ನೀವು ಕಾನೂನು ಪದವೀಧರರೇ? ಇಗೋ ನಿಮಗಿದೆ ಸುವರ್ಣಾವಕಾಶ...!

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ಎರಡು ವರ್ಷ ತರಬೇತಿ ನೀಡಲು ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.

Last Updated : Jul 29, 2020, 04:49 PM IST
ನೀವು ಕಾನೂನು ಪದವೀಧರರೇ? ಇಗೋ ನಿಮಗಿದೆ ಸುವರ್ಣಾವಕಾಶ...!  title=
file photo(facebook)

ಬೆಂಗಳೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ಎರಡು ವರ್ಷ ತರಬೇತಿ ನೀಡಲು ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಪರಿಶಿಷ್ಟ ವರ್ಗ (ಎಸ್.ಟಿ.)ಕ್ಕೆ ಸೇರಿರಬೇಕು ಹಾಗೂ 40 ವರ್ಷದೊಳಗಿರಬೇಕು. ವಾರ್ಷಿಕ ಆದಾಯ 2.50ಲಕ್ಷ ರೂ.ದೊಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಎರಡು ವರ್ಷ ಪೂರ್ವ ಕಾನೂನು ಪದವಿಯಲ್ಲಿ ಉತ್ತೀರ್ಣರಾಗಿರಬೇಕು. 2018-19 ಮತ್ತು 2019-20ನೇ ಸಾಲಿನಲ್ಲಿ ಅಂತಿಮ ಕಾನೂನು ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಡಿಸ್ಟ್ರಿಕ್ ಪಬ್ಲಿಕ್ ಪ್ರಾಸಿಕ್ಯೂಟರ್/ ಸರ್ಕಾರಿ ವಕೀಲರು ಅಥವಾ 15 ವರ್ಷಕ್ಕೂ ಮೇಲ್ಪಟ್ಟ ವಕೀಲ ವೃತ್ತಿಯನ್ನು ನಡೆಸಿದ ಖಾಸಗಿ ವಕೀಲರ ಬಳಿ ತರಬೇತಿಗೆ ನಿಯೋಜಿಸಸಲಾಗುವುದು ಹಾಗೂ ಪ್ರತಿ ಮಾಹೆ 10 ಸಾವಿರ ರೂ. ಶಿಷ್ಯವೇತನ ಮಂಜೂರು ಮಾಡಲಾಗುವುದು.

ಅರ್ಹ ಕಾನೂನು ಪದವೀಧರರು ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಜನ್ಮ ದಾಖಲೆ ಪ್ರಮಾಣಪತ್ರ(ಎಸ್.ಎಸ್.ಎಲ್.ಸಿ. ಅಂಕಪಟ್ಟಿ), ತಾಲೂಕು ಮತ್ತು ಸ್ಟೇಟ್ ಬಾರ್ ಅಸೋಸಿಯೇಷನ್‍ನಲ್ಲಿ ಸದಸ್ಯತ್ವ ಪಡೆದ ಬಗ್ಗೆ ದೃಢೀಕರಣ ಪ್ರಮಾಣಪತ್ರ, ಕಾನೂನು ಪದವಿಯ ಅಂಕಪಟ್ಟಿಯೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 30-08-2020ರೊಳಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಆಡಳಿತ ಭವನ , ಸಿ ಬ್ಲಾಕ್ ರೂಂ ನಂ.38 ದೇವಗಿರಿ-ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಅಪೂರ್ಣ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ಅಧೀಕ್ಷಕ ತೇಜರಾಜ ಹಲಸಬಾಳ (ಮೊ.9632465161) ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ (ಮೊ.9141004596) ಗಳನ್ನು ಸಂಪರ್ಕಿಸಬಹುದು.

Trending News