ಕಾಂಗ್ರೆಸ್‌ನಲ್ಲಿನ ಅಸಮಾಧಾನಿತರನ್ನು ಎದುರಿಸಲು ಆಪರೇಷನ್ ಬೆದರಿಕೆ

ಕಾಂಗ್ರೆಸ್‌ನಲ್ಲಿನ ಅಸಮಾಧಾನಿತರನ್ನು ಎದುರಿಸಲು ಆಪರೇಷನ್ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ 135 ಸೀಟ್ ಬಂದಿದ್ದು, ಬಿಜೆಪಿ, ಜೆಡಿಎಸ್ ಶಾಸಕರ ಅವಶ್ಯಕತೇ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಆಪರೇಷನ್‌ ಕಾಂಗ್ರೆಸ್‌ ಕುರಿತು ಪ್ರತಿಕ್ರಿಯೆ ನೀಡಿದರು.

Written by - Krishna N K | Last Updated : Aug 22, 2023, 04:49 PM IST
  • ಕಾಂಗ್ರೆಸ್ ಪಕ್ಷಕ್ಕೆ 135 ಸೀಟ್ ಬಂದಿದ್ದು, ಬಿಜೆಪಿ, ಜೆಡಿಎಸ್ ಶಾಸಕರ ಅವಶ್ಯಕತೇ ಇಲ್ಲ.
  • ಕಾಂಗ್ರೆಸ್‌ನಲ್ಲಿನ ಅಸಮಾಧಾನಿತರನ್ನು ಎದುರಿಸಲು ಆಪರೇಷನ್ ಬೆದರಿಕೆ ಹಾಕಲಾಗುತ್ತಿದೆ.
  • ಆಪರೇಷನ್‌ ಕಾಂಗ್ರೆಸ್‌ ವಿಚಾರವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಕಾಂಗ್ರೆಸ್‌ನಲ್ಲಿನ ಅಸಮಾಧಾನಿತರನ್ನು ಎದುರಿಸಲು ಆಪರೇಷನ್ ಬೆದರಿಕೆ title=

ಬೆಳಗಾವಿ : ಕಾಂಗ್ರೆಸ್ ಪಕ್ಷಕ್ಕೆ 135 ಸೀಟ್ ಬಂದಿದ್ದು, ಬಿಜೆಪಿ, ಜೆಡಿಎಸ್ ಶಾಸಕರ ಅವಶ್ಯಕತೇ ಇಲ್ಲ. ಕಾಂಗ್ರೆಸ್‌ನಲ್ಲಿನ ಅಸಮಾಧಾನಿತರನ್ನು ಎದುರಿಸಲು ಆಪರೇಷನ್ ಬೆದರಿಕೆ ಹಾಕಲಾಗುತ್ತಿದೆ ಅಂತ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಆಪರೇಷನ್‌ ಕಾಂಗ್ರೆಸ್‌ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿನ ಅಸಮಾಧಾನಿತರನ್ನು ಎದುರಿಸಲು ಆಪರೇಷನ್ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ 135 ಸೀಟ್ ಬಂದಿದ್ದು, ಬಿಜೆಪಿ, ಜೆಡಿಎಸ್ ಶಾಸಕರ ಅವಶ್ಯಕತೇ ಇಲ್ಲ ಎಂದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ಮಾದರಿಯ ವಿಮಾನ ಪತನ!

ಕಾಂಗ್ರೆಸ್ ಪಕ್ಷದಲ್ಲಿ ಪತ್ರ ಸಮರ, ಶಾಸಕರ ಜಗಳ ಸೇರಿ ಏನೆನೋ ನಡೆಯುತ್ತಿದೆ. ತಮ್ಮ ಶಾಸಕರನ್ನು ಹೆದರಿಸಲು ಈ ರೀತಿ ಮಾಡುತ್ತಿರಬಹುದು. ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆ ತರುತ್ತೇವೆಂದು ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಶಾಸಕನ ಅವಶ್ಯಕತೆಯೂ ಇಲ್ಲ ಎಂದು ಆಪರೇಷನ್‌ ಕಾಂಗ್ರೆಸ್‌ ವಿಚಾರವನ್ನು ಅಲ್ಲಗಳೆದರು.

ಹೋದ ಬಾರಿ ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲೆ ಆರಂಭವಾಗಿ ಒಂದು ವರ್ಷ ನಂತರ ಸ್ಫೋಟವಾಗಿತ್ತು. ಈಗ ಕಾಂಗ್ರೆಸ್ ಮುಖಂಡರು ಈಗಲೇ ಎಚ್ಚೆತ್ತುಕೊಂಡು ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆತರುತ್ತೇವೆಂದು ಹೆದರಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾವೇರಿ ಸೇರಿದಂತೆ ಜಲ ವಿವಾದ, ಅಣೆಕಟ್ಟೆಗಳ ನೀರು ಪರಿಸ್ಥಿತಿ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ..!

ಇನ್ನು ಮಹಾರಾಷ್ಟ್ರದಲ್ಲಿ ಆದಂತೆ ರಾಜ್ಯದಲ್ಲೂ ಬಿಜೆಪಿ ಕಡೆ ಅಸಮಾಧಾನಿತ ಕಾಂಗ್ರೆಸ್ ಶಾಸಕರು ಬರುತ್ತಿದ್ದಾರಾ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಅವರು ಒಳ್ಳೆಯ ರೀತಿ ಸರ್ಕಾರ ನಡೆಸಲಿ, ಅವರಿಗೆ ತೊಂದರೆ ಕೊಟ್ಟು ನಾವ್ಯಾಕೆ ಕೆಟ್ಟು ಹೆಸರು ತಗೋಬೇಕು? ಎಂದು ಪ್ರಶ್ನೆ ಮಾಡಿದರು.

ಆರು ತಿಂಗಳಲ್ಲಿ ಈ ಸರ್ಕಾರ ಪತನಗೊಳ್ಳುತ್ತೆ ಎಂಬ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರ ಲೆಕ್ಕಾಚಾರ ಏನಿದೆ ನಮಗೆ ಗೊತ್ತಿಲ್ಲ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿ. ಐದು ವರ್ಷಕ್ಕೆ ಈ ಎಲ್ಲ ಗ್ಯಾರಂಟಿ ಯೋಜನೆಗಳಿಗೆ 3 ಲಕ್ಷ ಕೋಟಿ ಬೇಕು. ಒಂದು ಬಜೆಟ್ ಹಣ ಗ್ಯಾರಂಟಿಗಳಿಗೆ ಬಳಸಬೇಕಾಗುತ್ತದೆ. ಕಾಂಗ್ರೆಸ್ನ ನವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಬಾಲಚಂದ್ರ ವ್ಯಂಗ್ಯವಾಡಿದರು.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News