ಚಾಮರಾಜನಗರ: ಕಾಡುಗಳ್ಳ, ನರಹಂತಕ ವೀರಪ್ಪನ್ ಹಾವಳಿ ಇಟ್ಟಿದ್ದ, ಅಡಗು ತಾಣವಾಗಿದ್ದ ಈ ಪ್ರದೇಶ ಈಗ ಅಪ್ಪಟ ದೇಶಭಕ್ತರ ನೆಲೆಯಾಗಿದೆ. ನಿವೃತ್ತ ಸೈನಿಕರು ಗ್ರಾಮದ ಅಕಾಡೆಮಿ ಸ್ಥಾಪಿಸಿ ಖಡಕ್ ಮೇಷ್ಟ್ರಾಗಿದ್ದಾರೆ. ಹನೂರು ತಾಲೂಕಿನ ಕಾಡಂಚಿನ ಗ್ರಾಮ ಮಾರ್ಟಳ್ಳಿ ಸೈನಿಕರ ಊರಾಗಿದ್ದು ಹಾಲಿ ಸೇನೆಯಲ್ಲಿ 58 ಮಂದಿ ಹಾಗೂ ನಿವೃತ್ತ ಸೈನಿಕರು 65 ಮಂದಿ ಇದ್ದು 1965 ರ ಇಂಡೋ ಪಾಕ್ ಯುದ್ಧ, 1972 ರ ಬಾಂಗ್ಲಾ ವಿಮೋಚನೆ, ಆಪರೇಷನ್ ಬ್ಲೂ ಸ್ಟಾರ್, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಆ ಹೊತ್ತಿನಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ ಸೈನಿಕರು ಗ್ರಾಮದಲ್ಲಿದ್ದು ಎರಡನೆಯ ಮಹಾಯುದ್ಧದಲ್ಲಿ ಮಡಿದ ಇಬ್ಬರು ಸೈನಿಕರ ಪತ್ನಿಯರು ಈ ಊರಲ್ಲಿದ್ದಾರೆ. ಗ್ರಾಮದ ಮಾಣಿಕ್ಯಂ ಎಂಬವರು ಸೇನೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಮಗ ಅರುಣ್ ಸೆಲ್ವ ಕುಮಾರ್( ಸುಬೇದಾರ್) ಅವರನ್ನು ಸೇನೆಗೆ ಸೇರಿಸಿದ್ದಾರೆ. ನವೀನ್ ಕುಮಾರ್ ಹಾಗೂ ಜಗನ್ ಎಂಬ ಸಹೋದರರು ದೇಶ ಕಾಯುತ್ತಿದ್ದಾರೆ ಹೀಗೆ ಸೇನೆಗೂ ಇಲ್ಲಿನ ಜನರಿಗೂ ಗಟ್ಟಿಯಾದ ಸಂಬಂಧ ಮೂಡಿದ್ದು ಯುವಕರ ದೇಶಪ್ರೇಮಕ್ಕೆ ನಿವೃತ್ತ ಸೈನಿಕರು ನೀರೆರೆಯುತ್ತಿದ್ದಾರೆ.
ಇದನ್ನೂ ಓದಿ : Bangalore Crime : ಕೊಟ್ಟಿದ್ದು ಕೋಟಿ ಕೋಟಿ ವರದಕ್ಷಿಣೆ : ಅನುಭವಿಸಿದ್ದು ನರಕಯಾತನೆ!
