐ ಲ್ಯಾಂಡ್ ಸೌಲಭ್ಯವನ್ನ ಬೆಂಗಳೂರು ಪೊಲೀಸ್ರು ದೇಶಕ್ಕೆ ಪರಿಚಯಿಸಿದ್ದಾರೆ.

ಇದನ್ನೂ ಓದಿ:ಸ್ವಿಮ್ಮಿಂಗ್ ಪೂಲ್ ಗೆ ಚಿನ್ನಾಭರಣ ಧರಿಸಿ ಹೋಗುವ ಮುನ್ನ ಎಚ್ಚರ: ನಿಮ್ಮ ಚಿನ್ನಾಭರಣ ಕಳ್ಳತನವಾಗಬಹುದು..!

ಈ ಆ್ಯಪ್ ಮೂಲಕ ಯಾವುದೆ ತುರ್ತು ಸಂದರ್ಭದಲ್ಲಿ ನಾಗರೀಕರು ಈ ಸೌಲಭ್ಯವನ್ನ ಪಡೆಯಬಹುದಾಗಿದೆ. ಈ ಸೌಲಭ್ಯದಲ್ಲಿ ಸಿಟಿ ಕಮಾಂಡ್ ಸೆಂಟರ್ ಸಿಬ್ಬಂದಿಯೊಂದಿಗೆ ನಾಗರೀಕರು ವಿಡಿಯೋ ಕಾಲ್ ಮೂಲಕ ಸಂಪರ್ಕ ಸಾಧಿಸಬಹುದು. ಟು ವೇ ವಿಡಿಯೋ ಕಾಲ್ ಮೂಲಕ ಪೊಲೀಸರ ಸಹಾಯ ಪಡೆದು ನೇರವಾಗಿ ಪೊಲೀಸರಿಗೆ ಘಟನಾ ಸ್ಥಳದ ಮಾಹಿತಿ ನೀಡಬಹುದು. 

ಇನ್ನೂ ಈ ರೀತಿಯ ಸೇವೆ ದೇಶದಲ್ಲೆ ಮೊದಲ‌ ಬಾರಿಗೆ ಆರಂಭ ಮಾಡಿದ ಕೀರ್ತಿ ನಗರ ಪೊಲೀಸರು ಸಲ್ಲಿಕೆಯಾಗುತ್ತೆ. ಈ ಸೇವೆ ಬೆಂಗಳೂರು ನಗರದಲ್ಲಿ‌ ಕಾರ್ಯ ನಿರ್ಹಸಲಿದ್ದು,‌ ಬೇರೆ ರಾಜ್ಯದ ಜನ ಸಂಪರ್ಕ ಮಾಡಿದರೆ ಆಯಾ ಜಿಲ್ಲಾ ಕಮಾಂಡ್ ಸೆಂಟರ್ ಗೆ ಕರೆ ವರ್ಗಾವಣೆ ಮಾಡೋ ವ್ಯವಸ್ಥೆಯನ್ನ ಮಾಡಲಾಗಿದೆ. ಈ ಸೇವೆ ಪಡೆಯಲು ಪ್ಲೇ ಸ್ಟೋರ್ ಮೂಲಕ KSP ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
SOS ಬಟನ್ ಪ್ರೆಸ್ ಮಾಡಿದ್ರೆ ಕಮಾಂಡ್ ಸೆಂಟರ್ ಗೆ ವಿಡಿಯೋ ಕಾಲ್ ಕನೆಕ್ಟ್ ಆಗಲಿದೆ. ವಿಡಿಯೋ ಕಾಲ್ ಸ್ವೀಕರಿಸಿ ಕಮಾಂಡ್ ಸೆಂಟರ್ ಸಿಬ್ಬಂದಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ನಂತರ ಕರೆ ಮಾಡಿದವರು ಇರುವಲ್ಲಿಗೆ ಹೊಯ್ಸಳ ವಾಹನ ಕಳುಹಿಸಲಿದ್ದಾರೆ. 

ಇದನ್ನೂ ಓದಿ:ಗುಡ್‌ ನ್ಯೂಸ್‌..! 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆ.ಪಿ.ಎಸ್.ಸಿಗೆ ಪ್ರಸ್ತಾವನೆ

ಇನ್ನೂ  ನಗರದಲ್ಲಿ ಸಂಚರಿಸುವ ಹೊಯ್ಸಳ ವಾಹನಗಳ ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತಿದೆ‌ ದೂರುದಾರರ ಮೊಬೈಲ್ ನಲ್ಲಿ ಹೊಯ್ಸಳ ವಾಹನ ಎಷ್ಟು ನಿಮಿಷಕ್ಕೆ ತಲುಪಲಿದೆ. ಯಾವ ರಸ್ತೆಯಲ್ಲಿ ಬರ್ತಿದೆ ಹಾಗೂ ಯಾವಾಗ ತಮ್ಮ ಲೊಕೇಶನ್ ತಲುಪುತ್ತೆ ಎಂಬ ಮಾಹಿತಿಯನ್ನ ನಾಗರಿಕರು ಪಡೆಯಬಹುದಾಗಿದೆ. ಹೊಯ್ಸಳ ವಾಹನ ಬೇರೆ ಲೊಕೇಶನ್ ಗೆ ಹೋಗುತ್ತಿದ್ದರೆ ತಕ್ಷಣ ಕರೆ ಮಾಡಿ ಸಾರ್ವಜನಿಕರು ತಾವಿರುವ ಜಾಗದ ಬಗ್ಗೆ ಮಾಹಿತಿ ನೀಡಿ ಕರೆಸಿಕೊಳ್ಳಬಹುದಾಗಿದೆ. 

ಈ ಹಿಂದೆ ನಗರ ಹಲವು ಕಡೆ ಸೆಫ್ಟಿ ಐಲ್ಯಾಂಡ್ ಮಾಡಿದ ಸಂದರ್ಭದಲ್ಲಿ ಅನೇಕ ಬಾರಿ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡಿದ್ದಾರೆ‌. ಇದರಿಂದ ಅನೇಕ ಕೇಸ್ ಗಳನ್ನು ಬಗೆಹರಿಸಿದ ನಿದರ್ಶನ ಉಂಟು. ಒಟ್ಟಿನಲ್ಲಿ ಬೆಂಗಳೂರು ಪೊಲೀಸರು ಜನಸ್ನೇಹಿ ಕೆಲಸ ಮಾಡಬೇಕು. ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಹಾಯಕ್ಕೆ ಬರಲು ಹೊಸ ಯೋಜನೆ ತಂದಿದ್ದು, ಇದು ಎಷ್ಟರ ಮಟ್ಟಿಗೆ ವರ್ಕ್ಔಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News