ಮಾರುಕಟ್ಟೆಗಳ ವಿಕೇಂದ್ರೀಕರಣ ಫಿಕ್ಸ್, ಲಾಕ್ ಡೌನ್ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದೇನು?

Bangalore lockdown: ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೋವಿಡ್ ಸಂಖ್ಯೆ ಮತ್ತಷ್ಟು ಏರಿಕೆ ಆಗೋದು ಖಚಿತ. ಸೋಂಕು ತಡೆಯಲು ಮಾಸ್ಕ್ ಬಳಸಬೇಕಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

Edited by - Zee Kannada News Desk | Last Updated : Jan 12, 2022, 02:49 PM IST
  • ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ
  • ಕೋವಿಡ್ ಸಂಖ್ಯೆ ಮತ್ತಷ್ಟು ಏರಿಕೆ ಆಗೋದು ಖಚಿತ
  • ಸೋಂಕು ತಡೆಯಲು ಮಾಸ್ಕ್ ಬಳಸಬೇಕಾಗಿದೆ
  • ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ
ಮಾರುಕಟ್ಟೆಗಳ ವಿಕೇಂದ್ರೀಕರಣ ಫಿಕ್ಸ್, ಲಾಕ್ ಡೌನ್ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದೇನು? title=
ಗೌರವ್ ಗುಪ್ತಾ

ಬೆಂಗಳೂರು: ಸರ್ಕಾರದಿಂದ ಟಫ್ ರೂಲ್ಸ್ ವಿಸ್ತರಣೆ ಹಿನ್ನೆಲೆ ನಗರದಲ್ಲಿ ಜನಸಂದಣಿ ಪ್ರದೇಶಗಳಿಗೆ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಿದೆ. 

ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta), ಸದ್ಯಕ್ಕೆ ಅಕ್ಕ ಪಕ್ಕದ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುತ್ತೇವೆ. ಸದ್ಯಕ್ಕೆ ಮಾರುಕಟ್ಟೆ ಸುತ್ತಮುತ್ತ 1ರಿಂದ ಅರ್ಧ ಕಿಮೀ ಒಳಗೆ ಮಾರುಕಟ್ಟೆ ವಿಕೇಂದ್ರಿಕರಣ ಆಗಲಿದೆ ಎಂದು ಹೇಳಿದ್ದಾರೆ. 

ನ್ಯಾಷನಲ್ ಕಾಲೇಜು ಸೇರಿದಂತೆ ಓಪನ್ ಜಾಗಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಈ ಬಗ್ಗೆ ಶೀಘ್ರ ಪೊಲೀಸರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.  

ಇದನ್ನೂ ಓದಿ: Mekedatu Project Dispute: ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆ

ಸದ್ಯಕ್ಕೆ ಲಾಕ್ ಡೌನ್ (Lockdown) ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಲಾಕ್ ಡೌನ್ (Bangalore lockdown) ಬಗ್ಗೆ ಪ್ರಸ್ತಾಪ ಬೇಡ. ಕೋವಿಡ್ ಸಂಖ್ಯೆ ಮತ್ತಷ್ಟು ಏರಿಕೆ ಆಗೋದು ಖಚಿತ. ಸೋಂಕು ತಡೆಯಲು ಮಾಸ್ಕ್ (Mask)ಬಳಸಬೇಕಾಗಿದೆ ಎಂದು ಹೇಳಿದ್ದಾರೆ. 

ಜನರ ಓಡಾಟ ಮತ್ತಷ್ಟು ಕಡಿಮೆ ಆಗಬೇಕಾಗಿದೆ. ಅಪಾರ್ಟ್ಮೆಂಟ್ ಮಾಲಿಕರು, ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ. 

ಬಿಯು ನಂಬರ್ (BU Number) ತಡವಾಗುತ್ತಿದೆ ಎಂಬ ಆರೋಪ‌ ವಿಚಾರವಾಗಿ ಮಾತನಾಡಿದ ಅವರು, ಸಕಾಲದಲ್ಲಿ ಜನರೇಟ್ ಆಗುತ್ತಿದೆ. ಯಾವುದೇ ತೊಂದರೆ ನಮ್ಮಲ್ಲಿ ಆಗಿಲ್ಲ. ಕಂಟೈನ್ಮೆಂಟ್ ಜೋನ್ (Containment Zone) ಸಂಖ್ಯೆ ಏರಿಕೆಯಾಗಿದೆ. ನಗರದಲ್ಲಿ ಮತ್ತಷ್ಟು ‌ಎನ್ಫೋರ್ಸ್ಮೆಂಟ್ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ. 

 

 

ಎರಡನೇ ಅಲೆಗೆ ಹೋಲಿಕೆ ಮಾಡಿದ್ರೆ ಜನ ಹೆಚ್ಚು ಆಸ್ಪತ್ರೆಗಳಿಗೆ ದಾಖಲಾಗ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆ ಇಲ್ಲ. ಕೋವಿಡ್ ಕೇರ್ ಸೆಂಟರ್ ಗೂ ಜನ ಬರ್ತಿಲ್ಲ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ವನು ಎಂದು ಹೇಳಿದ್ದಾರೆ. 

ಸೋಂಕು ಹೆಚ್ಚು ಪ್ರಬಲವಾಗಿಲ್ಲ. ಜನ ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಸೋಂಕಿತರು ನಗರದಲ್ಲಿ ಕಾಣಬಹುದು. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ. 

ಇದನ್ನೂ ಓದಿ: ಮನೆಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳು ಅಂದರ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News