ಅತ್ತಿಬೆಲೆ ಪಟಾಕಿ ದುರಂತ: ಬೆಂಗಳೂರಿನ 12 ಪಬ್, ಬಾರ್‌ಗಳಿಗೆ ಬೀಗ..! 

Bengaluru fire incident: ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್‍ ಸೇರಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ‌ ನೇತೃತ್ವದಲ್ಲಿ ಶುಕ್ರವಾರ ತಪಾಸಣೆ ನಡೆಸಲಾಗಿದೆ.

Written by - Puttaraj K Alur | Last Updated : Oct 21, 2023, 11:59 AM IST
  • ಬೆಂಗಳೂರಿನಲ್ಲಿ ಸುರಕ್ಷತೆ ಇಲ್ಲದ 12 ಪಬ್ ಮತ್ತು ಬಾರ್‍ಗಳಿಗೆ ಬೀಗ ಜಡಿದ ಬಿಬಿಎಂಪಿ
  • ಪಬ್, ಬಾರ್ ಮತ್ತು ರೆಸ್ಟೋರೆಂಟ್‍ ಪರಿಶೀಲಿಸಿದ ಬಿಬಿಎಂಪಿ ಅಧಿಕಾರಿಗಳಿಂದ ನೋಟಿಸ್ ಜಾರಿ
  • ಪೂರ್ವ ವಲಯದಲ್ಲಿ 7, ಮಹದೇವಪುರದಲ್ಲಿ 3 & ಬೊಮ್ಮನಹಳ್ಳಿಯಲ್ಲಿ 2 ಪಬ್ ಮತ್ತು ಬಾರ್‍ಗಳಿಗೆ ಬೀಗ
ಅತ್ತಿಬೆಲೆ ಪಟಾಕಿ ದುರಂತ: ಬೆಂಗಳೂರಿನ 12 ಪಬ್, ಬಾರ್‌ಗಳಿಗೆ ಬೀಗ..!  title=
12 ಪಬ್ ಮತ್ತು ಬಾರ್‍ಗಳಿಗೆ ಬೀಗ!

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಮತ್ತು ಬೆಂಗಳೂರಿನಲ್ಲಿ ಸರಣಿ ಅಗ್ನಿ ಅವಘಡ ಘಟನೆಗಳ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಸುರಕ್ಷತೆ ಇಲ್ಲದ 12 ಪಬ್ ಮತ್ತು ಬಾರ್‍ಗಳಿಗೆ ಬೀಗ ಜಡಿದಿದೆ.  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ 12 ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಬಿಬಿಎಂಪಿ ಮುಚ್ಚಿದೆ.

ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಖುದ್ದು ಪರಿಶೀಲಿಸಿದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್‍ ಸೇರಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ‌ ನೇತೃತ್ವದಲ್ಲಿ ಶುಕ್ರವಾರ ತಪಾಸಣೆ ನಡೆಸಲಾಗಿದೆ. ಪೂರ್ವ ವಲಯದಲ್ಲಿ 7, ಮಹದೇವಪುರದಲ್ಲಿ 3 ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 2 ಪಬ್ ಮತ್ತು ಬಾರ್‍ಗಳಿಗೆ ಬೀಗ ಹಾಕಲಾಗಿದೆ.

ಇದನ್ನೂ ಓದಿ: ಸಿ.ಟಿ ರವಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವೇಣುಗೊಪಾಲ್

ನ್ಯೂನ್ಯತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದ್ದು, ಈ ಪೈಕಿ‌ 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, 12 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ ಎಂದು ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾಹಿತಿ ನೀಡಿದ್ದಾರೆ.

ಕ್ರಮ ಸಂಖ್ಯೆ ವಲಯ ಪರವಾನಿಗೆ ನೀಡಿರುವ ಸಂಖ್ಯೆ ತಪಾಸಣೆ ನಡೆಸಿರುವ ಸಂಖ್ಯೆ ನೋಟಿಸ್ ನೀಡಿರುವ ಸಂಖ್ಯೆ ಮುಚ್ಚಿರುವ ಸಂಖ್ಯೆ
1 ದಕ್ಷಿಣ 248 30 10 00
2 ಪಶ್ಚಿಮ 167 78 20 00
3 ಪೂರ್ವ 222 25 18 07
4 RR ನಗರ 75 08 06 00
5 ದಾಸರಹಳ್ಳಿ 34 29 08 00
6 ಯಲಹಂಕ 110 18 00 00
7 ಮಹದೇವಪುರ 161 36 16 03
8 ಬೊಮ್ಮನಹಳ್ಳಿ 101 08 08 02
ಒಟ್ಟು   1118 232 86 12

ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯ ಬನಶಂಕರಿಯಲ್ಲಿ ಈಶ್ವರಪ್ಪ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News