Bengaluru Karaga: ಬೆಂಗಳೂರಿನಲ್ಲಿ ಈ ಬಾರಿ ಜರುಗಲಿದೆ ಅದ್ದೂರಿ ಕರಗ ಉತ್ಸವ

ಬೆಂಗಳೂರು ಕರಗ ಉತ್ಸವ ಇತಿಹಾಸ ಪೂರ್ವದಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷದಂತೆ ಕರಗ ಶಕ್ತೋಸ್ತವ ದಿನದಂದು ತಾಯಿಯ ಮೆರವಣಿಗೆ ನಡೆಯಲಿ- ಮುಸ್ಲಿಂ ಧರ್ಮಗುರುಗಳ ಮನವಿ 

Written by - Yashaswini V | Last Updated : Apr 7, 2022, 11:28 AM IST
  • ಏ.16ರಂದು‌ ಕರಗ ಉತ್ಸವ
  • ಮೊದಲು ಧರ್ಮರಾಯ ದೇಗುಲ ಪ್ರದಕ್ಷಿಣೆ ಹಾಕಲಿರುವ ತಾಯಿಯ ಮೆರವಣಿಗೆ
  • ಬೆಂಗಳೂರು ಕರಗ ಉತ್ಸವದ ರೂಟ್ ಮ್ಯಾಪ್ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ
Bengaluru Karaga: ಬೆಂಗಳೂರಿನಲ್ಲಿ ಈ ಬಾರಿ ಜರುಗಲಿದೆ ಅದ್ದೂರಿ ಕರಗ ಉತ್ಸವ title=
Bengaluru Karaga Route Map

ಬೆಂಗಳೂರು: ಕರೋನಾ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಸರಳವಾಗಿ ಜರುಗಿದ್ದ"ಬೆಂಗಳೂರು ಕರಗ" ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆ ಜೋರಾಗಿದೆ. 

ಇನ್ನು ಈ ವರ್ಷ  ಹಿಜಾಬ್, ಹಲಾಲ್ ಸಂಘರ್ಷದ ಹಿನ್ನೆಲೆಯಲ್ಲಿ ಬೆಂಗಳೂರು ಕರಗ ಉತ್ಸವದ ಮೇಲೂ ಹಿಂದೂ-ಮುಸ್ಲಿಂ ಸಂಘರ್ಷದ ಕರಿನೆರಳಿನ ಭೀತಿ ಆವರಿಸುವ ಮುನ್ನವೇ ಎಚ್ಚೆತ್ತಿರುವ ಮುಸ್ಲಿಂ ಧರ್ಮಗುರುಗಳು, ಬುಧವಾರದಂದು (ಏಪ್ರಿಲ್ 07) ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಪ್ರತೀ ವರ್ಷದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ (Mastan Sab Darga) ಕರಗ ತರುವಂತೆ ಮನವಿ ಮಾಡಿದರು. 

ಬೆಂಗಳೂರು ಕರಗ ಉತ್ಸವ (Bengaluru Karaga Utsava) ಇತಿಹಾಸ ಪೂರ್ವದಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷದಂತೆ ಕರಗ ಶಕ್ತೋಸ್ತವ ದಿನದಂದು ತಾಯಿಯ ಮೆರವಣಿಗೆ ನಡೆಯಲಿ. ಅದರಂತೆ ಪ್ರತಿ ವರುಷದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ ತಾಯಿ ಆಗಮಿಸಲಿ ಎಂದು ನಾವು ಮನವಿ ಮಾಡಿದ್ದೇವೆ. ನಮ್ಮ ಪೂರ್ವಿಕರ ಕಾಲದಿಂದಲೂ ನಡೆದುಬಂದ ರೀತಿಯಲ್ಲಿಯೇ  ಕರಗ ಜರುಗಲಿ. ಮುಸ್ಲಿಂ ಸಮುದಾಯದವರ ಸಹಕಾರ, ಪ್ರೀತಿ ಸದಾ ಇರಲಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ- Bengaluru Karaga: 4 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ಹಸಿಕರಗ ಮಂಟಪ ನಿರ್ಮಾಣ- ಎಸ್ ಆರ್ ವಿಶ್ವನಾಥ್

