ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಫ್ರೆಂಚ್ ಕಲಿಕೆ! ರೋಶನಿ ಯೋಜನೆಗೆ ಸಿಎಂ ಚಾಲನೆ

ಮುಂದಿನ ಐದು ವರ್ಷಗಳಲ್ಲಿ 156 ಬಿಬಿಎಂಪಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ರೋಶನಿ ಯೋಜನೆ ಅಡಿಯಲ್ಲಿ ಫ್ರಾನ್ಸ್ ಶಿಕ್ಷಕರಿಂದ ಫ್ರೆಂಚ್ ಕಲಿಯಲಿದ್ದಾರೆ.

Last Updated : Sep 26, 2018, 06:06 PM IST
ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಫ್ರೆಂಚ್ ಕಲಿಕೆ! ರೋಶನಿ ಯೋಜನೆಗೆ ಸಿಎಂ ಚಾಲನೆ title=
ರೋಶನಿ ಯೋಜನೆಗೆ ಚಾಲನೆ ನೀಡಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ವಿಶ್ವದಲ್ಲೇ ಮೊದಲ ಬಾರಿಗೆ 21ನೇ ಶತಮಾನದ ಕಲಿಕಾ ವಿಧಾನವನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ-ಕಾಲೇಜುಗಳಲ್ಲಿ 'ರೋಶನಿ ಯೋಜನೆ' ಅಡಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಂಟ್-ಗಾರ್ಡೆ ಸಹಯೋಗದಲ್ಲಿ ಹಮ್ಮಿಕೊಂಡಿರುವ 'ರೋಶನಿ ಯೋಜನೆ'ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿ.ಪರಮೇಶ್ವರ್, "ಪಾಲಿಕೆ ಶಾಲೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಪಾಠ ಮಾಡುವ ವಿಧಾನ ಬದಲಾಗಿಯೇ ಇಲ್ಲ. ಆದರೆ ನಾವು ಈಗ ಅದನ್ನು ಬದಲಾಯಿಸಲು ಬಯಸಿದ್ದೇವೆ. ಆ ಮೂಲಕ ಖಾಸಗಿ ಶಾಲೆಗಳ ಜತೆಗೆ ಸ್ಪರ್ಧೆ ನಡೆಸಬಹುದು" ಎಂದರು.

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಡಿಯಲ್ಲಿ ಈ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದ್ದು, ಮೈಕ್ರೋಸಾಫ್ಟ್ ಕಂಪನಿಯು ಸುಮಾರು 600 ಕೋಟಿ ರೂ. ಹಣ ಹೂಡಿಕೆ ಮಾಡಿ, ಕಟ್ಟಡ, ಸುರಕ್ಷತೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯದ ಹೊಣೆ ಹೊರಲಿದೆ. ಮುಂದಿನ ಐದು ವರ್ಷಗಳಲ್ಲಿ 156 ಬಿಬಿಎಂಪಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ರೋಶನಿ ಯೋಜನೆ ಅಡಿಯಲ್ಲಿ ಫ್ರಾನ್ಸ್ ಶಿಕ್ಷಕರಿಂದ ಫ್ರೆಂಚ್ ಕಲಿಯಲಿದ್ದಾರೆ.

Trending News