ಗಲಾಟೆ ಮಧ್ಯೆ ರಾಮನಗರದ ಜೆಡಿಎಸ್ ಅಭ್ಯರ್ಥಿಯಾದ ಅನಿತಾ ಕುಮಾರಸ್ವಾಮಿ

ಗಲಾಟೆಯನ್ನೂ ಲೆಕ್ಕಿಸದೆ ಅನಿತಾ ಹೆಸರನ್ನು ಘೋಷಿಸಿದ ರಾಮನಗರ ಜೆಡಿಎಸ್ ತಾಲೂಕು ಮುಖಂಡರು.  

Last Updated : Oct 9, 2018, 12:19 PM IST
ಗಲಾಟೆ ಮಧ್ಯೆ ರಾಮನಗರದ ಜೆಡಿಎಸ್ ಅಭ್ಯರ್ಥಿಯಾದ ಅನಿತಾ ಕುಮಾರಸ್ವಾಮಿ  title=
File image

ರಾಮನಗರ: ರಾಮನಗರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ವಾಗ್ವಾದದ ನಡುವೆಯೇ ಅನಿತಾ ಕುಮಾರಸ್ವಾಮಿ ಅವರನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಗಲಾಟೆಯನ್ನೂ ಲೆಕ್ಕಿಸದೆ ರಾಮನಗರ ಉಪಚಾನವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಹೆಸರನ್ನು ತಾಲೂಕು ಮುಖಂಡರು ಘೋಷಿಸಿದ್ದಾರೆ. ಇದಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರ ಸಮ್ಮತಿಯೂ ದೊರೆತಿದ್ದು, ಅಕ್ಟೋಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

2018ರ ಮೇ 12ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಬಳಿಕ ರಾಮನಗರದ ಶಾಸಕ ಸ್ಥಾನಕ್ಕೆ  ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರು. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ರಾಮನಗರ ಕ್ಷೇತ್ರ ಸೇರಿದಂತೆ ನವೆಂಬರ್​ 3ರಂದು ಮೂರು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Trending News