ಅಕಾಡೆಮಿ ಸ್ಥಾಪಿಸಿದ ಸೈನಿಕರು :
ಮಾರ್ಟಳ್ಳಿ ಈ ಹಿಂದೆ ಭಾರತೀಯ ಸೇನೆಯ ಮದ್ರಾಸ್ (ಈರೋಡ್) ರೆಜಿಮೆಂಟ್ನ ಒಂದು ಭಾಗವಾಗಿತ್ತು. ಇದು ಕೊಳ್ಳೇಗಾಲ ಮತ್ತು ಮಲೆ ಮಹದೇಶ್ವರ ಬೆಟ್ಟದ ನಡುವಿನ ದೊಡ್ಡ ಹಳ್ಳಿಯಾಗಿದೆ. ಕರ್ನಾಟಕ ರಾಜ್ಯದ ರಚನೆಯ ನಂತರ, ಮಾರ್ಟಳ್ಳಿ ರಾಜ್ಯಕ್ಕೆ ಸೇರಿಕೊಂಡಿತು. ಕೆಲ ವರ್ಷಗಳ ಹಿಂದೆ ನಿವೃತ್ತ ಸೈನಿಕರು ಸೇರಿಕೊಂಡು ಟ್ರಸ್ಟ್ ವೊಂದನ್ನು ರಚಿಸಿಕೊಂಡಿದ್ದು ಈಗ ಸೈನಿಕ್ ಟ್ರೈನಿಂಗ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಸೇನೆ ಸೇರ ಬಯಸುವ ಯುವಕರಿಗೆ ಸೇನೆಯಲ್ಲಿ ನೀಡಲಾಗುವ ಕಠಿಣ ತರಬೇತಿಯನ್ನು ನಿವೃತ್ತ ಸೈನಿಕರಾದ ಸುಬೇದಾರ್ ಮರಿಯಾ ಜೋಸೆಫ್, ಹವಲ್ದಾರ್ ಮಾಣಿಕ್ಯಂ, ಹವಲ್ದಾರ್ ಅರುಣ್ ಕುಮಾರ್ ಹಾಗೂ ಹವಾಲ್ದಾರ್ ಬಾಲನ್ ಅವರುಗಳು ಗ್ರಾಮದ 60ಕ್ಕೂ ಹೆಚ್ಚು ಪಿಯು, ಎಸ್ ಎಸ್ ಎಲ್ಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಅಗ್ನವೀರ ರ್ಯಾಲಿ ಹಾಸನದಲ್ಲಿ ನಡೆಯುತ್ತಿದ್ದು ಭಾಗಿಯಾಗಿದ್ದ 28 ಮಂದಿಯಲ್ಲಿ 15 ಮಂದಿ ಮೆಡಿಕಲ್ ಹಾಗೂ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಅಗ್ನೀವೀರರಾಗಲು ಮುನ್ನುಗ್ಗುತ್ತಿದ್ದಾರೆ.
ಇದನ್ನೂ ಓದಿ : ‘ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ’: ಜಂಟಿ ಸಭೆ ನಡೆಸಿದ ಸಚಿವರು
ಇನ್ನು, ನಿವೃತ್ತ ಸೈನಿಕರು ನೀಡುವ ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು . ನಿವೃತ್ತ ಸೈನಿಕರು ಮತ್ತು ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುತ್ತಿರುವವರು ನೀಡಿದ ಹಣಕಾಸಿನ ಕೊಡುಗೆಯೊಂದಿಗೆ ಈ ಟ್ರಸ್ಟ್ ನಡೆಸಲಾಗುತ್ತಿದೆ. ಈ ಟ್ರಸ್ಟ್ ಸುಲ್ವಾಡಿ ಸರ್ಕಾರಿ ಆಸ್ಪತ್ರೆ ಬಳಿ ಒಂದು ಎಕರೆ ಭೂಮಿಯನ್ನು ರೂ. 2 ಲಕ್ಷ ರೂಪಾಯಿ ನೀಡಿ ಲೀಸ್ ಗೆ ಪಡೆದುಕೊಂಡಿದ್ದು ಮಾರ್ಟಳ್ಳಿ ಜಾಗೇರಿ, ಕೌದಳ್ಳಿ , ಜಲ್ಲಿಪಾಲ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಯುವಕರಿಗೆ ತರಬೇತಿ ನೀಡುತ್ತಿದೆ. ರಜೆಯ ಮೇಲೆ ಮಾರ್ಟಳ್ಳಿ ಗೆ ಬರುವ ಸೈನಿಕರು ಸಹ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ. ಇಲ್ಲಿ ಮಿಲಿಟರಿ ಶಿಬಿರದಂತೆಯೇ ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ ಎರಡು ತಾಸು ತರಬೇತಿಯನ್ನು ನೀಡಲಾಗುತ್ತಿದೆ. ಸೈನ್ಯದಲ್ಲಿ ಮಾಡುವಂತೆಯೇ ಯುವಕರ ಮಾನಸಿಕ ಕೌಶಲ್ಯಗಳನ್ನು ಸುಧಾರಿಸಲು ಪ್ರತಿದಿನ ಒಂದು ಗಂಟೆಯ ಬ್ರೀಫಿಂಗ್ ನಡೆಸಲಾಗುತ್ತಿದ್ದು ಭವಿಷ್ಯದಲ್ಲಿ ಈ ಭಾಗದ ನಗರ ಅದು ಯುವಕರು ಸೇನೆಗೆ ಸೇರುವ ಭರವಸೆ ಮೂಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.