ವಿವಾದಿತ ಈದ್ಗಾ ಮೈದಾನ ಮತ್ತೆ ಮುನ್ನೆಲೆಗೆ: ಮೂಲ ಮಾಲೀಕತ್ವದ ಬಗ್ಗೆ ದಾಖಲೆ ನೀಡಲು ವಕ್ಫ್ ಬೋರ್ಡ್‌ಗೆ ಸೂಚನೆ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮೂಲ ಮಾಲೀಕರು ಮಾತ್ರ ನಮಗೆ ಸೂಕ್ತ ದಾಖಲೆ ಸಲ್ಲಿಕೆ ಮಾಡಿ ಮಾಲೀಕತ್ವ ಸಾಬೀತು ಪಡಿಸಲಿ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸೂಚನೆ ನೀಡಿದ್ದಾರೆ.

Written by - Manjunath Hosahalli | Edited by - Zee Kannada News Desk | Last Updated : Jun 30, 2022, 01:10 PM IST
  • ವಿವಾದಿತ ಈದ್ಗಾ ಮೈದಾನ ಮತ್ತೆ ಮನ್ನಲೆಗೆ
  • ಮೂಲ ಮಾಲೀಕತ್ವದ ದಾಖಲೆ ನೀಡಲು ವಕ್ಫ್ ಬೋರ್ಡ್‌ಗೆ ಸೂಚನೆ
  • ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ
ವಿವಾದಿತ ಈದ್ಗಾ ಮೈದಾನ ಮತ್ತೆ ಮುನ್ನೆಲೆಗೆ: ಮೂಲ ಮಾಲೀಕತ್ವದ ಬಗ್ಗೆ ದಾಖಲೆ ನೀಡಲು ವಕ್ಫ್ ಬೋರ್ಡ್‌ಗೆ ಸೂಚನೆ title=
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮೂಲ ಮಾಲೀಕರು ಮಾತ್ರ ನಮಗೆ ಸೂಕ್ತ ದಾಖಲೆ ಸಲ್ಲಿಕೆ ಮಾಡಿ ಮಾಲೀಕತ್ವ ಸಾಬೀತು ಪಡಿಸಲಿ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಒಮ್ಮೆ ದಕ್ಷಿಣ, ಮತ್ತೊಮ್ಮೆ ಉತ್ತರ! ಇದು ಸಿದ್ದು ಟೂರಿಂಗ್ ಟಾಕೀಸ್: ಬಿಜೆಪಿ

ಅಲ್ಲದೇ.. ಚಾಮರಾಜಪೇಟೆಯ ಮೈದಾನ ಬಿಬಿಎಂಪಿ ಸ್ವತ್ತಲ್ಲ ಎನ್ನುವ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಕ್ಫ್ ಬೋರ್ಡ್ ಬಳಿ ದಾಖಲೆ ಇದ್ದರೆ ಖಾತಾ ಮಾಡಿ ಕೊಡಲಾಗುವುದು. ದಾಖಲೆ ಇದ್ದರೆ ನೀಡಿ ಎಂದು ನಾನು ಹೇಳಿದ್ದೇನೆ ಹೊರತು ಸ್ವತ್ತು ಎಂದು ಹೇಳಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಈದ್ಗಾ ಮೈದಾನದ ಬಗ್ಗೆ ಸದ್ಯ ಸುಪ್ರೀಂ ಕೋರ್ಟಿನ ಆದೇಶ ಪ್ರಕಾರ ಮಕ್ಕಳ ಕ್ರೀಡಾ ಚಟುವಟಿಕೆ ಹಾಗೂ ಮುಸ್ಲಿಮರ ಪ್ರಾರ್ಥನೆಗೆ  ಮಾತ್ರ ಅವಕಾಶ ಇದೆ ಎಂದು ಮಾಹಿತಿ ನೀಡಿದರು.

ವಕ್ಫ್ ಬೋರ್ಡ್ ನಿಂದ ಇದುವರೆಗೂ ಬಿಬಿಎಂಪಿಗೆ ದಾಖಲೆ‌ ನೀಡಿಲ್ಲ;

1965 ರಲ್ಲಿ ವಕ್ಫ್ ಬೋರ್ಡ್ ಒಂದು ಅಧಿಸೂಚನೆ ಮಾಡಿದೆ. ಇದು ಸುನ್ನಿ ಬೋರ್ಡ್ ಗೆ ಸೇರಿದ‌ ಜಾಗ ಎಂದೂ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಇದೂವರೆಗೂ ಇದು ನಮ್ಮ‌ಜಾಗ ಎಂದು ವಕ್ಫ್ ಬೋರ್ಡ್ ಸಹ ಬಿಬಿಎಂಪಿಗೆ ದಾಖಲೆ ನೀಡಿಲ್ಲ. 1974ರಲ್ಲಿ ಸಮೀಕ್ಷೆ ನಡೆದಾಗಲೂ ವಕ್ಫ್ ಬೋರ್ಡ್ ಆಕ್ಷೇಪಣೆ ಸಲ್ಲಿಸಿಲ್ಲ. ಮಾಲೀಕರು ಯಾರೇ ಇದ್ದರೂ ಕಾನೂನು ಬದ್ಧವಾಗಿ ಖಾತಾ ಮಾಡಿಕೊಡುತ್ತೇವೆ ಎಂದರು.

ಮುಸ್ಲಿಮರ ಪ್ರಾರ್ಥನೆ  ನಿಲ್ಲಿಸಲು ಸಾಧ್ಯವಿಲ್ಲ:

ಖಾತಾ ಮಾಡುವಾಗ ಅಳೆತೆ, ಯಾರ ಹೆಸರಲ್ಲಿ ಮೂಲ ದಾಖಲೆ ಇದೆಯೋ, ಅವುಗಳನ್ನ ಪರಿಶೀಲಿಸಿ, ಇದು ಅವರದ್ದೇ ಅಂತ ಸಾಬೀತು ಆದ್ರೆ ಅವರ ಹೆಸರಿಗೆ ಬಿಬಿಎಂಪಿಯಿಂದ ಖಾತಾ ಮಾಡಿಕೊಡುತ್ತೇವೆ. ಅಲ್ಲದೆ, ಈದ್ಗಾ ಮೈದಾನದಲ್ಲಿ ಮುಸ್ಲಿಮರ ಪ್ರಾರ್ಥನೆ  ನಿಲ್ಲಿಸಲು ಸಾಧ್ಯವಿಲ್ಲ ಎಂದು ತುಷಾರ್ ಗಿರಿನಾಥ್ ಉತ್ತರಿಸಿದರು.

ಶಾಸಕ ಜಮೀರ್ ಅಹ್ಮದ್ ಜೊತೆ ಯಾವುದೇ ಡೀಲ್ ಮಾಡಿಲ್ಲ:

ಶಾಸಕ ಜಮೀರ್ ಅಹ್ಮದ್ ಜೊತೆ ಡೀಲ್ ಮಾಡಿಕೊಂಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, ನಾನು ಯಾರ ಜೊತೆಯೂ ಡೀಲ್ ಮಾಡಿಕೊಂಡಿಲ್ಲ. ಆಧಾರ ರಹಿತ ಆರೋಪಗಳನ್ನು ಯಾರು ಸಹ ಮಾಡಬಾರದು ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು.

ಇದನ್ನೂ ಓದಿ: 24/7 ಹೋಟೆಲ್ ತೆರೆಯಲು ಪೊಲೀಸರ ಗ್ರೀನ್ ಸಿಗ್ನಲ್: ಈ ಸ್ಥಳಗಳಲ್ಲಿ ಮಾತ್ರ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News