ಗೋಲ್ಡ್‌ನಲ್ಲಿ ವಿಶ್ವಕಪ್ ಟ್ರೋಫಿ ಮಿನಿಯೇಚರ್ ಕೆತ್ತಿದ ಬೆಂಗಳೂರು ಗೋಲ್ಡ್‌ಸ್ಮಿತ್!

ಎಲ್ಲರ ಗಮನ ವಿಶ್ವಕಪ್ ಮೇಲೆ ಇರುವುದರಿಂದ ಇದನ್ನು ನಾನು ತಯಾರಿಸಿದೆ. ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಿದೆ ಎಂದು ಟ್ರೋಫಿಯ ಮಿನಿಯೇಚರ್ ಸಿದ್ಧಪಡಿಸಿರುವ ನಾಗರಾಜ್ ರೇವಂಕರ್ ತಿಳಿಸಿದ್ದಾರೆ.

Last Updated : Jul 3, 2019, 04:17 PM IST
ಗೋಲ್ಡ್‌ನಲ್ಲಿ ವಿಶ್ವಕಪ್ ಟ್ರೋಫಿ ಮಿನಿಯೇಚರ್ ಕೆತ್ತಿದ ಬೆಂಗಳೂರು ಗೋಲ್ಡ್‌ಸ್ಮಿತ್!  title=
Pic Courtesy: ANI

ಬೆಂಗಳೂರು: ಎಲ್ಲಿ ನೋಡಿದರೂ ವಿಶ್ವಕಪ್ ಹವಾ... ಇಡೀ ರಾಷ್ಟ ವಿಶ್ವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಎದುರುನೋಡುತ್ತಿರುವಾಗಲೇ ಬೆಂಗಳೂರು ಮೂಲದ ಅಕ್ಕಸಾಲಿಗರೊಬ್ಬರು ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವಿಶೇಷ ಮಾರ್ಗವನ್ನು ಆರಿಸಿಕೊಂಡಿದ್ದಾರೆ. 

ಭಾರತ ತಂಡ ಸೆಮಿಫೈನಲ್ಸ್'ನತ್ತ ಮುನ್ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಅಕ್ಕಸಾಲಿಗ ನಾಗರಾಜ್ ರೇವಂಕರ್ ಎಂಬುವರು ಚಿನ್ನದಲ್ಲಿ ವಿಶ್ವಕಪ್ ಟ್ರೋಫಿಯ ಮಿನಿಯೇಚರ್ ಕೆತ್ತುವ ಮೂಲಕ ಟೀಂ ಇಂಡಿಯಾಗೆ ಗೌರವ ಸಲ್ಲಿಸಿದ್ದಾರೆ. ಅಷ್ಟಕ್ಕೂ ಈ ಮಿನಿಯೇಚರ್ ತಯಾರಿಸಲು ನಾಗರಾಜ್ ಬಳಸಿಕೊಂಡಿರುವ ಚಿನ್ನ ಎಷ್ಟು ಅಂತ ಕೇಳಿದ್ರೆ ಅಚ್ಚರಿಯಾಗುವುದು ಖಂಡಿತ... 

"ಕೇವಲ 0.490 ಗ್ರಾಂ ಚಿನ್ನವನ್ನು ಬಳಸಿಕೊಂಡು ವಿಶ್ವಕಪ್ ಟ್ರೋಫಿ ಮಿನಿಯೇಚರ್ ಸಿದ್ಧಪಡಿಸಲಾಗಿದ್ದು, ಇದು 1.5 ಸೆಂ.ಮೀ. ಎತ್ತರವಿದೆ. ಎಲ್ಲರ ಗಮನ ವಿಶ್ವಕಪ್ ಮೇಲೆ ಇರುವುದರಿಂದ ಇದನ್ನು ನಾನು ತಯಾರಿಸಿದೆ. ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಅನ್ನೋ ಭರವಸೆಯಿದೆ. ಈಗಾಗಲೇ ವಿಶ್ವಕಪ್ ಟ್ರೋಫಿಯ ಮಿನಿಯೇಚರ್ ನೋಡಲು ಸಾಕಷ್ಟು ಜನ ಪ್ರತಿನಿತ್ಯ ಬರುತ್ತಿದ್ದಾರೆ. ನನಗೆ ಬಹಳ ಖುಷಿಯಾಗಿದೆ" ಎಂದು ನಾಗರಾಜ್ ರೇವಂಕರ್ ಎಎನ್ಐಗೆ ತಿಳಿಸಿದ್ದಾರೆ. 

ಪ್ರಸ್ತುತ ಎಂಟು ಪಂದ್ಯಗಳಿಂದ 13 ಅಂಕಗಳೊಂದಿಗೆ ಭಾರತ ಟೂರ್ನಮೆಂಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡವು ಮಂಗಳವಾರ ಬಾಂಗ್ಲಾದೇಶವನ್ನು 28 ರನ್‌ಗಳಿಂದ ಸೋಲಿಸಿ ಪಂದ್ಯಾವಳಿಯ ಸೆಮಿಫೈನಲ್ ಹಂತಕ್ಕೆ ತಲುಪುವ ಮೂಲಕ ಭಾರತ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ. 

ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೂರ್ನಿಯಲ್ಲಿ 544 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ವಿಶ್ವಕಪ್‌ನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂಶರ್ಮಾ ಪಾತ್ರರಾಗಿದ್ದಾರೆ. ವಿಶ್ವ ಕಪ್ ಮುಂದಿನ ಪಂದ್ಯವನ್ನು ಭಾರತ ಜುಲೈ 6ರಂದು ಶ್ರೀಲಂಕಾ ವಿರುದ್ಧ ಸೆಣಸಲಿದೆ. 
 

Trending News