ಬ್ಯಾಲೇಟ್ ಪೇಪರ್‌ನಲ್ಲಿ ಯುವಕನ ವಿಭಿನ್ನ ಕೋರಿಕೆ: ಮತದಾನ ಎಣಿಕೆ ವೇಳೆ ಸಿಕ್ತು ಲೆಟರ್‌!

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬವರು ಈ ಪತ್ರ ಬರೆದ ವ್ಯಕ್ತಿ. "ಪೆಟ್ರೋಲ್ ಬೆಲೆ ಇಳಿಸಿ. ರಸಗೊಬ್ಬರ ಬೆಲೆ ಕಡಿಮೆ ಮಾಡಿ" ಎಂದೂ ಸಹ ಪತ್ರದಲ್ಲಿ ಬರೆದಿದ್ದಾರೆ. 

Written by - Bhavishya Shetty | Last Updated : Jun 16, 2022, 10:50 AM IST
  • ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಪತ್ರ ಪತ್ತೆ
  • ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ ಯುವಕ
  • ಬ್ಯಾಲೆಟ್‌ ಪೇಪರ್‌ನಲ್ಲಿ ಪತ್ರ ಬರೆದು ಮತಪೆಟ್ಟಿಗೆಗೆ ಹಾಕಿದ್ದಾನೆ
ಬ್ಯಾಲೇಟ್ ಪೇಪರ್‌ನಲ್ಲಿ ಯುವಕನ ವಿಭಿನ್ನ ಕೋರಿಕೆ: ಮತದಾನ ಎಣಿಕೆ ವೇಳೆ ಸಿಕ್ತು ಲೆಟರ್‌!  title=
letter on Ballet Paper

ಚಾಮರಾಜನಗರ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಸುವ ಸಂದರ್ಭದಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ಯುವಕನೋರ್ವ ರಾಜ್ಯ ನಾಯಕರ ಮುಂದೆ ವಿಭಿನ್ನ ಕೋರಿಕೆ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. 

ಇದನ್ನು ಓದಿ: Weight Loss Tips: ಜಿಮ್‌ಗೆ ಹೋಗಬೇಕಾಗಿಲ್ಲ, ಈ ತರಕಾರಿ ಸೇವಿಸಿದರೂ ಕಡಿಮೆ ಆಗುತ್ತೆ ತೂಕ

ಪತ್ರದಲ್ಲಿ ಏನಿದೆ: 
"ನಾನು ಎಂ.ಎ ಬಿ.ಎಡ್ ಮಾಡಿದ್ದೇನೆ. ಆದರೆ ನನಗೆ ಕೆಲಸ ಇಲ್ಲ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ ಇಲ್ಲ ಅಂದ್ರೆ ಜಮೀನಿನಲ್ಲಿ‌ ಕೊಳವೆ ಬಾವಿ ತೋಡಿಸಿಕೊಡಿ" ಎಂದು ಯುವಕನೋರ್ವ ಮುಖ್ಯಮಂತ್ರಿಗಳಿಗೆ ಬ್ಯಾಲೆಟ್‌ ಪೇಪರ್‌ನಲ್ಲಿ ಪತ್ರ ಬರೆದು ಅದನ್ನು ಮತಪೆಟ್ಟಿಗೆಯೊಳಗೆ ಹಾಕಿದ್ದಾನೆ. 

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬವರು ಈ ಪತ್ರ ಬರೆದ ವ್ಯಕ್ತಿ. "ಪೆಟ್ರೋಲ್ ಬೆಲೆ ಇಳಿಸಿ. ರಸಗೊಬ್ಬರ ಬೆಲೆ ಕಡಿಮೆ ಮಾಡಿ" ಎಂದೂ ಸಹ ಪತ್ರದಲ್ಲಿ ಬರೆದಿದ್ದಾರೆ. 

ಇದನ್ನು ಓದಿ: ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಡಿಸೇಲ್ ಕೊರತೆ..!

ದೇವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಭಕ್ತರು ಪತ್ರಗಳನ್ನು ಬರೆದು ಹಾಕುವುದನ್ನು ನಾವು ಕಂಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಬ್ಯಾಲೇಟ್ ಪೇಪರ್‌ನಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ಇನ್ನು ಈ ಪತ್ರವನ್ನು ಓದಿ ರಾಜ್ಯ ಸರ್ಕಾರ ಯುವಕನ ಕೋರಿಕೆಗಳನ್ನು ಈಡೇರಿಸುತ್ತಾ ಎಂಬದನ್ನು ಕಾದುನೋಡಬೇಕಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News