ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಕುಸಿದುಬಿದ್ದ ಕಾರ್ಪೊರೇಟರ್‌

ಸಭೆಯ ವೇಳೆ ಉಸಿರಾಟದ ಸಮಸ್ಯೆಗೆ ತುತ್ತಾದ ಮಹಿಳಾ ಕಾರ್ಪೊರೇಟರ್.

Last Updated : Jul 6, 2018, 06:01 PM IST
ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಕುಸಿದುಬಿದ್ದ ಕಾರ್ಪೊರೇಟರ್‌  title=

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ವೇಳೆ ಮಹಿಳಾ ಕಾರ್ಪೊರೇಟರ್ ಕುಸಿದುಬಿದ್ದ ಘಟನೆ ನಡೆದಿದೆ.

ಬಿಬಿಎಂಪಿಯಲ್ಲಿ ಇಂದು ಮುಂಜಾನೆಯಿಂದ ಕೌನ್ಸಿಲ್ ಸಭೆ ನಡೆಯುತ್ತಿತ್ತು. ಈ ವೇಳೆ ಉಸಿರಾಟದ ಸಮಸ್ಯೆಗೆ ತುತ್ತಾದ ವಾರ್ಡ್ ನಂಬರ್ 106ರ ಕಾರ್ಪೊರೇಟರ್ ರೂಪಾ ಲಿಂಗೇಶ್ವರ್ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದರು. ತಕ್ಷಣ ಅವರಿಗೆ ಬಿಬಿಎಂಪಿ ವೈದ್ಯರಿಂದ ತುರ್ತು ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಮೇಯರ್ ಸಂಪತ್ ರಾಜ್ ತಮ್ಮ ಕಾರಿನಲ್ಲಿ ಮಲ್ಯ ಆಸ್ಪತ್ರೆಗೆ ಕರೆದೊಯ್ದರು.

ರೂಪಾ ಲಿಂಗೇಶ್ವರ್ ರಾಜ್ ಕುಮಾರ್ ವಾರ್ಡ್ ಪಾಲಿಕೆ ಸದಸ್ಯೆ.

Trending News