ವಿಧಾನಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಏಪ್ರಿಲ್ 24 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ.

Last Updated : Apr 17, 2018, 11:03 AM IST
ವಿಧಾನಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ title=

ಬೆಂಗಳೂರು: ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 24 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ಕೆಲ ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಅಭ್ಯರ್ಥಿಗಳು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ನಾಮಪತ್ರ ಸಲ್ಲಿಕೆಗೆ ಷರತ್ತುಗಳು: 

  • ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ.
  • ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಯ ಜೊತೆಯಲ್ಲಿ ಐವರು ಬೆಂಬಲಿಗರಿಗೆ ಅವಕಾಶ.
  • ನಾಮಪತ್ರ ಸಲ್ಲಿಸಲು ಒಬ್ಬ ಅಭ್ಯರ್ಥಿ ಕೇವಲ ಮೂರು ವಾಹನಗಳ ಜೊತೆ ಮಾತ್ರ ಬರಬೇಕು.
  • ನಾಮಪತ್ರ ಸಲ್ಲಿಸುವವರು ಬೇರೆ ಕ್ಷೇತ್ರದ ಅಭ್ಯರ್ಥಿ ಆಗಿದ್ದರೆ, ಎರಡು ರೀತಿಯ ಅಫಿಡವಿಟ್ ಸಲ್ಲಿಸಬೇಕು.
  • ಅರ್ಜಿಯಲ್ಲಿ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ. ಇಲ್ಲದಿದ್ದರೆ ನಾಮಪತ್ರ ತಿರಸ್ಕೃತಗೊಳ್ಳುತ್ತದೆ.
  • ನಾಮಪತ್ರ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಐದು ಸಾವಿರ ಹಣ ಠೇವಣಿ ಇಡಬೇಕು.
  • ಇತರೆ ವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತು ಸಾವಿರ ಡೆಪಾಸಿಟ್ ಹಣ ಕಟ್ಟಬೇಕು.
  • ಅಭ್ಯರ್ಥಿಗಳು ಹೊಸ ಬ್ಯಾಂಕ್ ಅಕೌಂಟ್ ತೆರೆದು, ಅಲ್ಲಿಂದಲೇ ಹಣ ಖರ್ಚು ಮಾಡಬೇಕು.

Trending News