Bengaluru: ಯುಗಾದಿ ಹಬ್ಬಕ್ಕೆ ಬೈಕ್ ತೊಳೆದ ವ್ಯಕ್ತಿಗೆ 5,000 ದಂಡ..!

Drinking water problem: ಜಲಕ್ಷಾಮದ ಮಧ್ಯೆ ಎಚ್ಚರಿಕೆ ವಹಿಸದೆ ಕುಡಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ಹಾಕಲಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

Written by - Puttaraj K Alur | Last Updated : Apr 9, 2024, 04:59 PM IST
  • ಬೆಂಗಳೂರಿನಲ್ಲಿ ಯುಗಾದಿ ಹಬ್ಬಕ್ಕೆ ಬೈಕ್‌ ತೊಳದೆ ವ್ಯಕ್ತಿಗೆ 5,000 ದಂಡ!
  • ಅನಗತ್ಯವಾಗಿ ಕಾವೇರಿ ನೀರು ಬಳಸದಂತೆ ಬೆಂಗಳೂರಿಗರಿಗೆ ಜಲಮಂಡಳಿ ಸೂಚನೆ
  • ನಿಯಮ ಉಲ್ಲಂಘಿಸಿ ನೀರು ಪೋಲು ಮಾಡಿದ್ರೆ ಬೀಳುತ್ತೆ ಭಾರೀ ದಂಡ
Bengaluru: ಯುಗಾದಿ ಹಬ್ಬಕ್ಕೆ ಬೈಕ್ ತೊಳೆದ ವ್ಯಕ್ತಿಗೆ 5,000 ದಂಡ..! title=
ಬೈಕ್‌ ತೊಳೆದ ವ್ಯಕ್ತಿಗೆ ದಂಡ!

ಬೆಂಗಳೂರು: ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಸೇರಿದಂತೆ ಮನಬಳಕೆಗೆ ನೀರಿನ ಕೊರತೆಯುಂಟಾಗಿದೆ. ಹೀಗಾಗಿ ಅನಗತ್ಯವಾಗಿ ನೀರು ಪೋಲು ಮಾಡದಂತೆ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅನಗತ್ಯವಾಗಿ ಕಾವೇರಿ ನೀರನ್ನು ಬಳಸದಂತೆ ಬೆಂಗಳೂರಿನ ಜನತೆಗೆ ಜಲಮಂಡಳಿ ಖಡಕ್‌ ಸೂಚನೆ ನೀಡಿದೆ.

ಅನಗತ್ಯವಾಗಿ ನೀರು ಬಳಕೆ ಮಾಡುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಕಾರು, ಬೈಕ್‌ ತೊಳೆಯುವುದು ಸೇರಿದಂತೆ ಅನಗತ್ಯ ಕೆಲಸಕ್ಕೆ ಹೆಚ್ಚು ನೀರು ಬಳಸುವಂತಿಲ್ಲವೆಂದು ನಿಯಮ ಜಾರಿಗೆ ತರಲಾಗಿದೆ. ಆದರೆ ಜಲಮಂಡಳಿಯ ಈ ನಿಯಮವನ್ನು ಉಲ್ಲಂಘಿಸಿ ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ 5,000 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುತ್ತಿತ್ತು: ಯೋಗಿ ಆದಿತ್ಯನಾಥ್

ಜಲಕ್ಷಾಮದ ಮಧ್ಯೆ ಎಚ್ಚರಿಕೆ ವಹಿಸದೆ ಕುಡಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ಹಾಕಲಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನಸಾಮಾನ್ಯರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಮಳೆ ಬಾರದ ಹಿನ್ನೆಲೆ ರಾಜ್ಯದಲ್ಲಿ ಹೊಳೆ, ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು, ಜಲ ಸಂಕಷ್ಟ ಎದುರಾಗಿದೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ನೀರು ಬಳಕೆ ಮಾಡುವಂತೆ ಸಲಹೆ ನೀಡಲಾಗಿದೆ. 

ಇದನ್ನೂ ಓದಿ: ಮತದಾನ ಜಾಗೃತಿ ಕಾರ್ಯಕ್ರಮ : ರಾಷ್ಟ್ರ ಮುನ್ನೆಡಸಲು ಮತ ಚಲಾಯಿಸಿ, ಚುನಾವಣಾ ರಾಯಭಾರಿ ನಟ ರಮೇಶ್ ಅರವಿಂದ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News