ಬೆಂಗಳೂರು  ಕರಗ ಉತ್ಸವ ಮೆರವಣಿಗೆ ರೂಟ್ ಮ್ಯಾಪ್ ಕೂಡ ಸಿದ್ದವಾಗಿದ್ದು, ಈ ಬಾರಿ ಕರಗ ಉತ್ಸವ ರೂಟ್ ಮ್ಯಾಪ್ ಹೇಗಿದೆ? ಯಾವ ಮಾರ್ಗವಾಗಿ ಕರಗ ಮೆರವಣಿಗೆ ತೆರಳಲಿದೆ ಎಂದು ತಿಳಿಯೋಣ...

ಇದನ್ನೂ ಓದಿ- ರೋಬೋಟಿಕ್ಸ್ ಪಕ್ಷಿಗಳ ಕಲವರ- ಮಕ್ಕಳ ಪಾಲಿಗೆ ಭರ್ಜರಿ ಖುಷಿ

ಕರಗ ಉತ್ಸವದ ರೂಟ್ ಮ್ಯಾಪ್:


*  ಏ.16ರಂದು‌ ಕರಗ ಉತ್ಸವ ತಾಯಿ ಮೆರವಣಿಗೆ

*  ಮೊದಲು ಧರ್ಮರಾಯ ದೇಗುಲ (Sri Dharmaraya Swamy Temple) ಪ್ರದಕ್ಷಿಣೆ ಹಾಕಲಿರುವ ತಾಯಿಯ ಮೆರವಣಿಗೆ 

*  ದೇಗುಲದ ರಸ್ತೆ ಮೂಲಕ ಕುಂಬಾರಪೇಟ್ ರೋಡ್

*  ಆನಂತರ ರಾಜ ಮಾರ್ಕೆಟ್ ಸರ್ಕಲ್ 

*  ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ

*  ಅಲ್ಲಿಂದ ಕೋಟೆ ಆಂಜನೇಯ ಸ್ವಾಮಿ ದೇಗುಲ ತೆರಳಲಿರುವ ಮೆರವಣಿಗೆ

*  ಬಳಿಕ ವಾಪಾಸ್ ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಪೊಲೀಸ್ ರೋಡ್ ಕಡೆಗೆ ಪಯಣ

*  ಕಾಟನ್ ಪೇಟ್ ಪೊಲೀಸ್ ಸ್ಟೇಷನ್ ರಸ್ತೆಯಿಂದ ಕಾಟನ್ ಪೇಟ್ ರಸ್ತೆಯಲ್ಲಿ ಮೆರವಣಿಗೆ

*  ಅಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಲಿರುವ ಕರಗ

*  ಮಸ್ತಾನ್ ಸಾಬ್ ದರ್ಗಾದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಬಳಿಕ ಬಳೇಪೇಟೆ ಸರ್ಕಲ್ ಗೆ ಆಗಮಿಸಲಿರುವ ಕರಗ ಉತ್ಸವ.

*  ಬಳಿಕ ಅಣ್ಣಮ್ಮ ದೇವಿಯ ದೇವಸ್ಥಾನದತ್ತ ಮೆರವಣಿಗೆ

*  ಕಬ್ಬನ್ ಪೇಟೆ ಮುಖ್ಯ ರಸ್ತೆಯ ಮೂಲಕ ವಾಪಾಸ್ ಶ್ರೀ ಧರ್ಮರಾಯ ಸ್ವಾಮಿ ದೇಗುಲ ಪ್ರವೇಶ ಮಾಡಲಿರುವ ಕರಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News