ಬೆಂಗಳೂರು : ಅವರೆಲ್ಲಾ ನಂಬರ್ ಪ್ಲೇಟ್ ಗಳನ್ನ ಮರೆಮಾಚಿ ಸಂಚಾರಿ ಪೊಲೀಸರಿಗೆ ಯಾಮಾರಿಸುತ್ತಿದ್ರು. ಸವಾರರ ಕಳ್ಳಾಟದ ಬಗ್ಗೆ ಜೀ ಕನ್ನಡ ನ್ಯೂಸ್ ವರದಿ ಪ್ರಸಾರ ಮಾಡ್ತಿದ್ದಂಗೆ ಟ್ರಾಫಿಕ್ ಪೊಲೀಸರು ಮೆಗಾ ಆಪರೇಷನ್ ಕೈಗೊಂಡಿದ್ದಾರೆ. ಬರೋಬ್ಬರಿ ಒಂದು ಲಕ್ಷ ಜನರಿಗೆ ಬಿಸಿ ಮುಟ್ಟಿಸಿದ್ದಾರೆ.
ನಂಬರ್ ಪ್ಲೇಟ್ ಗಳಿಗೆ ಗಮ್ ಟೇಪ್ ಅಂಟಿಸಿ ಯಾಮಾರಿಸುತ್ತಿದ್ರು. ನಂಬರ್ ಪ್ಲೇಟ್ ಗಳಿಗೆ ಮಾಸ್ಕ್ ಹಾಕಿ ಸಂಚಾರಿ ಪೊಲೀಸರಿಗೆ ವಂಚಿಸುತ್ತಿದ್ರು. ಈ ರೀತಿಯಲ್ಲಿ ಕಳ್ಳಾಟ ಆಡ್ತಿದ್ದವರ ವಿರುದ್ಧ ಜೀ ಕನ್ನಡ ನ್ಯೂಸ್ ರಿಯಾಲಿಟಿ ಚೆಕ್ ಮಾಡಿ ವರದಿ ಪ್ರಸಾರ ಮಾಡ್ತಿದ್ದಂಗೆ ನಗರದ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಗರದ ಮೂಲೆ ಮೂಲೆಯಲ್ಲಿ ಆಪರೇಷನ್ ಮಾಡಿ 1 ಲಕ್ಷ ಮಂದಿಗೆ ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ:ಜನರೇ ನಮ್ಮ ಪಾಲಿನ ದೇವರು, ಅವರ ಸೇವೆಗೆ ನಾವು ಸದಾ ಬದ್ಧ
ದೋಷ ಪೂರಿತ ನಂಬರ್ ಪ್ಲೇಟ್ ಗಳ ವಿರುದ್ಧ ನಗರದ ಮೂಲೆ ಮೂಲೆಯಲ್ಲಿ ಸಂಚಾರಿ ಪೊಲೀಸರು ಮೆಗಾ ಆಪರೇಷನ್ ಮಾಡಿದ್ದಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದಲ್ಲದೆ, ಸಿಸಿಟಿವಿಗಳಲ್ಲಿ ತಮ್ಮ ವಾಹನದ ನಂಬರ್ ಸೆರೆಯಾಗಬಾರ್ದು ಅನ್ನೋ ಕಾರಣಕ್ಕೆ ನಂಬರ್ ಪ್ಲೇಟ್ ಗಳಿಗೆ ಗಮ್ ಟೇಪ್ ಅಂಟಿಸುತ್ತಿದ್ರು. ಸವಾರರ ಕಳ್ಳಾಟದ ಬಗ್ಗೆ ಜೀ ಕನ್ನಡ ನ್ಯೂಸ್ ಕೂಡ ನವೆಂಬರ್ 6 ರಂದು ವರದಿ ಪ್ರಸಾರ ಮಾಡಿತ್ತು. ಇದೀಗ ಬರೋಬ್ಬರಿ 1,13,517 ವಾಹನಗಳ ಮೇಲೆ ಕೇಸ್ ಬಿದ್ದಿವೆ.
ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ ಬರೋಬ್ಬರಿ 1,13,517 ಸವಾರರ ಮೇಲೆ ಕೇಸ್ ಹಾಕಿದ್ರೆ, ನಂಬರ್ ಪ್ಲೇಟ್ ಇಲ್ಲದ 1535 ವಾಹನ ಹಾಗೂ ಈ ರೀತಿಯಲ್ಲಿ ಕಳ್ಳಾಟ ಆಡಿದ 22 ಮಂದಿಯ ಮೇಲೆ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿವೆ.
ಇದನ್ನೂ ಓದಿ:"ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣ"
ಒಟ್ಟಿನಲ್ಲಿ ಇಷ್ಟು ದಿನ ವಿವಿಧ ಟೆಕ್ನಿಕಲ್ ಯೂಸ್ ಮಾಡ್ಕೊಂಡು ಸಂಚಾರಿ ಪೊಲೀಸರನ್ನ ಯಾಮಾರಿಸುತ್ತಿದ್ದವರಿಗೆ ಕಡೆಗೂ ಬಿಸಿ ಮುಟ್ಟಿಸಲಾಗಿದೆ. ಇನ್ನೂ ಕೂಡ ನಗರದಲ್ಲಿ ಇದೇ ರೀತಿಯಲ್ಲಿ ನಂಬರ್ ಪ್ಲೇಟ್ ಮರೆ ಮಾಚಿ ಓಡಾಡ್ತಿದ್ದು, ಅಂತವರಿಗೂ ಬಿಸಿ ಮುಟ್ಟಿಸುವ ಕೆಲಸ ಆಗಬೇಕಾಗಿದೆ.
ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.